ನಮ್ಮ ಹಾರೈಕೆ ನಿಮಗೆ ಶ್ರೀರಕ್ಷೆ

ನಮ್ಮ ಹಾರೈಕೆ ನಿಮಗೆ ಶ್ರೀರಕ್ಷೆ

ನಾನೆಂಬುದಿದೆ ಎಂಬುದ ನೀ ಮರೆತು ನಡೆ

ನಾನು ನೀನೆಂಬುದಳಿಸಿ ನಾವೆಂಬುದನಿರಿಸಿ ನಡೆ

ನಿನ್ನೊಳು ಅವಳನಿರಿಸಿ ಅವಳೊಳು ನೀನೊಂದಾಗಿ ನಡೆ

ಅವಳ ನಡೆ ನುಡಿ ನೀನಾಗುವಂದದಲಿ ನಡೆ

ಅವಳು ನಿನ್ನವಳಾಗಿ ನೀನು ಅವಳವನಾಗುವಂದದಲಿ ನಡೆ

ನಿನ್ನ ಸರ್ವಸ್ವವನು ಅವಳಿಗಿತ್ತು ಅವಳ ಸಕಲವನು ನೀ ಪಡೆ

ಅವಳ ನೋವು -ನಲಿವ ನೀನುಂಡು ನಿನ್ನ ಸುಖ-ದುಃಖದಲಿ ಭಾಗವನಿತ್ತು ನಡೆ

ಅವಳೊಳು ನೀನಾಗಿ ನಿನ್ನೊಳು ಅವಳಾಗಿ ನಡೆವಂತೆ ನಡೆ

ನಿನ್ನನವಳರಿತು ಅವಳನೀನರಿಯಲು ಅನುವಾಗುವಂತೆ ನಡೆ

ನಿನ್ನವಳ ಮನಸು ಭಾವಗಳು ಒಂದಾಗುವಂತೆ ನಡೆ

ಅವಳ ಹೆಜ್ಜೆ ನಿನ್ನ ಹೆಜ್ಜೆಯಾಗಿ ನಿನ್ನದೆಲ್ಲ ಅವಳದಾಗುವಂತೆ ನಡೆ

ಅವಳ ಹೃದಯವ ನೀನು ಹೊಕ್ಕು ನಿನ್ನ ಹೃದಯದಲಿ ಅವಳನಿರಿಸಿ ನಡೆ

ಮನ ತುಂಬಿ ಮನೆತುಂಬಿ ಸರ್ವ ಸಂಪದವ ನೀವಳ್ಪಡೆವಂತೆ ನಡೆ

ಅನುಗಾಲ ಸುಖ ಶಾಂತಿ ಸಮೃದ್ಧಿಯ ಪಡೆವಂತೆ ನಡೆದು ಬಾಳಿ ಬದುಕಿ

ಇದೇ ನಮ್ಮ ಬಯಕೆ, ಇದೇ ನಮ್ಮ ಹಾರೈಕೆ ಇದೇ ನಿಮಗೆ ಶ್ರೀರಕ್ಷೆ.

 *************

Rating
No votes yet