ನಿದ್ರೆ ಬರದವರ ಬಗ್ಗೆ

ನಿದ್ರೆ ಬರದವರ ಬಗ್ಗೆ

ಎರಡು ಘಟನೆಗಳು.

ಘಟನೆ ಒಂದು
------------
ಪಶ್ಚಿಮ ಬಂಗಾಳದ ೨೪-ಪರಗಣ ಜಿಲ್ಲೆಯ ಒಂದು ಹಳ್ಳಿ. ಅಲ್ಲಿನ ಶಾಲಾ ಬಾಲಕ ಸಾಮ್ರಾಟ್‌ ಮಂಡಲ್. ಆತ ಒಂದು ದಿನ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕೆಲವರು ಅವನನ್ನು ಅಡ್ಡಗಟ್ಟಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟರು. ಆತ ಕಷ್ಟಪಟ್ಟು ಹೇಗೋ ತಪ್ಪಿಸಿಕೊಂಡು ಬೆಂಕಿ ಆರಿಸಿಕೊಂಡ. ಆತನ ಚಿಕ್ಕಪ್ಪ ಅದೇ ದಾರಿಯಲ್ಲಿ ಬರುತ್ತಿದ್ದವರು ಅವನನ್ನು ನೋಡಿ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿದ. ಗಾಯಗಳಿಂದ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದೇನೋ ಎಂದು ಡಾಕ್ಟರ್‌ ಹೇಳಿದ್ದಾರಂತೆ. ಹಾಗಾದರೆ, ಅವನನ್ನು ಕೊಲ್ಲಲು ಪ್ರಯತ್ನಿಸಿದವರು ಯಾರು? ಕೆಲವು ಮುಸ್ಲಿಂ ಗೂಂಡಾಗಳು. ಏಕೆ? ಅಲ್ಲಿನ ಹಿಂದೂಗಳನ್ನು ಬೆದರಿಸಿ ಅವರನ್ನು ಊರು ಬಿಡಿಸುವ ಪ್ರಯತ್ನ ಇದು. ಈಗ ಆ ಬಾಲಕನ ಕುಟುಂಬ ಇದ್ದ ‌ಅಲ್ಪ ಸ್ವಲ್ಪ ಜಮೀನನ್ನು ಮಾರಿ ಕೊಲ್ಕತಾದ ಸ್ಲಮ್‌ ಒಂದರಲ್ಲಿ ವಾಸಿಸುತ್ತಿದೆ, ಅವರ ನೆಂಟರ ಮನೆಯಲ್ಲಿ. ಮುಂದೇನು ಎಂಬುದು ಭಗವಂತನೆ ಬಲ್ಲ. ಜಮೀನು ಮಾರಿ ಬಂದ ಹಣವೆಲ್ಲಾ ಮಗನ ಚಿಕಿತ್ಸೆಗೆ ಬೇಕಾಗಬಹುದಂತೆ.

ಘಟನೆ ಎರಡು
------------
ಹನೀಫನನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಿದರು. ವಿಚಾರಣೆ ನಡೆಯುತ್ತಿದೆ. ಅತ್ತ ಬಂಧದನದ ಅವಧಿ ವಿಸ್ತರಣೆಯಾಗಿದೆ. ಲಂಡನ್ನಿನಲ್ಲೂ ತನಿಖೆ ಮುಂದುವರಿದಿದೆ.

ಈ ಎರಡೂ ಘಟನೆಗಳಿಗೆ ನಮ್ಮ ಪ್ರಧಾನಿ ಮಂತ್ರಿಯವರ ಹಾಗೂ ಮಾಧ್ಯಮದವರ ಪ್ರತಿಕ್ರಿಯೆಗಳಲ್ಲಿ ಮಾತ್ರ ಅಜಗಜಾಂತರ. ಮೊದಲ ಘಟನೆ ಹೆಚ್ಚಿನ ಪತ್ರಿಕೆಗಳಲ್ಲಿ ವರದಿಯಾಗಲೇ ಇಲ್ಲ. ಪ್ರಧಾನಿಯವರಿಂದ ಪ್ರತಿಕ್ರಿಯೆಯಿಲ್ಲ. ಎರಡನೇ ಘಟನೆ ಎಷ್ಟು ಕವರೇಜ್‌ ಪಡೆಯಿತು ಎಂಬುದು ತಮಗೆಲ್ಲ ತಿಳಿದೇ ಇದೆ. ಹನೀಫನ ಮನೆಯವರು ಅಳುವುದನ್ನು ನೋಡಿ ನಮ್ಮ ಪ್ರಧಾನಿಯವರಿಗೆ ನಿದ್ರೆ ಬರಲಿಲ್ಲ. ಅಷ್ಟೇ ಅಲ್ಲದೇ, ನ್ಯಾಯಬದ್ಧವಾದ ತನಿಖೆ ನಡೆಸುವಂತೆ ಆಸ್ಡ್ರೇಲಿಯಾದವರಿಗೆ ಹೇಳಿದೆ ನಮ್ಮ ಸರ್ಕಾರ. ಹನೀಫನಿಗೆ ಯಾರೂ ಸೀಮೆಣ್ಣೆ ಸುರಿದು ಬೇಂಕಿ ಕೊಡಲು ಯತ್ನಿಸಲಿಲ್ಲ. ತನಿಖೆ ನಡೆಯುತ್ತಿದೆ ಅಷ್ಟೇ. ಇನ್ನೂ ಶಿಕ್ಷೆಯಾಗಲಿಲ್ಲ. ಆದರೂ ಇಷ್ಟೊಂದು ಬೊಬ್ಬೆ. ಆದರೆ, ಸಾಮ್ರಾಟ್‌ ಮಂಡಲ್‌ನಂತಹವರದೆಷ್ಟೋ ಜನರು ನಿತ್ಯವೂ ಪಶ್ಚಿಮ ಬಂಗಾಳ, ಕೇರಳ, ಕಾಶ್ಮೀರಗಳಲ್ಲಿ ತೊಂದರೆಗೊಳಗಾಗುತ್ತಿದ್ದಾರೆ. ಯಾರೂ ಅವರ ಬಗ್ಗೆ ಮಾತನಾಡುವವರೇ ಇಲ್ಲ. ಪೇಪರ್‌ನವರಿಗೆ, ಟೀವಿಯವರಿಗೆ ಇದೊಂದು ಸುದ್ದಿಯಲ್ಲ. ಯಾಕೆಂದರೆ ಅವರೆಲ್ಲ ಹಿಂದೂಗಳು. ನಮ್ಮ ದೇಶದಲ್ಲಿ ಹಿಂದೂಗಳ ಜೀವಕ್ಕೆ ಬೆಲೆ ಕಡಿಮೆ. ಮುಸ್ಲಿಮರ ಜೀವಕ್ಕೆ ಬೆಲೆ ಜಾಸ್ತಿ. ಇದು ಬದಲಾಗುವುದು ಯಾವಾಗ? ಬಹುಶಃ ಜಾತಿ ಮತಗಳನ್ನು ಮೀರಿ ರಾಜಕೀಯ ಮಾಡುವ ಮಟ್ಟಕ್ಕೆ ನಮ್ಮ ರಾಜಕಾರಣಿಗಳು ಬೆಳೆದಾಗ. ತಾವಾಗೇ ಅವರಂತೂ ಬುದ್ಧಿ ಕಲಿಯುವುದಿಲ್ಲ. ನಾವೇ ಒಂದಾಗಿ ಅವರಿಗೆ ಪಾಠ ಕಲಿಸಬೇಕಷ್ಟೇ.

ಮಹಾಜನಗಳು ಏನಂತಾರೆ ಇದಕ್ಕೆ?

Rating
No votes yet

Comments