ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!
ನಿನ್ನ ಆ ಪ್ರೀತಿಯನ್ನು ನಾನಿಂದು ನಿನಗೇ ಮರಳಿಸುತ್ತಲಿರುವೆ
ನಿನ್ನಲ್ಲಿ ದೂರುಗಳೇ ಇರದಂತೆ ನಿನ್ನಿಂದ ನಾ ದೂರ ಹೋಗುತಿರುವೆ
ನನ್ನೀ ಹೃದಯವ ನೀನದೆಲ್ಲಿ ಛಿದ್ರಗೊಳಿಸಿದೆ ಎಂಬುದನೇ ನನ್ನಿಂದ ಮುಚ್ಚಿಟ್ಟೆ
ನಿನ್ನವನನಾಗಿಸಿಕೊಂಬ ಮಾತಂತಿರಲಿ ನಾನಿನ್ನಾರವನೂ ಆಗದಂತೆ ಮಾಡಿಬಿಟ್ಟೆ
ನಿನ್ನ ಮೋಸದ ಚರ್ಚೆ ನಾ ಮಾಡಲೆಂತು ನನ್ನ ನಂಬುಗೆಯ ನಾಚುವಂತೆ ಮಾಡಿಬಿಟ್ಟೆ
ನಿನ್ನ ಆ ಪ್ರೀತಿಯನ್ನು ನಾನಿಂದು ನಿನಗೇ ಮರಳಿಸುತ್ತಲಿರುವೆ
ನಿನ್ನಲ್ಲಿ ದೂರುಗಳೇ ಇರದಂತೆ ನಿನ್ನಿಂದ ನಾ ದೂರ ಹೋಗುತಿರುವೆ
ನಿನ್ನನ್ನು ಹಿಂಬಾಲಿಸುವವರಿನ್ನಾರೂ ಇಲ್ಲಿಲ್ಲ ನಿನ್ನ ಹೆಸರನ್ನು ಕೂಗುವವರು ಇಲ್ಲಾರೂ ಇಲ್ಲ
ಹಿಂತಿರುಗಿ ನೀ ನೋಡಲೇಕೆ ನನ್ನ ಒಲವೇ ನಿನ್ನ ತಡೆಯುವವರೂ ಇಲ್ಲಿ ಇನ್ನಾರೂ ಇಲ್ಲ
ಸಕಲ ಸಂತೋಷಗಳೂ ನಿನ್ನವಾಗಲೆಂದು ಹಾರೈಸಿ ನನ್ನ ಖುಷಿಯ ನಾನು ಅಳಿಸುತಿಹೆನಲ್ಲಾ
ನಿನ್ನ ಆ ಪ್ರೀತಿಯನ್ನು ನಾನಿಂದು ನಿನಗೇ ಮರಳಿಸುತ್ತಲಿರುವೆ
ನಿನ್ನಲ್ಲಿ ದೂರುಗಳೇ ಇರದಂತೆ ನಿನ್ನಿಂದ ನಾ ದೂರ ಹೋಗುತಿರುವೆ
- ಆತ್ರಾಡಿ ಸುರೇಶ ಹೆಗ್ಡೆ
(ಸಾವಿರದ ಒಂಭೈನೂರ ಅರುವತ್ತರ ದಶಕದಾದಿಯ ಒಂದು ಹಿಂದೀ ಚಿತ್ರಗೀತೆಯನ್ನು ಮನದಲ್ಲಿರಿಸಿಕೊಂಡು ಬರೆಯಲಾಗಿದೆ)
Rating
Comments
ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!
ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!
In reply to ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ! by ksraghavendranavada
ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!
ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!
ಉ: ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!