ನಾನು ಕಂಡ ಮೊದಲ ಸಾವು.

ನಾನು ಕಂಡ ಮೊದಲ ಸಾವು.

ನಾನು ಚಿಕ್ಕವನಾಗಿದ್ದಾಗ ನೆಡೆದ ಒಂದು ಘಟನೆ.

ನಾನು ಆಗಷ್ಟೇ ನಾಲ್ಕನೇ ತರಗತಿಯಿಂದ ತೇರ್ಗಡೆಯಾಗಿದ್ದೆ. ಬೇಸಿಗೆ ರಜೆಯಲ್ಲಿ ಮನೆ ಹತ್ತಿರವಿರುವ ಹುಡುಗರೆಲ್ಲ ಸೇರಿ ಆಟವಾಡುತ್ತಿದ್ದೆವು. ಒಂದು ದಿನ ನಾವುಗಳೆಲ್ಲ ಲಗೋರಿ ಆಟವಾಡಿ ಮನೆಗೆ ಹಿಂತಿರುಗುತ್ತಿದ್ದೆವು. ನಮ್ಮಲ್ಲಿ ಒಬ್ಬ ಹುಣಸೇ ಕಾಯಿ ಕಿತ್ತು, ಉಪ್ಪು ಕಾರ ಹಾಕಿ ತಿನ್ನೋಣವೆಂದು ಹೇಳಿದ. ಸರಿ ಎಲ್ಲರೂ ಸೇರಿ ಹುಣಸೇ ಕಾಯಿ ಉದುರಿಸುವುದು, ಪುನಹ ಮನೆಗೆ ಹೋಗಿ, ಉಪ್ಪು ಕಾರದೊಡನೆ ತಿನ್ನುವುದೆಂದು ನಿರ್ಧರಿಸಿದೆವು.

ಮಧ್ಯಹ್ನದ ಹೊತ್ತಾದ್ದರಿಂದ, ಎಲ್ಲರಿಗೂ ತುಂಬಾ ಹಸಿವಾಗುತ್ತಿತ್ತು, ಬೇಗ ಬೇಗ ಹೆಜ್ಜೆ ಹಾಕಿದೆವು. ಹುಣಸೇ ಮರದ ಹತ್ತಿರ ಒಂದು ಗುಂಪು ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ, ಅಲ್ಲಿ ಒಬ್ಗ ಕುಡುಕ, ತುಂಬಾ ವಯಸ್ಸಾಗಿದೆ, ಏಳಲಾಗುತ್ತಿಲ್ಲ, ಮರದ ಕೆಳಗೆ ಹಾಗೇ ಮಲಗಿದ್ದಾನೆ. ಕೆಲವರು ಅವನಿಗೆ ನೀರು ಕುಡಿಸಲು ಯತ್ನಿಸಿದರು. ಆದರೆ ಅವನು ನೀರನ್ನು ಹೊರಹಾಕುತ್ತಿದ್ದ. ನಡುವೆ ಕೆಲವು ಸನ್ನೆಗಳನ್ನು ಮಾಡುತ್ತಿದ್ದ.ಅಗ ಅಲ್ಲಿಯೇ ಇದ್ಗ ಒಬ್ಬ ಯುವಕ ಹೋಗಿ ಒಂದೆರಡು ಸಾರಾಯಿ ಪ್ಯಾಕಟ್ ತಂದು ಕುಡಿಸಿದ.ಆ ಮದುಕ ಅದನ್ನ ನಿಧಾನವಾಗಿ ಕುಡಿದ. ಕುಡಿದ ಸ್ವಲ್ಪ ಹೊತ್ತಿನಲ್ಲಿ ಅವನ ಪ್ರಾಣ ಹೋಯಿತು.

ನಾನು ಜೀವನದಲ್ಲಿ ಕಂಡ ಮೊದಲ ಸಾವು ಅದಾಗಿತ್ತು.ಅ ಚಿಕ್ಕ ವಯಸ್ಸಿನಲ್ಲಿ ನೆಡೆದ ಅ ಘಟನೆ ನನಗೆ ಇನ್ನೂ ಆಗಾಗ ನೆನಪುಗೆ ಬರುತ್ತದೆ.

ಆಗ ನನಗ ಅನ್ನಿಸ್ಸಿದ್ದು "ಒಂದು ಚಟ ಮನುಷ್ಯನನ್ನು ಎಷ್ಟುಮಟ್ಟಿಗೆ ಗುಲಾಮನನ್ನಾಗಿ ಮಾಡುತ್ತದೆ" ಯೆಂದು.

Rating
No votes yet

Comments