ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ನಾನಾಗಿದ್ದರೆ ನೀ ತೊಡುವ....
--------------------------
ನೀ ತೊಡುವ ಬಳೆಗಳ ಕೈ
ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಾಗಿ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!
ನುಣುಪಾದ ನಿನ್ನ ಕೆನ್ನೆ
ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲಾ
ನನ್ನತ್ತ ಸೆಳೆದುಕೊಳ್ಳುತಿದ್ದೆ..
ಕನ್ನಡಿಯೊಳಗಿನ ಪ್ರತಿಬಿಂಬ ನೀನು
ಶೖಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದಯ೯ದ ಧ್ಯಾನದಲ್ಲಿ
ಲೀನವಾಗಿ, ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರಿನಲ್ಲೇ ಗುನುಗುನಿಸುತ್ತಾ ಹಾಡುತಿದ್ದೆ
ಗೆಳತಿ, ನೀ... ಹೋದೆಡೆಯಲೆಲ್ಲಾ ಇರುತಿದ್ದೆ..
ನಿನ್ನ ಮುಖದ ಕಾಂತಿಯನ್ನು
ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದಯ೯ವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗೆಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ...
ನಿನ್ನ ತಲೆಯ ದಿಂಬಾಗಿ ಇರುತಿದ್ದೆ..
ಹೊಳಪಾದ ನಿನ್ನ ಕಣ್ಣುಗಳಿಂದ
ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ನಿನ್ನ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು...
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ....
ನಿನ್ನ ದುಖವನ್ನೆಲ್ಲಾ ನನ್ನದಾಗಿಸಿಕೊಂಡು
ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ..
ಆರದ, ಮರೆಯದ ಗಾಯ ಹುಣ್ಣಾಗದಂತೆ
ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ-ಹಾಸಿಗೆ ಚೆಲ್ಲುತಿದ್ದೆ....
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ಹೂ-ನಗೆಯಾಗುವ ನಿನ್ನ ಮುಖಕೆಲ್ಲಾ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವೆಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದಯ೯ದ
ಆರಾದಕನಾಗಿರುತಿದ್ದೆ.... ಅಭಿಮಾನಿಯಾಗಿರುತಿದ್ದೆ..|