ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫
(೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ!
(೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದೂ ನ್ಯಾಯವಿಚಾರಣೆಗೆ ಒಳಪಡಿಸಲಾರಿರಿ!
(೨೩೩) ನಿಮ್ಮ ಬಾಯಿಗೆ ಅತ್ಯಂತ ಹತ್ತಿರ ಬಂದೂ, ಬಾಯಿಯ ಒಳಹೊಕ್ಕು ಜೀರ್ಣಗೊಳ್ಳಲು ನಿರಾಕರಿಸುವ ಆಹಾರವನ್ನು ’ಲಿಪ್-ಸ್ಟಿಕ್’ ಎನ್ನುತ್ತಾರೆ!
(೨೩೪) ಸೌಂದರ್ಯವು ಕಾಣುವ ಕಣ್ಣಿನಲ್ಲಿದೆ ಎಂದು ಭಾವಿಸುವಾತ ತನ್ನ ಕನಸುಗಳನ್ನು ಕುರಿತು ಸಾಕಷ್ಟು ಕುರುಡಾಗಿರಬೇಕು.
(೨೩೫) ಕನಸಿನ ಪಾಠ: ಮೌಲ್ಯವುಳ್ಳದ್ದನ್ನು ಕುರಿತೇ ನಾವು ಸದಾ ಹಗಲುಗನಸು ಕಾಣುವುದು ಎಂದಾದಲ್ಲಿ ಸದ್ಯಕ್ಕೆ ನಮ್ಮಲ್ಲಿರುವುದು ಮೌಲ್ಯವುಳ್ಳದ್ದಲ್ಲವೆಂದು ನಾವೇ ಒಪ್ಪಿಕೊಂಡಂತೆ!
Rating
Comments
ಉ: ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ ...