ನಿನಗಾಗಿ 'ನಾ' ನೋಯುವದಿಲ್ಲ
ಕೊರಗುವದಿಲ್ಲ ಮರಗುವದಿಲ್ಲ
ನಿನಗಾಗಿ ನಾ ಹಂಬಲಿಸುವದಿಲ್ಲ
ಕಾಯುವದಿಲ್ಲ ನೋಯುವದಿಲ್ಲ
ನಿನಗಾಗಿ ನಾ ಹಲುಬುವದಿಲ್ಲ.
ಸೋಲುವದಿಲ್ಲ ಸಾಯುವದಿಲ್ಲ
ನಿನಗಾಗಿ ನಾ ದುಃಖಿಸುವದಿಲ್ಲ
ನನಗಾಗಿ ನೀ ಬದುಕದಿದ್ದಾಗ
ನಿನಗಾಗಿ ನಾ ಕುರುಬುವದಿಲ್ಲ .
ಪ್ರೀತಿಯ ಹಂಗನು ತೊರೆಯುವೆನೆಲ್ಲಾ
ನಿನ್ನನೇ ಮರೆತು ಬಾಳುವೆನೆಲ್ಲಾ
ನಿನ್ನ ಹತ್ತಿರ ಸುಳಿಯುವನಲ್ಲ
ನಿನ್ನನೇ ನಾನು ಮರೆಯುವೆನಲ್ಲಾ .
ನಿನ್ನನೇ ನೆನಸಿ ಕಾಯುವದಿಲ್ಲ
ನನ್ನದೇ ಯೋಚನೆ ನನಗಿಹುದಲ್ಲಾ
'ನೀ ಕೈ ಕೊಟ್ಟವಳೆಂದು' ಕರೆಯುವದಿಲ್ಲ
ನಿನ್ನನೇ ಮನಸಿಂದ ಅಟ್ಟುವನೆಲ್ಲಾ.
ಕೊರುಗುವದಿಲ್ಲ ಮರಗುವದಿಲ್ಲ
ನಿನಗಾಗಿ ನಾ ಹಂಬಲಿಸುವದಿಲ್ಲ
ಕಾಡುವದಿಲ್ಲ ಬೇಡುವದಿಲ್ಲ
ನಿನಗಾಗಿ 'ನಾ' ನೋಯುವದಿಲ್ಲ.
Rating
Comments
ಉ: ನಿನಗಾಗಿ 'ನಾ' ನೋಯುವದಿಲ್ಲ
In reply to ಉ: ನಿನಗಾಗಿ 'ನಾ' ನೋಯುವದಿಲ್ಲ by asuhegde
ಉ: ನಿನಗಾಗಿ 'ನಾ' ನೋಯುವದಿಲ್ಲ
ಉ: ನಿನಗಾಗಿ 'ನಾ' ನೋಯುವದಿಲ್ಲ
In reply to ಉ: ನಿನಗಾಗಿ 'ನಾ' ನೋಯುವದಿಲ್ಲ by bhavanilokesh mandya
ಉ: ನಿನಗಾಗಿ 'ನಾ' ನೋಯುವದಿಲ್ಲ