ನಯಸೇನನ ಸಲೀಸಾದ ಸಾಲುಗಳು - ಬಿಡಿ ೬ - ಯಾವುದು ಮಿಗೆ ಪಿರಿದು ಸಂತಸ ?
ಕೆಳಗಿನ ಪದ್ಯ ಬಲು ಚೆನ್ನು. ಯಾವುದು ಹಿರಿದಾದ ಮಿಗೆ/ವಿಶೇಶ ಸಂತಸ ?
ಬಿತ್ತರದಿಂ ಕುರುಡಂ ಕ
ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ
ಪೆತ್ತಂತಿರೆ ಪಾರ್ವಂ ಮ
ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್
ಎಲ್ಲರಿಗೂ ಗೊತ್ತಿರುವಂತೆ ಕುರುಡನೊಬ್ಬನಿಗೆ ಕಣ್ ಬಂದರೆ
ಎಲ್ಲರಿಗೂ ಗೊತ್ತಿರುವಂತೆ ಬೆಲೆವೆಣ್ಣೊಬ್ಬಳು ಪೆಣ್ಣಂ ಹೆತ್ತಿದರೆ (??)
ಎಲ್ಲರಿಗೂ ಗೊತ್ತಿರುವಂತೆ ಹಾರುವ ಮಣ್ಬೆತ್ತಂತಿರೆ ( ??)
ಅದು ಹಿರಿದಾದ ವಿಶೇಶವಾದ ಸಂತಸ
Rating