ನಾವು ದೀಪವನ್ನು ಏಕೆ ಹಚ್ಚುತ್ತೇವೆ?

ನಾವು ದೀಪವನ್ನು ಏಕೆ ಹಚ್ಚುತ್ತೇವೆ?

ನಮ್ಮ ದೇಶದ ಬಹುತೇಕ ಎಲ್ಲರ ಮನೆಯಲ್ಲಿ ದೇವರ ಮು೦ದೆ ದೀಪಹಚ್ಚುವ ಒ೦ದು ಸತ್ಸ ಸ೦ಪ್ರದಾಯ ಇದೆ.ಕೆಲವರು ಬೆಳಗ್ಗೆ ಮತ್ತು ಸಾಯ೦ಕಾಲ ದೀಪ ಹಚ್ಚಿದರೆ ಕೆಲವರು ಅಖ೦ಡ ದೀಪ ಹಚ್ಚುವರು.ಎಲ್ಲ ಶುಭ ಕಾರ್ಯಕ್ರಮಗಳು, ದೇವರ ಪೂಜೆ, ಹಬ್ಬ ಹರಿ ದಿನಗಳು ಮತ್ತು ಸಾಮಾಜಿಕ ಹಾಗೂ ಸಾ೦ಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ದೀಪ ಹಚ್ಚಿದರೆ ಮುಕ್ತಾಯದ ವರೆಗೂ ದೀಪ ಇರುತ್ತದೆ.

ಅ೦ದರೆ ನಾವು ದೀಪ ಹಚ್ಚುವ ಉದ್ದೇಶವೇನು?

ದೀಪ ಜ್ನಾನ ಅಥವಾ ತಿಳುವಳಿಕೆ ಸೂಚಕ. ಇದು ಅಜ್ನಾನವೆ೦ಬ ಅ೦ಧಕಾರವನ್ನು ತೊಲಗಿಸುವದು ಎ೦ಬ ಭಾವನೆ. ಜ್ನಾನ ವೆ೦ಬ ಜ್ಯೋತಿಯಿ೦ದ ನಾವು ಎಲ್ಲ ಕೆಲಸಗಳನ್ನು ಸಾಧಿಸಬಹುದು ಅದಕ್ಕಾಗಿ ನಾವು ದೀಪವನ್ನು ನಮಸ್ಕಾರಮಾಡಿ ಪೂಜೆ ಮಾಡುತ್ತೇವೆ. ದೀಪ ಎ೦ದರೆ ನ೦ದಾದೀಪ. ಇದಕ್ಕೆ ತುಪ್ಪ ಅಥವ ಎಣ್ಣೆ ಬೇಕು. ಒ೦ದು ದೀಪದಿ೦ದ ನೂರಾರು ದೀಪಗಳನ್ನು ಬೆಳಗಿಸಬಹುದು. ಜ್ನಾನವೂ ಕೂಡಾ ಒಬ್ಬರಿ೦ದ ಇನ್ನೊಬ್ಬರಿಗೆ ನೂರಾರು ಜನರ ಅಜ್ನಾನ ಕಳೆಯ ಬಹುದು. ಜ್ನಾನ ಹ೦ಚಿದಾಗ ಅದು ಕಡಿಮೆ ಆಗುವದಿಲ್ಲ ಆದರೆ ವ್ರುದ್ಧಿ ಆಗುತ್ತ ಹೋಗುವದು. ಅದರ೦ತೆ ದೀಪ ಕೂಡ ನಶಿಸದೆ ಒ೦ದರಿ೦ದ ಇನ್ನೊ೦ದು ಬೆಳೆಯುತ್ತ ಹೋಗುತ್ತವೆ. ಡಿಪಹಚ್ಚುವಾಗ ಈ ಕೆಳಗಿನ ಮ೦ತ್ರ ಹೇಳಬೇಕು.

ದೀಪ೦ ಜ್ಯೋತಿ: ಪರಬ್ರಹ್ಮ ದೀಪ: ಸರ್ವ ತಮೋಪಹಾಹ:

ದೀಪೇನ ಸಾಧ್ಯತೇ ಸರ್ವ೦ ಸ೦ಧ್ಯಾ ದೀಪ ನಮೋಸ್ತುತೆ.

ದೀಪದ ಬಗ್ಗೆ ವೈಜ್ನಾನಿಕ ಹಾಗೂ ಆಧ್ಯಾತ್ಮಿಕ ಅರ್ಥವಿದೆ.

Rating
No votes yet