ನಾನೂ ಕವಿಯಾದೆ ನೋಡು!

ನಾನೂ ಕವಿಯಾದೆ ನೋಡು!

ನಾನೂ ಕವಿಯಾದೆ ನೋಡು!

ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ

 

ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆ
ನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆ
ನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡೆ

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||

ನಿನ್ನ ಮೈಯ ಬಣ್ಣ ಚಂದ, ಅದಕ್ಕಿಂದ ಅಂದ ಒನಪು
ನಿನ್ನ ಮಾತಲ್ಲಿಹುದು ಜಾದು, ನಿನ್ನ ನುಡಿಗಳು ಕಿವಿಗಳಿಂಪು
ನಿನ್ನ ಪ್ರತಿ ನಡೆಯಲ್ಲೂ ಪ್ರೀತಿ,  ಭೂಮೀಲಿ ನೀನಾಗಸದ ಸೊಂಪು

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||

ನನ್ನನ್ನು ಮೋಡಿ ಮಾಡಿಹುದು, ನಿನ್ನ ಸೀದಾ ಸಾದಾ ರೂಪ
ನಿನ್ನ ಮೋಹಕ ನೋಟದಿಂದ, ಹೆಚ್ಚಿಹುದು ಒಲವಿನ ತಾಪ
ನಿನಗಾಗಿ ಪ್ರಾಣ ಕೊಡುವೆ, ಎನ್ನುವುದೇ ನನ್ನ ಆಲಾಪ

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||
 

ಇದೊಂದು ಭಾವಾನುವಾದದ ಯತ್ನ



ಮೂಲ ಗೀತೆ:
ಚಿತ್ರ: ಪ್ಯಾರ್ ಹೀ ಪ್ಯಾರ್

ಗಾಯಕರು: ಮಹಮ್ಮದ್ ರಫಿ

ಮೈ ಕಹೀಂ ಕವೀ ನ ಬನ್ ಜಾವೂ
ತೇರೆ ಪ್ಯಾರ್ ಮೆ ಓ ಕವಿತಾ

ತುಝೆ ದಿಲ್ ಕೆ ಆಯಿನೇ ಮೆ, ಮೈನೆ ಬಾರ್ ಬಾರ್ ದೇಖಾ
ತೇರೆ ಅಖಡಿಯೋಂ ಮೆ ದೇಖಾ, ತೊ ಝಲಕ್‍ತಾ ಪ್ಯಾರ್ ದೇಖಾ
ತೇರಾ ತೀರ್ ಮೈನೇ ದೇಖಾ, ತೊ ಜಿಗರ್ ಕೆ ಪಾರ್ ದೇಖಾ

ತೇರಾ ರಂಗ್  ಹೈ ಸಲೋನಾ ತೇರೆ ಅಂಗ್ ಮೆ ಲಚಕ್ ಹೈ
ತೇರಿ ಬಾತ್ ಮೆ ಹೈ ಜಾದೂ ತೇರೆ ಬೋಲ್ ಮೆ ಖನಕ್ ಹೈ
ತೇರಿ ಹರ್ ಅದಾ ಮೊಹಬ್ಬತ್  ತೂ ಜಮೀ ಕಿ ಧನಕ್ ಹೈ

ಮೆರಾ ದಿಲ್ ಲುಬಾ ರಹಾ ಹೈ, ತೇರಾ ರೂಪ್ ಸೀದಾ ಸಾದಾ
ಯೆ ಝುಕೀ ಝುಕೀ ನಿಗಾಹೇಂ, ಕರೆ ಪ್ಯಾರ್ ದಿಲ್ ಮೆ ಜ್ಯಾದಾ
ಮೈ ತುಜೀ ಪೆ ಜಾನ್ ದೂಂಗಾ, ಹೈ ಯಹೀ ಮೇರಾ ಇರಾದಾ
 

Rating
No votes yet

Comments