ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ದು:ಖಾಂತ್ಯ..:((

ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ದು:ಖಾಂತ್ಯ..:((

 
ಇಲ್ಲೀವರೆಗೆ-


ಸಿರಿ 'ಸೃಷ್ಟಿ'ಯ
ಬಾಲದ ವಿಷಕಾರಿ ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ ತಪ್ಪಿಸಿಕೊಂಡು ಹೋಗಿ ಗಾಳಿಗೆ ಸ್ವತ0ತ್ರ ಹಕ್ಕಿಯಾಗಿ  ಕೈ ಅಗಲಿಸಿ ನಿಂತಲೂ- ಅವಳನ್ನು ಹುಡುಕಿಕೊಂಡು ಮೇಲೆ ಬಂದ ವಿಶಾಲ್ ಗೆ ಅವಳ ಬೆನ್ನ ಹಿಂದುಗಡೆ ರೆಕ್ಕೆ ಮೂಡಿದ್ದು  ಅವಳು ಹಾರಿ ಹೋಗಲು ರೆಡಿ ಆಗಿದ್ದು -ಯಾವ ಪ್ರಶ್ನೆಗೂ ಉತ್ತರಿಸದೇ ಮೂಕನಾದ ವಿಶಾಲ್,ಏಣಿ ಹತ್ತಿ ಮೇಲೆ ಬಂದ ಸಿರಿಗೆ ಎಲ್ಲವೂ ಗೊತ್ತಾಗಿ, 'ಸೃಷ್ಟಿ'ಯನ್ನು ರಮಿಸಿ ಮನೆಗೆ ಕರೆದುಕೊಂಡು ಬಂದು ಮಲಗಿಸಿ  ಸಿರಿಯನ್ನು ಎತ್ತಿಕೊಂಡು ವಿಶಾಲ್ ತಮ್ಮ ರೂಮಿಗೆ ಹೋದ 'ಸೃಷ್ಟಿ' ಮನೆಯ ಮೇಲಿನ ಕಿಟಕಿ ಮೂಲಕ ಹೊರ ಹೋದಳು.....

ರಾತ್ರಿ ವಿಶಾಲ್ ಮತ್ತು ಸಿರಿ ಮಲಗಲು ರೆಡಿ ಆಗುವಾಗ ಡಾ: ಕಣ್ನನ್ ಬಂದಿದ್ದು 'ಸೃಷ್ಟಿ'ಯನ್ನು ತಮಗೆ ಒಪ್ಪಿಸಲು ಕೇಳಿದರು, ಒಳಗೆ ಹೋಗಿ ನೋಡಿದಾಗ 'ಸೃಷ್ಟಿ' ತಪ್ಪಿಸಿಕೊಂಡಿದ್ದು ಗೊತ್ತಾಗಿ ಅವಳ ಎಲ್ಲ ವಸ್ತುಗಳನ್ನು ಒಟ್ಟುಗೂಡಿಸಿ ಸುಟ್ಟು ಹಾಕಿದರು...  ಅಸ್ಟ್ರಲ್ಲಿ ಏನೋ ಸುತ್ತ ಮುತ್ತ ಹಾರಾಡಿದಂತೆ ಆಗಿ ಕೆಲವು ನಿಮಿಷಗಳಲ್ಲಿ ಡಾ: ಕಣ್ನನ್ ಹತ್ತಿರ ಒಂದು ವಸ್ತು ಬಿದ್ದು ಅದು ಏನು ಅಂತ ಎತ್ತಿಕೊಂಡು ನೋಡಿದಾಗ ಅದು ಮನುಷ್ಯನ ತುಂಡಾದ ಕೈ ಅಂತ ಗೊತ್ತಾಗಿ ಕಿರುಚುತ್ತಾ ದೂರ ಎಸೆದರು.. ಆ ಕೈ ತನ್ನ ಜೊತೆ ಬಂದಿದ್ದ ಡ್ರೈವರ್ದೇ ಅಂತ ಗೊತ್ತಾಯ್ತು, ಡಿಕ್ಕಿಯಲ್ಲಿದ್ದ ಡಬಲ್ ಬ್ಯಾರೆಲ್ ಗನ್ನು ಮತ್ತು ಪವರ್‌ಫುಲ್ ಟಾರ್ಚ್ ಎತ್ತಿಕೊಂಡು ಬಂದು ನಿಂತರು....

ಮುಂದೇನಾಯ್ತು......???
------------------------------------------------------------------------------------------------------------

ಈ ಸರಣಿಯ ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
 
 
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/10/05/2012/36658
 
 
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8/10/05/2012/36667
 
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9/16/05/2012/36717

 

sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%AA/31/05/2012/36893


sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%AB/05/06/2012/36962

---------------------------------------------------------------------------------------------------------------------------------------

ದುಖದ ಅಂತ್ಯ:


ಸಂದೇಹದಿಂದೆಂಬಂತೆ ನೋಡುತ್ತಾ ಆ ಕಟ್ಟಿಗೆ ತೂರಿ ಬಂದ ಕಡೆಗೆ ನೋಡಿದಳು 'ಸೃಷ್ಟಿ' ಅಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ ರಕ್ತ......


ಸಿರಿ 'ಸೃಷ್ಟಿ'ಯನ್ನು ಜೋರಾಗಿ ಪಕ್ಕಕೆ ತಳ್ಳಿ ಎದ್ದು  ನಿಲ್ಲುತ್ತಿರಲು, 'ಸೃಷ್ಟಿ' ನೋವಿನಿಂದ  ಅಸ್ಟೆ ಕ್ರೋಧದಿಂದ ವಿಶಾಲ್ ಕಡೆಗೆ ನೋಡುತ್ತಾ, ತನ್ನ ಹೊಟ್ಟೆಯಲ್ಲಿ ತೂರಿದ್ದ ಆ ಕಟ್ಟಿಗೆಯನ್ನು ಜೋರಾಗಿ ಎಳೆದು ಕಿತ್ತಿದಳು....ಮತ್ತ್ತೊಮ್ಮೆ ನೋವಿನಿಂದ ಕಿರುಚಿ ಒಮ್ಮೆ ಕೆಳಗೆ ನೋಡಿದಳು ಅಲ್ಲಿ ಧಾರಾಕಾರವಾಗಿ ಹರಿಯುತ್ತಿದೆ ರಕ್ತ, ಕೋಪದ ಜ್ವಾಲೆ ಇನ್ನಸ್ತು ಹೆಚ್ಚಾಗಿ ತೂರಾಡುತ್ತಾ ಹತ್ತಿರ ಬಂದು ಒಮ್ಮೆ ಜೋರಾಗಿ ಒದ್ಡಳು ವಿಶಾಲ್ ಗೆ... ಅಸ್ತು ದೂರ ಹಾರಿ ಬಿದ್ದ ವಿಶಾಲ್, ಓಡುತ್ತ ಹೋಗಿ ತನ್ನ ಕೈನಲ್ಲಿನ ಕಟ್ಟಿಗೆ ಅವನ ಹೊಟ್ಟೆಗೆ ತಿವಿಯ ಹೋದಳು.......
 
ಅಸ್ತರಲ್ಲಿ ಸಿರಿ ಎಚ್ಚೆತ್ತು ಓಡಿ ಬಂದು 'ಸೃಷ್ಟಿ'ಯನ್ನು ಪಕ್ಕಕ್ಕೆ ತಳ್ಳಿದಳು, ಅವಳು ಏಳಲು ಪ್ರಯತ್ನಿಸುತ್ತಿರುವಾಗಲೇ ಅಲ್ಲೇ ಪಕ್ಕದಲ್ಲಿ ಬಿದ್ದಿದ ಒಂದು ಸೈಜುಗಲ್ಲು ಎತ್ತಿಕೊಂಡಳು, 'ಸೃಷ್ಟಿ' ಮತ್ತು ವಿಶಾಲ್  ಒಮ್ಮೆಲೇ ಸಿರಿ ಕಡೆಗೆ ನೋಡಿದರು.... 'ಸೃಷ್ಟಿ' ಕಣ್ಣುಗಳಲ್ಲಿ ನನ್ನನು ಕ್ಷಮಿಸು ,ಬಿಟ್ಟು ಬಿಡು ಎಂಬ ಭಾವ.. ಅದೇ ಭಾವ ವಿಶಾಲ್ ಕಣ್ಣಿನಲ್ಲೂ ಮುಖದಲ್ಲೂ.... ಸಿರಿ ಬೇಡ ಹಾಗೆ ಮಾಡಬೇಡ, 'ಸೃಷ್ಟಿ' ನಮ್ಮವಳು, ಅವಳನ್ನು ಸೃಷ್ಟಿಸಿದ್ದೆ ನಾವು, ಈಗ ನಾವೇ ಅವಳನ್ನು ಸಾಯಿಸುವುದು ಸರಿಯಲ್ಲ ಬಿಟ್ಟು ಬಿಡು......


ತನ್ನನ್ನು ಸೃಷ್ಟಿಸಿದ ನಮ್ಮನ್ನೇ-ಹೆಚ್ಚು ಕಡಿಮೆ ತಂದೆ ತಾಯಿ ಸಮಾನರಾದ ನಮ್ಮನ್ನು ಸಾಯಿಸಲು ಹಿಂದೆ ಮುಂದೆ ನೋಡದ ಈ 'ಸೃಷ್ಟಿ' ಬದುಕುವುದು ಬೇಡ, ಇವಲಿಂದ ಅಪಾಯವೇ ಹೆಚ್ಚು, ಇವಳನ್ನು ಸಾಯಿಸುವುದೇ ಮೇಲು- ಕಣ್ಣು ಮುಚ್ಚಿ ಕೈನಲ್ಲಿನ ಕಲ್ಲನ್ನು ಜೋರಾಗಿ ಎಸೆದಳು ಸಿರಿ- ಆ ಕಲ್ಲು ಹೋಗಿ 'ಸೃಷ್ಟಿ' ತಲೆಯ ಮೇಲೆ ಬಿದ್ದು ತಲೆ ನುಚ್ಚು ನೂರಾಗಿ ಮೆದುಳು ಆಚೆ ಬಂತು, ಕಣ್ಣುಗಳು ಸಿರಿಯನ್ನೇ ಧಿಟ್ತಿಸಿ ನೋಡುತ್ತಿದ್ದವು, ಕೆಲ ಹೊತ್ತು ಮಿಸುಕಾಡಿ 'ಸೃಷ್ಟಿ'ಯ ದೇಶ ನಿಸ್ಚಲವಾಯ್ತು..........:((


ವಿಶಾಲ್ ಸಾವಾರಿಸಿಕೊಂಡು ಎದ್ದು ಬಂದು ಸಿರಿಯನ್ನು ತಬ್ಬಿಕೊಂಡು ನಿಂತ, ಸಿರಿ ಮತ್ತು ವಿಶಾಲ್ ಇಬ್ಬರ ಕಣ್ಣುಗಳಲ್ಲಿ ಧಾರಾಕಾರ ನೀರು-

ತಾವೇ ಸೃಷ್ಟಿಸಿ ತಾವೇ ಅವಳ  ಮತ್ತು ಡಾ: ಕಣ್ನನ್ ಹಾಗೂ ಡ್ರೈವರ್ ಸಾವಿಗೆ ಕಾರಣ ಎಂಬ ಅಪರಾಧಿ ಭಾವ...


 ಅಲ್ಲಿಯೇ ಇದ್ದ ಒಂದು ಕಟ್ಟಿಗೆ ಎತ್ತಿಕೊಂಡು ಒಂದು ಹಳ್ಳ ತೋಡಿ ಅದರಲ್ಲಿ 'ಸೃಷ್ಟಿ'ಯ ದೇಹವನ್ನು ಹೂತು ಹಾಕಿ ಮಣ್ಣು ಮುಚ್ಚಿದರು..... ಟಾರ್ಚ್ ಮತ್ತು
ಗನ್ನು ಹುಡುಕಿ ತಮ್ಮ ಮನೆಗೆ ಮರಳಿ ಬಂದು ಕೈ ಕಾಲು ಮುಖ ತೊಳೆದುಕೊಂಡು ಬ್ರೆಡ್ ತಿಂದು ಮಲಗಿದರು. ರಾತ್ರಿ ಇಬ್ಬರೂ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು ಇನ್ನೂ ಇಲ್ಲಿ ಇರುವುದು ಬೇಡ- ವಿದೇಶಕ್ಕೆ ಹೋಗೋಣ- ಮಾರನೆ ದಿನವೇ ವಿದೇಶದಲ್ಲಿನ ಕೆಲ್ಸಾ ಹುಡುಕಿಕೊಂಡು ಕೆಲವು ದಿನಗಳಲ್ಲಿ ವೀಸಾ ಸಹಾ ಸಿಕ್ಕಿ ವಿದೇಶಕ್ಕೆ ತೆರಳಿದರು...

ಈ ಮದ್ಯೆ  'ಸೃಷ್ಟಿ'ಯ ಅಂತ್ಯವಾದ ಮಾರನೆಯ ದಿನ ಪೊಲೀಸರಿಗೆ ಯಾರೋ ಕರೆ ಮಾಡಿ ಎರಡು ವಿರೂಪಗೊಂಡ ಶವಗಳು  ಬಿದ್ದಿವೆ ಎಂದು ಹೇಳಿದ್ದರು.. ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವ ಕುರುಹೂ ಸಿಗದೆ ಈ ಬರ್ಬರ ಕೊಲೆಗೆ ಕಾರಣ ತಿಳಿಯದೇ, ಸತ್ತವರು ಹೆಸರಾಂತ ವಿಜ್ಞಾನಿ ಮತ್ತು ಅವನ ಡ್ರೈವರ್ ಅಂತ ಗೊತ್ತಾಗಿ -ತನಿಖೆ ಚುರುಕುಗೊಂಡು ಸೃಷ್ಟಿ ಬಯೋ ಎಂಜಿನಿಯರಿಂಗ್ ಕಂಪನಿಗೆ ಬಂದು ವಿಚಾರಿಸಿದಾಗ, ಮೊದಲೇ ರಹಸ್ಯ ಪ್ರಯೋಗ ನಡೆಸಿ ಅದು ವಿಫಲವಾಗಿ ಅದೆಲ್ಲವನ್ನೂ ಹೇಳಿ ಯಾಕೆ ರಿಸ್ಕ್ ತೆಗೆದುಕೊಳ್ಳುವುದು ಅಂತ, ತಮಗೂ ಏನೂ ಗೊತ್ತಿಲ್ಲ ಎಂತಲೂ ಡಾ: ಕಣ್ನನ್ ಬಹಳ ಒಳ್ಳೆಯವರು-ಚಟುವಟಿಕೆಯ ಮನುಷ್ಯ ಎಂದು ಹೇಳಿ ಪೊಲೀಸರನ್ನು ಸಾಗ ಹಾಕಿದರು...
 
ಹಲವು ದಿನಗಳು ತನಿಖೆ ನಡೆದರೂ ಏನೂ ಪ್ರಗತಿ ಕಾಣದೆ ಪೊಲೀಸರು ಅದನ್ನು 'ಬಗೆ ಹರಿಯದ ಕೇಸು' ಅಂತ ಷರಾ ಬರೆದು ಮೂಲೆಗೆ ಎಸೆದರು..
ಶವಗಳನ್ನು ಮಣ್ಣು ಮಾಡಿದರು..
ಆ ಶವಗಳ ಜೊತೆ ಸತ್ಯವೂ ಮುಚ್ಚಿ ಹೋಯ್ತು....
ಇದೆಲ್ಲವನ್ನೂ ವಿದೇಶದಲ್ಲಿದ್ದು ಅರಿತಿದ್ದ ವಿಶಾಲ್ ಮತ್ತು ಸಿರಿ ನಿಟ್ಟುಸಿರು ಬಿಟ್ಟರು...


ಹೀಗೆ 'ಸೃಷ್ಟಿ' ಬಯೋ ಎಂಜಿನಿಯರಿಂಗ್ ಕಂಪನಿಯ 'ಮಹಾತ್ವಾಕಾಂಕ್ಷೆಯ' ಪ್ರಾಜೆಕ್ಟ್  ದುರಂತ ಅಂತ್ಯ ಕಂಡಿತು...
 
ನವ ಜೀವಿಯ ರಹಸ್ಯ 'ಸೃಷ್ಟಿ' ಕೊನೆಗೂ ಕೆಲವೇ ಮಂದಿಗೆ ಗೊತ್ತಾಗಿ ,ಬೇರೆಯವರಿಗೆ ಆ ಸುಳಿವೂ ಸಿಗದೆ ಕಾಲ ಗರ್ಭದಲ್ಲಿ ಮಹಾ ರಹಸ್ಯವೊಂದು ಮುಚ್ಚಿ ಹೋಯ್ತು....:((
 
 
 
 
                                          ----------------ಮುಗಿಯಿತು-------------------               
 

 

 

Rating
No votes yet

Comments