ನಿರೀಕ್ಷೆಯೆಂಬ ಹಣತೆ
ನಾನೇನೋ ಹಾಲಿನಂತಹ ಬೆಳದಿಂಗಳ
ಚೆಲ್ಲಿರುವೇ, ಆದರೆ ಇಲ್ಲಿ ನೀನೊಬ್ಬಳೇ!!
ಎಲ್ಲಿ ನಿನ್ನ ಇನಿಯ? ಎಂದು ಹುಣ್ಣಿಮೆಯ ಚಂದ್ರ
ನನ್ನ ನೋಡಿ ಅಣಕಿಸಿ ನಗುತ್ತಿದ್ದಾನೆ,
ಬೇಗ ಬಾ ಗೆಳೆಯ,,,,,,
ನಿನ್ನೊಂದಿಗಿರುವಾಗ ಎಂದೂ ನೆನಪಾಗದ
ಚಿರವಿರಹಿ ರಾಧೆ ಇಂದೆಕೋ ಅತಿಯಾಗಿ ನೆನಪಾಗಿ,
ನನ್ನ ಒಂಟಿತನದ ಸಂಗಾತಿಯಂತೆ ಭಾಸವಾಗುತಿದ್ದಾಳೇ,
ಚಂದ್ರ ನಕ್ಕಿದ್ದಕ್ಕೋ? ಅಥವಾ ನೀನು ನನ್ನ ಜೊತೆ
ಇಲ್ಲದಕ್ಕೋ? ತಿಳಿಯುತ್ತಿಲ್ಲ!!
ಉತ್ತರಿಸಲು ಬರುವೆಯಲ್ಲ?
ಹಾಲ ಬೆಳದಿಂಗಳು ಚದುರಿಹೋಗುವ ಮುನ್ನ ಬಾ,
ನನ್ನ ಸಂಗಾತಿ ರಾಧೆಯ, ಕೃಷ್ಣ ಕರೆದೊಯ್ಯುವ ಮುನ್ನ ಬಾ,
ಬಂದೇ ಬರುವೆಯಲ್ಲ?
ನನ್ನ ಮೌನದೊಳಗೆ ಹೆಪ್ಪುಗಟ್ಟಿರುವ ಬದುಕಿನೆಡೆಗಿನ ಪ್ರೀತಿ
ನಿನ್ನ ಬಿಸಿ ಸ್ಪರ್ಷಕೆ ಕರಗಿ, ಬಾಳ ಜ್ಯೋತಿಯ ಮತ್ತೊಮ್ಮೆ
ನಿನ್ನೊಡಗೂಡಿ ಬೆಳಗಿಸಲು ಕಾತರಿಸಿದೇ,
ನಿನಗಾಗಿ ಹಚ್ಚಿಟ್ಟ ನಿರೀಕ್ಷೆಯ ಹಣತೆ ಆರಿ ಹೋಗುವ ಮುನ್ನ ಬಾ.....
Rating
Comments
ಸೀಮಾ ಜೋಶಿ ಯವರಿಗೆ, ವಂದನೆಗಳು.
ಸೀಮಾ ಜೋಶಿ ಯವರಿಗೆ, ವಂದನೆಗಳು. ಹಾಲ ಬೆಳದಿಂಗಳು ಚದುರಿಹೋಗುವ ಮುನ್ನ ಬಾ,
ನನ್ನ ಸಂಗಾತಿ ರಾಧೆಯ, ಕೃಷ್ಣ ಕರೆದೊಯ್ಯುವ ಮುನ್ನ ಬಾ,........ಮುಂದಿನದು ವೇದ್ಯ. ನೇರನುಡಿಗಳ ಕೊನೆಯ ಸಾಲುಗಳು ಕಾವ್ಯವನ್ನು ಓಪನ್ ಮಾಡಿಬಿಟ್ಟಿವೆ. ಸಾಂಕೇತಿಕ ವಿದ್ದಷ್ಟು ಕಾವ್ಯ ಚನ್ನ ಅನಿಸುತ್ತೆ.