ನಾನು ನೋಡಿದ ಹಳೆಯ ಸಿನಿಮಾ - ಪೋಸ್ಟ್ ಮಾಸ್ಟರ್
"ಇಂದೇನು ಹುಣ್ಣಿಮೆಯೋ '' ಎಂಬ ಹಳೆಯ ಇಂಪಾದ ರೋಮ್ಯಾoಟಿಕ್ ಹಾಡನ್ನು ಹಾಗೂ "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ " ಹಾಡನ್ನು ನೀವು ಕೇಳಿರಬಹುದು. ಇವು " ಪೋಸ್ಟ್ ಮಾಸ್ಟರ್ " ಚಿತ್ರದವು. ಈ ಚಿತ್ರವು ಯೂಟ್ಯೂಬ್ ನಲ್ಲಿದ್ದು ಇತ್ತೀಚೆಗೆ ನೋಡಿದೆ. ಮುಖ್ಯ ಪಾತ್ರಧಾರಿಯಾಗಿ ಬಿ.ವಿ. ವೆಂಕಟೇಶ್ ಮತ್ತು ಖಳನಾಗಿ ಬಾಲಕೃಷ್ಣ ಗಮನ ಸೆಳೆಯುತ್ತಾರೆ.
ಈ ಚಿತ್ರದಲ್ಲಿ ನಾನು ಮೆಚ್ಚಿದ ಸಂಭಾಷಣೆಗಳು ಇವು
ಕಾರಿಗೆ ನಾಲ್ಕು ಚಕ್ರ ಇರೋ ಹಾಗೆ ಹಾರ್ಟ್ ಗೆ ಪ್ರಯತ್ನ, ಸಾಹಸ, ಸ್ವಾಭಿಮಾನ , ಆಶೆ ನಾಲ್ಕು ಚಕ್ರಗಳು - ಯಾವುದಾದರೂ ಒಂದು ಡೌನ್ ಆದರೂ ದೈರ್ಯ ಅನ್ನೋ ಸ್ಟೆಪ್ನಿ ತಕ್ಷಣ ತಗುಲು ಹಾಕಿಕೊಂಡು ಮುಂದೆ ಸಾಗಬೇಕು
ಇನ್ನೊಬ್ಬರ ಸಹಾಯದಿಂದ ಎಂದೂ ಯಾರೊಬ್ಬರೂ ದೊಡ್ಡವರಾಗಿಲ್ಲ.
ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಆದರೆ ಧೈರ್ಯವನ್ನಲ್ಲ
ಈ ಮನೇಲಿ ಕೈ ನೀಡೋದು ಕೊಡೋದಿಕ್ಕಲ್ಲದೆ
ಪಡೆಯೋದಕ್ಕಲ್ಲ
ಕಂಡವರ ಮನೆ ಕಸ ಮುಸುರೆ ಮಾಡಿದರೆ ಮರ್ಯಾದೆ ಹೋಗುತ್ಯೆ ?
ನನಗೆ ನನ್ನ ಅಪ್ಪ ಅಮ್ಮ ಕಲಿಸಿಕೊಟ್ಟಿರೋ ವಿದ್ಯೆ , ರೂಡಿಸಿಕೊಟ್ಟಿರೋ ರೀತಿ ನೀತಿ ಸಾರ್ಥಕ ಆಗೋದಾದ್ರೂ ಯಾವಾಗ?
ಕೆಲಸ ಇಲ್ಲದೆ ಒಂದ್ ಗಳಿಗೇನೂ ಸುಮ್ಮನೆ ಕೂತಿರಲಾರೆ
ಪ್ರೇಮ ಬಂಧನದಲ್ಲಿ ಯಾವ ಕೆಲಸವೂ ಕೀಳಲ್ಲ
ವಜ್ರಕ್ಕೆ ಸಾಣೆ ಹಿಡಿದಷ್ಟೂ ಪ್ರಕಾಶವಾಗುತ್ತಂತೆ