ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ.

(೩೦೨) ನೀವು ಎಂದಾದರೂ ನಕ್ಷತ್ರಗಳನ್ನು ನೋಡಿರುವಿರ? ಹೌದೆಂದಾದರೆ ನೀವು ಸುಳ್ಳರು, ಏಕೆಂದರೆ ನಿಮಗೆ ಕಂಡ ನಕ್ಷತ್ರಗಳಲ್ಲನೇಕವು ಈಗಾಗಲೇ ಸತ್ತು ಸ್ವರ್ಗ ಸೇರಿವೆ. ಇಲ್ಲವೆಂದಾದರೂ ನೀವು ಅನುಮಾನಿಗಳುಃ ಏಕೆಂದರೆ ನಕ್ಷತ್ರಗಳಲ್ಲಿ ಕೆಲವು ಇನ್ನೂ ಉಳಿದಿರುವ ಸಾಧ್ಯತೆ ಇದೆ!

(೩೦೩) ತೃಪ್ತಿಕರ ಭಾವವೆಂಬುದು ಖುಷಿಯಾಗಿರುವುದಲ್ಲ. ಬದಲಿಗೆ ಅದು ಎಲ್ಲ ಚಿಂತೆ, ಯೋಚನೆಗಳು ನಿಮ್ಮ ಒಡನಾಟದಿಂದ ಬೇಸರಗೊಳ್ಳುವುದೇ ಆಗಿದೆ!

(೩೦೪) ನಮ್ಮ ಐಡಿಯಗಳನ್ನು ಪರಸ್ಪರ ಬದಲಿಸಿಕೊಳ್ಳುವ? ಹೇಗಿದೆ ನನ್ನ ಐಡಿಯ?

(೩೦೫) ಚಾಲಾಕಿಯಾಗಿರುವುದೆಂದರೆ ನಮ್ಮ ಸುತ್ತಲೂ ಸಾಕಷ್ಟು ಮೊರ್ಖರನ್ನಿರಿಸಿಕೊಳ್ಳುವುದು ಎಂದರ್ಥ. ಬುದ್ಧಿವಂತನಾಗಿರುವುದೆಂದರೆ ತಮ್ಮ ಬುದ್ಧಿವಂತಿಕೆಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಪ್ರೌಢವ್ಯಕ್ತಿಗಳನ್ನು ನಮ್ಮ ಸುತ್ತಲಿರಿಸಿಕೊಳ್ಳುವುದು ಎಂದರ್ಥ. ಪ್ರೌಢವ್ಯಕ್ತಿಯಾಗುವುದೆಂದರೆ ತಮ್ಮ ಬುದ್ಧಿವಂತಿಕೆಯನ್ನು ತಮ್ಮ ಮತಿಗಿಂತಲೂ ಮೇಲುಸ್ತರದಲ್ಲಿರಿಸಿರುವ ಬುದ್ಧಿವಂತರಿಂದ ಸುತ್ತುವರೆದಿರುವುದೇ ಆಗಿದೆ.

Rating
No votes yet

Comments