ನಾವೇಕೆ ಒಂದಾಗಬಾರದು

ನಾವೇಕೆ ಒಂದಾಗಬಾರದು

ನಮ್ಮ ನಾಡಿಗಾಗಿ ನಾವೇನು ಮಾಡುತ್ತಿದ್ದೇವೆ ? ನಮ್ಮ ಸಮಾಜದ ಇಂದಿನ ಪರಿಸ್ಥಿತಿಗೂ ಅಂದು ಆಂಗ್ಲರು ಭಾರತಕ್ಕೆ ಬರುವ ಮೊದಲಿನ ಪರಿಸ್ಥಿತಿಗೂ ಏನೂ ವ್ಯತ್ಯಾಸವೇ ಇಲ್ಲವೆಂದು ಹೇಳಿದರೆ ಬಹುಷ: ತಪ್ಪಾಗಲಾರದು. ಯಾಕೆಂದರೆ ಅಂದಿನ ಹಾಗೆಯೇ ಇವತ್ತೂ ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಸಮಾಜದ ಬಗ್ಗೆ ನಮ್ಮಲ್ಲಿರುವ `ದಿವ್ಯ ನಿರ್ಲಕ್ಷ್ಯ'ವನ್ನು ಹೋಗಲಾಡಿಸಲು ಬಹುಷ: ಇನ್ನೊಮ್ಮೆ ಪರಕೀಯರು ದಾಳಿ ಮಾಡಬೇಕಾಗಬಹುದೇನೂ ?
` ಒಗ್ಗಟ್ಟಿನಲ್ಲಿ ಬಲವಿದೆ ' ಎಂಬ ಮಾತನ್ನು ನಾವೆಲ್ಲರೂ ಚಿಕ್ಕಂದಿನಿಂದಲೂ ಕೇಳಿರುತ್ತೇವೆ. ಅಂತೆಯೆ ನಮ್ಮ ರಾಜ್ಯವನ್ನು ` ರಾಮ ರಾಜ್ಯ ' ವನ್ನಾಗಿ ಮಾಡಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗುವದು ಅತ್ಯವಶ್ಯಕ. ಇಂದು ನಾವು ಸಮಾಜದಲ್ಲಿಯ ಅವ್ಯವಸ್ಥೆಗೆ ಬೇರೆಯವರನ್ನು ದೂರುವ ಕೆಟ್ಟ ಪರಿಪಾಠವನ್ನಿಟ್ಟುಕೊಂಡಿದ್ದೇವೆ. ದುರಸ್ತಿ ಕಾಣದ ರಸ್ತೆಯ ಬಗ್ಗೆ, ಕುಡಿಯುವ ನೀರಿನ ಅವ್ಯವಸ್ಥೆಯ ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ಸರಕಾರಿ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ದೂರುತ್ತೇವೆ. ಆದರೆ ಪ್ರಜ್ಞಾವಂತ ನಾಗರೀಕರಾದ ನಾವು ಈ ಕುರಿತು ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದು ಆಲೋಚಿಸುವದೇ ಇಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳಾದ ನಾವೇ ಪ್ರಭುಗಳು.ಆದರೆ ನಾವಿನ್ನೂ ಕುರಿಗಳಂತೆ ವರ್ತಿಸುದ್ದೇವೆ. ಇನ್ನಾದರೂ ನಾವೆಲ್ಲರೂ ನಮ್ಮ ನಾಡನ್ನು ಸುಂದರ ನಾಡನ್ನಾಗಿಸಲು ಒಗ್ಗಟ್ಟಿನಿಂದ ಅವ್ಯವಸ್ಥೆಯ ವಿರುದ್ಧ ಹೋರಾಡಬಾರದು ?

Rating
No votes yet