ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "

ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "

ಬೇರೆ ಭಾಶೆಯನ್ನ ಕಲಿಯುವುದು ಈಗೀಗ ಹೆಚ್ಚು ಸುಲಭ ;
ಯಾಕೆಂದರೆ ಎಲ್ಲ ಭಾಶೆಯ ಟೀವೀ ಚಾನೆಲ್ಲುಗಳು ಎಲ್ಲೆಡೆ ಬರುತ್ತವೆ !

ದೇವನಾಗರಿ ಲಿಪಿ ಗೊತ್ತಾದರೆ , ಆ ಲಿಪಿಯಲ್ಲಿರುವ ಭಾಶೆಗಳನ್ನು , ಆ ಲಿಪಿಗೆ ಹತ್ತಿರವಾದ ಭಾಶೆಗಳನ್ನು ಕಲಿಯಲು ಅನುಕೂಲ .
ಒಂದು ದ್ರಾವಿಡ ಭಾಶೆ ತಿಳಿದರೆ ಇನ್ನೊಂದು ದ್ರಾವಿಡ ಭಾಶೆ ಕಲಿಯಲು ಅನುಕೂಲ ;

ಈಗ ನಾನು ಮರಾಠಿ ಅರ್ಥ ಮಾಡಿಕೊಳ್ಳಬಲ್ಲೆ ! ಮುಂಬೈಯಲ್ಲಿ ಮರಾಠಿ ಪ್ರಧಾನ ಭಾಶೆ ಅಲ್ಲವಾದರೂ , ಅಲ್ಲಲ್ಲಿ ಮರಾಠಿ ಕೇಳಬರುತ್ತದೆ , ಕಾಣಸಿಗುತ್ತದೆ . ಇಲ್ಲಿ ಏನು ನಡೀತಾ ಇದೆ ಅಂತ ಆಗಾಗ ನಾನು ಮರಾಠೀ ಚಾನೆಲ್ಲುಗಳನ್ನು ಸರ್ಫ್ ಮಾಡುತ್ತೇನೆ.

ಒಂದು ಸಲ ಮರಾಠಿಯ ಆತಂಕಗಳನ್ನು ಕುರಿತ ಒಬ್ಬ ಟೀವೀಯಲ್ಲಿ ಮಾತಾಡುತ್ತಿದ್ದ . ನಾನು ಗಮನಿಸಿದ್ದೇನೆಂದರೆ ಅವನು ಹೇಳುವ ವಿಚಾರಗಳಲ್ಲಿ ’ಮರಾಠಿ’ ಭಾಶೆಯ ಬಗ್ಗೆ ಏನು ಹೇಳುತ್ತಿದ್ದನೋ ಅವೆಲ್ಲವೂ ಕನ್ನಡದ ಪಾಲಿಗೂ ಸತ್ಯವಾಗಿವೆ ! ಮರಾಠೀ ಭಾಶೆಯ ಜನರ ಆತಂಕಗಳಿಗೂ , ತಲ್ಲಣಗಳಿಗೂ ಕನ್ನಡಿಗರ ಕಾಳಜಿಗಳಿಗೂ ಬೇರೇತನ ಎಂಬುದಿಲ್ಲ.

ನಾನು ಹೊರಗಿನವನಾದ್ದರಿಂದ ಮರಾಠಿ ಭಾಶೆಯ ಬಗ್ಗೆಗೆ , ಮರಾಠೀ ಜನಕ್ಕಿಂತ ಕೆಲವು ಹೆಚ್ಚಿನ ವಿಚಾರಗಳು ತಿಳಿದಿವೆ , ಮತ್ತು ಹೊಳೆದಿವೆ.
ಮರಾಠಿಯಲ್ಲಿ ಸಂಸ್ಕೃತ ಶಬ್ದಗಳು ಹೆಚ್ಚು , ಹಿಂದಿ ಶಬ್ದಗಳು ಮರಾಠಿಯಲ್ಲಿ ರೂಪಾಂತರಗೊಳ್ಳುವಾಗಿನ ನಿಯಮಗಳು ಹೊಳೆದಿವೆ!

ಮರಾಠಿಯಲ್ಲಿ ಸಾಮಾಜಿಕ ಕಾದಂಬರಿಗಳು , ಧಾರಾವಾಹಿಗಳು ವಾಸ್ತವಕ್ಕೆ ಹೆಚ್ಚು ಸಮೀಪ . ದಲಿತ ಸಾಹಿತ್ಯವೂ ಧಂಡಿಯಾಗಿದೆ.

ಮೊನ್ನೆ ಒಂದು ಮರಾಠಿ ಸಿನೇಮ- ’ ಚಂಗು ಮಂಗು’ ನೋಡುತ್ತಿದ್ದೆ . ಅಲ್ಲಿ ಪ್ರಮುಖ ಪಾತ್ರ ಕನ್ನಡದ್ದು ಇತ್ತು . ರಾಮಣ್ಣ, ಕಾಮಣ್ಣ ಶಬ್ದಗಳನ್ನು ಪ್ರಾಸವಾಗಿಸಿದ ಹಾಡೂ ಒಂದಿತ್ತು . ಅವನು ಒಬ್ಬ ಹೆಂಗಸಿಗೆ ಹೇಳುತ್ತಾನೆ - " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "

ಮರಾಠಿ ಕಲಿಯಲು ಪುಸ್ತಕಗಳು ಇಲ್ಲವೆಂದೇ ಹೇಳಬೇಕು ; ಭಾಶೆಯ ಶೈಲಿ ನನಗೆ ತಿಳಿಯಬೇಕಿತ್ತು . ಹಿಂದಿ / ಮರಾಠಿ ಮೂಲಕ ಇಂಗ್ಲೀಷ್ ಕಲಿಯಲು ಪುಸ್ತಕಗಳು ಬೀದಿಯಲ್ಲಿ ಒಬ್ಬ ಮಾರುತ್ತಾ ಇದ್ದ . ಇಂಗ್ಲೀಶ್ ಮೂಲಕ ಮರಾಠಿ ಕಲಿಯುವ ಪುಸ್ತಕ ಕೊಡು ಅಂತ ನಾನು ಅವನಿಗೆ ಹಿಂದಿಯಲ್ಲಿ ಕೇಳಿದ ; ಅವನು ಗೊಂದಲಕ್ಕೆ ಒಳಗಾದ .

ಇಂಗ್ಲೀಷ್ ಬಲ್ಲವನಂತೆ ಕಾಣುವ ಮನುಷ್ಯ ಇಂಗ್ಲೀಶ್ ಕಲಿಯಲು ಮರಾಠಿ ಮಾಧ್ಯಮದ ಪುಸ್ತಕವನ್ನ ಹಿಂದೀಲಿ ಕೇಳೋದೆ? ಮರಾಠಿಯಲ್ಲಿ ಕೇಳಬೇಕಿತ್ತಲ್ಲ ? " ಹಿಂದೀ ಟೊ ಇಂಗ್ಲೀಷ್ ಭೀ ಹೈ" ಅಂದ ! " ಮುಝೆ ಮರಾಠೀಸೆ ಇಂಗ್ಲೀಷ್ ಹೀ ಚಾಹಿಯೆ ; ಮುಝೆ ಮರಾಠೀ ಸೀಖನಾ ಹೈ ; ರಿವರ್ಸ್ ಸೀಖತಾ ಹೂಂ " ಅಂದೆ . ಅವನಿಗೆ ಆಶ್ಚರ್ಯವೂ , ಅವನು ಮರಾಠೀ ಮನುಶ್ಯ ಇದ್ದದ್ದರಿಂದ ರೋಮಾಂಚನವೂ ಸಂತೋಷವೂ ಆಗಿ " ಕ್ಯಾ ಬಾತ್ ಹೈ ಸಾಬ್" ಅಂತ ಕೈ ಕುಲುಕಿ ಪುಸ್ತಕ ಕೊಟ್ಟ !

Rating
No votes yet

Comments