ನಾನು ಕೇಳಿರದ ಸ್ವಾರಸ್ಯಕರ ಗಾದೆ ಮಾತುಗಳು
( ಕನ್ನಡಗಾದೆಮಾತುಗಳು ಎಂದರೆ ಕನ್ನಡ ಜನತೆಯ ಸಾವಿರಾರು ವರ್ಷಗಳ ಲೋಕಾನುಭವದ ಸಾರ. ಇಂಟರ್ನೆಟ್ನಲ್ಲಿ ಏನೋ ಹುಡುಕಲು ಹೋಗಿ ಸಿಕ್ಕದ್ದು ವಿಷಯ ಡಾಟ್ ಇನ್ ಎಂಬ ತಾಣದಲ್ಲಿ ಸಾವಿರಾರು ಗಾದೆಮಾತುಗಳು ಅಲ್ಲಿಂದ ನನ್ನ ಸಂತೋಷ ಸಂಗ್ರಹಕ್ಕೆಂದು ಆರಿಸಿಕೊಂಡ ಗಾದೆಮಾತುಗಳು ಮಾಮೂಲಿಗಿಂತ ಈ ಪೋಸ್ಟ್ ಸ್ವಲ್ಪ ದೊಡ್ಡದು ಆಗಿದ್ದರು ಕೂಡ ತಾಳ್ಮೆಯಿಂದ ನೀವು ಕೊನೆಯವರೆಗೆ ಓದುತ್ತೀರಿ ಎಂದು ನನಗೆ ಅನಿಸುತ್ತದೆ)
ತಾನಾಗಿ ಬೀಳುವ ಮರಕ್ಕೆ ಕೊದಲಿ ಏಟು ಹಾಕಿದ ಹಾಗೆ .
ಹೇಳೊದು ವೇದ ಹಾಕೊದು ಗಾಳ
ಸರಿಸರಿಯಾಗಿದ್ರೆ,ಪರಿಪರಿ ನೆಂಟರು
ಮೃತ್ಯು ಬಂದ ಮೇಲೆ ವೈದ್ಯ ಬಂದ.
ನಾಯಿಯ ಕನಸೆಲ್ಲ ಮೂಳೇನೇ.
ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
ದಾನಿಗೆ ದೀನತನ ಸಲ್ಲ, ಜ್ಞಾನಿಗೆ ಮೌನ ಸಲ್ಲ
ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
ನೀನು ಮೊಳ ಬಿಟ್ಟರೆ,ನಾನು ಮಾರು ಬಿಡುತ್ತೇನೆ
ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
ಅಕ್ಕ ಬರಬೇಕು ಅಕ್ಕಿ ಮುಗೀಬಾರದು
ಹಲಸಿನ ಹಣ್ಣು ಬೇಕು ಅಂಟು ಬೇಡ ಅಂದ್ರೆ ಹೇಗೆ
ಸತ್ತು ಕೊಳ್ಳೋ ಸೊರ್‍ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
ತಬ್ಬಲಿ ದೇವರಿಗೆ ತಂಗಳ ನೈವೇದ್ಯ
ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
ಇಕ್ಕಟ್ಟಾದರೂ ತನ್ನ ಗುಡಿಸಲೇ ಚಂದ
ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ
ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
ಧೈರ್ಯವಿದ್ದವನಿಗೆ ದೈವವೂ ಅನುಕೂಲ.
ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
ಲ೦ಚ ಕೊಡದವನಿಗೆ ಕೊ೦ಚವೂ ಸಿಗದು.
ಗಳಕ್ಕನೇ ಉಂಡವ ರೋಗಿ, ಗಳಿಗೆ ಉಂಡವ ಭೋಗಿ
ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?
ಬಂದದ್ದು ಬಿಡಬಾರದು ಬಾರದ್ದು ಬಯಸಬಾರದು.
ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ.
ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
ಅಜ್ಜ! ಮದುವೆ ಅಂದ್ರೆ ನನಗೋ ಅಂದ
ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ
ಮೊಂಡ ಕೊಡಲಿ ರಟ್ಟೆಗೆ ಮೂಲ
ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
ಉಪಕಾರಕ್ಕೋಗಿ ಉಪದ್ರ ಬಂತು
ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ.
ಜೋಡಿದ್ದರೆ ನಾಡು ತಿರುಗಬಹುದು.
ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು)
ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
ಬೇಕೆಂಬುದು ಬಾಳು ಸಾಕೆಂಬುದು ಸಾವು
ಸುಳ್ಳು ದೇವರಿಗೆ ಕಳ್ಳ ಪೂಜಾರಿ
ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ.
ತಾನು ಕೋತಿಯಾಗಿ ರತಿಯನ್ನು ಬಯಸುವುದೇ?
ತಿವಾಸಿ ಯಾತಕ್ಕೆ ತಿಪ್ಪೇ ಮೇಲಣವಗೆ
ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ
ತಾಯೀನೇ ತಿಂದೋಳು, ಅತ್ತೇನ ಬಿಟ್ಟಾಳೆಯೇ?
ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
ನೀರ ಕಡಿದರೆ ಬೆಣ್ಣೆ ಬಂದಾದೇನೆ
ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
ಮಂದಾಳಿಗೊಂದು ಮುಂದಾಳು
ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್.
ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
ಕಾಲಿಗೆ ಬಿದ್ದು ಕಾಲುಂಗರ ಉಚ್ಚಿಕೊಂಡರಂತೆ
ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ
ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ!
ಬಡವೆ ಸೀರೆ ಉಡದೆ ಮಾಸಿತು
ರಾಜನ ಕುದುರೆ ಲಾಯದಲ್ಲೆ ಮುಪ್ಪು
ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
ತಾಯಿ ಬೇಕು ಇಲ್ಲವೇ ಬಾಯಿ ಬೇಕು
ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ.
ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
ಹಾರುವ ಆಳಲ್ಲ, ಬಾಳೆ ದಡಿಯಲ್ಲ
ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು
ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
ಛತ್ರದಲ್ಲಿ ಭೋಜನ , ಮಠದಲ್ಲಿ ನಿದ್ದೆ .
ತೀಟೆಗೆ ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
ಅಗ್ಗದ ಆಸೆಗೆ ಗೊಬ್ಬರ ತಗೊಂಡರು
ಅಗ್ಗದ ಆಸೆಗೆ ಗೊಬ್ಬರ ತಗೊಂಡರು
ಹುಲಿ ಹಸಿದಾಗ ಹುಲ್ಲು ತಿಂದೀತೆ?
ಹಾದರಗಿತ್ತಿ ಗಂಡನ ನಂಬಳು
ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ
ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
ಹಿಂದಲ ಮಾತು ಮರಿ ಮುಂದಲ ಬಾಳು ಅರಿ
ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
ಹಬ್ಬದ ದಿನವೂ ಹಳೇ ಗಂಡನೇ ?
ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು.
ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
ತಾರುಣ್ಯವೇ ರೂಪು ಕಾರುಣ್ಯವೇ ಗುಣ
ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ
ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
ಬೈದು ಹೇಳಿದವರು ಬದುಕಕ್ಕೆ ಹೇಳಿದರು
ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ
ಜೀನ ಗಳಿಸಿದ ;ಜಾಣ ತಿಂದ
ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊ೦ಡಹಾಗೆ.
ಗ್ನಾನಿಗೆ ಮೌನ ಸಲ್ಲ
ಊರಿಗೆ ದಾರೀಯ ಯಾರು ತೋರಿದರೇನು
ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ.
ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.
ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ
ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆಕೊಲೆ