ನಾಜುಂಡೇಶ್ವರನ ಆಣೆ!
ಸ್ವಾಮೀ, ನಂಜಂಡೇಶ್ವರಾ,
ಏನೂ ಅಲ್ಲದ, ಏನೂ ಇಲ್ಲದ ನನ್ನಂಥವರ ತಪ್ಪೊಪ್ಪುಗಳಿಗೂ ಸಾಕ್ಷಿ ನೀನೆಂದು ನಂಬಿದ್ದೆ; ನನ್ನ ಶ್ರದ್ಧಾ ಮಟ್ಟ ಗಟ್ಟಿಗೊಂಡರೆ, ನನ್ನ ಕೂಗೂ ನಿನ್ನ ಕಿವಿ ಮಟ್ಟೀತೆಂಬ ಭರವಸೆ ಇಟ್ಟಿದ್ದೆ. ಆದರೀಗ ಬಿಜೆಪಿ ಭಿನ್ನಾಭಿನ್ನ ಮತಗಳಿಗೆ ನಿನ್ನನ್ನು ಸಾಕ್ಷಿಯಾಗಿ ಕರೆದಿದ್ದಾರೆ; ಅದೂ ರಾಜ್ಯದ ಸರ್ವೋನ್ನತ ಕಾರ್ಯಭಾರಿಯಿಂದ ಈ Offer ಬಂದಿದೆ! ಆ ಭಿನ್ನಮತವಾದರೋ, ಅನಂತ, ನಿರಂತ. ನಿನ್ನ Temptation ಅರ್ಥವಾಗುತ್ತದೆ! ಆದ್ದರಿಂದ ಬಿಜ಼ಿ ರಾಜಕೀಯದಿಂದ ತುಸು ಪುರುಸೊತ್ತಿದ್ದರೆ ನನ್ನ ಅಣೆಯನ್ನೂ ಒಂದಷ್ಟು ಕೇಳಿಸಿಕೋ, ಇನ್ನೆಂದಿಗೂ ಹಣ್ಣು-ಹೂಗಳೊಂದಿಗೆ ನಿನ್ನ ಗುಡಿಗೆ ಬರೆ; ಅದು ಕೊಡು, ಇದ ಮಾಡೆಂಬ ಕ್ಷುಲ್ಲಕ ಕೊರಿಕೆಗಳನ್ನಿಟ್ಟು ಗೋಳು ಹೊಯ್ದುಕೊಳ್ಳೆ!
Rating