ನಾನು ನೋಡಿದ ಇನ್ನೂ ಹತ್ತು ಬ್ಲಾಗುಗಳು -ಆರನೇ ಕಂತು
೬೪. gaduginabharata.blogspot.com ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ. ಐದಾರು ಜನ ಈ ಕೆಲಸದಲ್ಲಿ ತೊಡಗಿದ್ದಾರೆ . ಒಳ್ಳೆಯ ಆರಂಭ . ಈ ಪ್ರಯತ್ನದಲ್ಲಿ ನೀವೂ ಕೈಗೂಡಿಸಬಹುದು , ಈ ವರುಷದ ಜನವರಿ ಫೆಬ್ರುವರಿ ನಂತರ ಹೊಸ ಪೋಸ್ಟ್ ಗಳು ಇಲ್ಲ . ಈ ಕೃತಿಯ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ನೀವೂ ಕೈಜೋಡಿಸಿ . ಅದು ಆಗದಿದ್ದರೆ , ಕಡೇ ಪಕ್ಷ ಅವರನ್ನು ಸಂಪರ್ಕಿಸಿ / ಕಮೆಂಟ್ ಹಾಕಿ ಈ ಕೆಲಸ ಮುಂದುವರೆಯುವಂತೆ ನೋಡಿಕೊಳ್ಳಿ ...
೬೫. palachandra.blogspot.com ಛಾಯಾಗ್ರಾಹಕ ಪಾಲಚಂದ್ರ ಅವರ ಬ್ಲಾಗ್ . ಇಲ್ಲಿ ಅನೇಕ ಫೋಟೋಗಳು ಇವೆ , ಛಾಯಾಗ್ರಹಣ ನಿಮ್ಮ ಆಸಕ್ತಿಯ ವಿಷಯವಾಗಿದ್ದರೆ ನಿಅಮಗೆ ಇಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ಸಿಕ್ಕೀತು . *****
೬೬. yasheputra.blogspot.com ಇಲ್ಲಿ ಕೆಲವು ಕವನಗಳಿವೆ , ಕನ್ನಡ ಹೋರಾಟದ ಗೊತ್ತುಗುರಿಗಳ ಬಗ್ಗೆ ಒಂದೆರಡು ಬರಹಗಳಿವೆ . ಮುಖ್ಯವಾಗಿ ಚಾಲ್ತಿಯಲ್ಲಿದೆ. ***
೬೭ reporterjay.blogspot.com ಇನ್ನೊಬ್ಬ ಪತ್ರಕರ್ತ ಅರಕಲಗೂಡುಜಯಕುಮಾರ್ ಅವರ ಬ್ಲಾಗ್ . ಸಾಮಾಜಿಕ , ರಾಜಕೀಯ , ಕೃಷಿ , ಚಿತ್ರರಂಗದ ಬೆಳವಣಿಗೆಗಳ ಕುರಿತಾದ ಬ್ಲಾಗ್ *****
೬೮. undadigunda.blogspot.com "ಹುಟ್ಟಿದ್ದು ಮಲೆನಾಡು.. ಬೆಳೆದ್ದಿದ್ದು ಗುಡ್ಡಗಾಡು ಸುತ್ತುತ್ತ.. ಓದಿದ್ದು ನವೋದಯ ಶಾಲೆ.. ಮೈಸೂರಿನಿಂದ BE, ಬೆಂಗಳೂರಿನಲ್ಲಿ ಸ್ವಲ್ಪ ಕಾಲ ಕೆಲಸ, ಆಮೇಲೆ ಎರಡು ವರ್ಷ ಅಮೇರಿಕ ವಾಸ. ಇದೀಗ ಮರಳಿ ಗೂಡಿಗೆ. ಇನ್ನೇನು ಗೃಹಸ್ಥಾಶ್ರಮಕ್ಕೆ ತೆರಳಲು ತಯಾರಿ" ಇದು ಬ್ಲಾಗುಕರ್ತ ಅಮರ ತುಂಬಳ್ಳಿ ಅವರ ಪರಿಚಯ . ಹವ್ಯಕ ನುಡಿಯಲ್ಲಿ ಬಹುತೇಕ ( ಸುಮಾರು ನಲವತ್ತು) ಬರಹಗಳು . ಏಕೋ ಇದು ಈ ವರ್ಷದ ಜನವರಿಯಿಂದ ಅಪ್ಡೇಟ್ ಆಗಿಲ್ಲ . ಗೃಹಸ್ಥಾಶ್ರಮದಲ್ಲಿ ಬಿಜಿಯಾಗಿರಬಹುದು. ****
೬೯. undadigunda-travel.blogspot.com ಇದೂ ಅವರದೇ ಬ್ಲಾಗು . ಇದೂ ಕೂಡ ಈ ವರ್ಷದ ಜನವರಿಯಿಂದ ಅಪ್ಡೇಟ್ ಆಗಿಲ್ಲ . ಆದರೆ ಇಂಗ್ಲಲೀಸಿನಲ್ಲಿದೆ . ಇಂಗಲೀಸು ಓದಲಿಕ್ಕೆ ಬೇಜಾರು . ಕಡೇಪಕ್ಷ ಫೋಟೋಗಳನ್ನು ಹಾಕಬಹುದಿತ್ತು .
೭೦. kannadaranga.blogspot.com ಡಾ. ರಾಜ್ ಅಭಿನಯದ ಚಲನಚಿತ್ರಗಳ ಸಂಪೂರ್ಣ ಪಟ್ಟಿ ಮತ್ತು ಜನಾರ್ಧನ ಸ್ವಾಮಿ ಯವರ ಕೆಲವು ವ್ಯಂಗ್ಯ ಚಿತ್ರಗಳು: ಹೊರತು ಮತ್ತೇನೂ ಇಲ್ಲ :(
೭೧. raitapy.blogspot.com ಕೃಷಿವಿಷಯಗಳ ಕುರಿತು ಬಹಳಷ್ಟು ಬರಹಗಳನ್ನು ಹೊಂದಿರುವ ತುಂಬ ಒಳ್ಳೆಯ ಬ್ಲಾಗ್ ಇದು . *****
೭೨ kirankicking.blogspot.com ಬದುಕಿನ ಅರ್ಥದ ಬಗ್ಗೆ ಹುಡುಕಾಟ ನಡೆಸಿದ್ದೀರಾ ? " ಮುಂದೊಂದು ದಿನ ಸತ್ಯದ ಬೆಳಕು ಪ್ರಕಾಶಿಸುತ್ತದೆ - ಎಂಬುದು ಶುದ್ಧ ಪಲಾಯನವಾದ. ಬದುಕು ಇರುವುದೇ ಇಂಥ ನಿರರ್ಥಕ ಇಂದಿನಲ್ಲಿ, ಈ ಕ್ಷಣವೊಂದೇ ಸತ್ಯ. ನಾಳೆ ಬೆಳಕಾಗುತ್ತದೆ, ಸತ್ಯ ದರ್ಶನವಾಗುತ್ತದೆ, ನನ್ನನ್ನು ನಾನು ಕಂಡುಕೊಳ್ಳುತ್ತೇನೆ, ಅರ್ಥದ ಬೀಗ ಒಡೆಯುತ್ತೇನೆ ಎಂಬುದೆಲ್ಲ ಭ್ರಮೆ. ಬದುಕೆಂಬುದು ಈ ಕ್ಷಣದಲ್ಲಷ್ಟೇ ಇದೆ. ನಾಳೆ ಬದುಕುತ್ತೇನೆ, ಅರ್ಥ ತಿಳಿದ ನಂತರ ಎಂದುಕೊಂಡರೆ ಬದುಕೆಲ್ಲ ಬರಿಯ ಅನ್ವೇಷಣೆಯಲ್ಲೇ ಕಳೆದು ಹೋಗುತ್ತದೆ." ಇಡೀ ಬರಹ ಓದಲು ಇಲ್ಲಿ ಹೋಗಿರಿ. http://kirankicking.blogspot.com/2009/09/blog-post.html ಸಮಸ್ಯೆಗಳು ಇಲ್ಲದಲ್ಲಿಯೂ ಮನುಷ್ಯ ಸಮಸ್ಯೆಗಳನ್ನು ಹುಟ್ಟು ಹಾಕಿಕೊಳ್ಳುತ್ತಾನೆಯೇ ? ಈ ಬಗ್ಗೆ ಇಂಗ್ಲೀಷ್ ಬರಹ ಇಲ್ಲಿದೆ. http://kirankicking.blogspot.com/2009/08/nothing.html ನಗುನಗುತ್ತ ಬಾಳುವುದರ ಬಗೆಯೂ ಒಂದು ಇಂಗ್ಲೀಷ್ ಬರಹ ಇದೆ. ಇಲ್ಲಿ ಓದಿ http://kirankicking.blogspot.com/2009/02/nothing_20.html .
ಕೆಲವು ಫೋಟೋಗಳು ಇವೆ . ಬೆರಳೆಣಿಕೆಯ ಬರಹಗಳು ಕನ್ನಡದಲ್ಲಿ. ಬೆರಳೆಣಿಕೆಗಿಂತ ಹೆಚ್ಚು ಬರಹ ಇಂಗ್ಲೀಶಿನಲ್ಲಿ . ಇಲ್ಲಿರುವ ಇಂಗ್ಲೀಷ್ ಬರಹಗಳೂ ಚೆನ್ನ್ನಾಗಿ ಏನೋ ಇವೆ . ಕನ್ನಡದಲ್ಲಿ ಇದ್ದಿದ್ರೆ ಒಳ್ಳೇದಿತ್ತು . ***
೭೩. chaayaachittara.blogspot.com - ಫೋಟೋಗಳೊಂದಿಗೆ ಕವನಗಳು