" ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಅದಿನ್ನೂ ಆಕೆ ಹರೆಯಕೆ ಕಾಲಿಟ್ಟ ದಿನಗಳು
ನದಿಯಲಿ ಡೋಣಿ ನಡೆಸುವುದು
ಬಹಳ ಖುಷಿಯ ಸಂಗತಿ ಪರಾಶರ ಮುನಿಯೊಮ್ಮೆ
ಆಕೆಯ ಡೋಣಿಯನೇರಿದ
ಆಗಾಗ ಈ ಸರ್ವ ಸಂಗ ಪರಿತ್ಯಾಗಿ ಮುನಿಗಳೂ
ಹೆಣ್ಣ ಕಂಡೊಡನೆ ಚಂಚಲವಾಗುತ್ತಾರೆ
ಆ ದಿನವೂ ಹಾಗೆಯೆ ಆಯಿತು ದೋಣಿಯ
ಒಂದು ತುದಿಯಲಿ ಪರಾಶರ ಆತನೆದುರು
ಮತ್ತೊಂದು ತುದಿಯಲಿ ಹುಟ್ಟು ಹಾಕುತ
ಕುಳಿತ ಮತ್ಸ್ಯಗಂಧಿ ಪ್ರಶಾಂತ ವಾತಾವರಣ
ಸುಂದರ ಪರಿಸರ ಕಿಲ ಕಿಲನೆ ಸದ್ದು ಮಾಡುತ
ಹರಿವ ನದಿ ಮೆಲ್ಲಗೆ ಸುಳಿವ ಮಂದಾನಿಲ
ಮಾಯೆ ಮೋಹದ ಜಾಲ ಹರಡಿದ್ದಳಲ್ಲಿ
ಏಕಾಂತದಲಿ ಪ್ರಸ್ಪರರು ಸಮ್ಮೋಹದ ಬಲೆಗೆ
ದಿಟ್ಟಿಸಿದನೇಕಾಂತದಲಿ ಆಕೆಯನು
ಬೆಸ್ತಳಾದರೂ ಅವಳಲೊಂದು ರೂಪವಿದೆ ಲಾವಣ್ಯವಿದೆ
ಸಮ್ಮೋಹನಗೊಳಿಪ ಚುಂಬಕ ಶಕ್ತಿ
ಕಳಚಿಬಿತ್ತು ಪರಾಶನ ಇಂದ್ರಿಯ ನಿಗ್ರಹದ ಕವಚ
ಪ್ರಕೃತಿ ಪುರುಷರ ಸಹಜ ಮಿಲನ
ಉತ್ಕಟೆತೆಯ ತಾರಕದಿಂದ ವಾಸ್ತವಕಿಳಿದ ಪರಾಶರಗೆ
ಆಗಿತ್ತು ತನ್ನ ತಪ್ಪಿನ ಅರಿವು ‘ಯೋಜನಗಂಧಿ’ಯಾಗೆಂದು
ಹರಸಿ ಮುನಿಯ ಪಲಾಯನ
ಆ ಉತ್ಕಟ ಮಿಲನದ ಫಲವೆ ಈ ‘ವೇದವ್ಯಾಸ’
ಕಳೆಯಿತು ಕಾಲ ನಂತರದ ದಿನಗಳಲಿ ಶಂತನು ಭೇಟಿ
ಮರು ಪ್ರೇಮ ಕವಲು ದಾರಿಯಲಿ ಸಾಗಿದ ಬದುಕು
ಅಷ್ಟು ಕಾಲ ಮೊದಲ ಮಗನೆ ನೆನಪೆ ಇರಲಿಲ್ಲ ಆಕೆಗೆ
ನೆನೆದಳಾತನನು ಮರುಕ್ಷಣದಲಾತ ಪ್ರತ್ಯಕ್ಷ
ತಾಯಿಯೆದುರು ನಿಂತ ಆಕೆಯ ಅಪ್ಪಣೆಯ ಕೋರಿ
ಈ ವೇದವ್ಯಾಸನದೂ ಒಂದು ರೀತಿಯ
ದುರಂತದ ಬದುಕು ಸತ್ಯವತಿ ಪರಾಶರರ ಕಡೆಗಣನೆ
ಅರ್ಥಶಃ ಕಾಡು ಮನುಷ್ಯ ನಾಗರಿಕತೆಯ ಸೋಂಕಿಲ್ಲ
ನೋಡಲು ಭಯಂಕರ ನರರೂಪದ ಕಾಡು ಪ್ರಾಣಿ
ನೋಡಿದಳು ಒಂದು ಕ್ಷಣ ಆತನನು ಆತ್ಮವಂಚನೆ
ಕಾಡಿತಾಕೆಯನು ಅವನತಮುಖಿಯಾದಳಾಕೆ
ತಾ ಹೆಣೆದ ಬಲೆಯಲಿ ತಾನೇ ಬಂದಿ ಎನಿಸಿತಾಕೆಗೆ
ತಾಯಿಯ ಮನೋಗತ ಅರಿತ ವೇದವ್ಯಾಸನ ಸಮಾಗಮ
ಅಂಬಿಕೆ ಅಂಬಾಲಿಕೆ ದಾಸಿಯರ ಜೊತೆಗೆ
ಒಪ್ಪಿಗೆಯಿತ್ತೊ ಇಲ್ಲವೋ ಅವರವರ ಅಂತರಾತಮ್ಕೆ ವಿಹಿತ
ಅಂಬಿಕೆ ಅಂಬಾಲಿಕೆಯರ ಜೊತೆಯ ಸಮಾಗಮಕೊಂದು
ಕಾರಣವಿದೆ ಎನಬಹುದು ಆದರೆ ದಾಸಿಯದು
ದಾಸ್ಯದ ಬದುಕು ಅನುಭವಿಸಲೇ ಬೇಕು ಅದು ಆಕೆಯ
ಪ್ರಾರಭ್ದವೆ? ಇಲ್ಲ ಶೋಞಣೆಯೆ?
ಆ ಕೂಡುವಿಕೆಗಳೊ ಒಂದು ರೀತಿಯ
ಯಮ ಯಾತನೆಯ ಪ್ರಸಂಗಗಳು
ವೇದವ್ಯಾಸನ ರೂಪ ಕಂಡು ಬಿಳಿಚಿಕೊಂಡ
ಅಂಬಿಕೆ ಪಡೆದ ಮಗು ‘ಪಾಂಡು’ ರೋಗಗ್ರಸ್ತ ಮಗು
ಅಂಬಾಲಿಕೆಯದೂ ಅದೇ ಕಥೆ ಆತನ
ಕರಾಳ ರೂಪ ಕಂಡು ಕಣ್ಮುಚ್ಚಿ ಕೂಡಿದ ಆಕೆಗೆ
ಹುಟ್ಟಿದ ಮಗು ‘ಧೃತರಾಷ್ಟ್ರ’ ಹುಟ್ಟುಗುರುಡ
ನಿರ್ವಿಕಾರದಿಂದ ಕೂಡಿದ ದಾಸಿಗೆ ಹುಟ್ಟಿದ ಮಗು
ಸಮಚಿತ್ತದ ‘ವಿಧುರ’ ಕಳೆಯಿತು ಕಾಲ
ಸಾಗಿದಳು ಸತ್ಯವತಿ ತನ್ನ ಸೊಸೆಯರ ಜೊತೆಗೆ
ವಾಸಪ್ರಸ್ಥಾಶ್ರಮಕೆ ಇಲ್ಲಿ
ಭೀಷ್ಮನದು ನಿಜಕೂ ದುರಂತಮಯ ಬದುಕು
ಮೇಲ್ನೋಟಕ್ಕೆ ಬೀಷ್ಮ ಪಾಂಡವರು ಕೌರವರದು
ತಾತ ಮೊಮ್ಮಕ್ಕಳ ಸಂಬಂಧ
ಆಳಕ್ಕಿಳಿದರೆ ಗೋಚರ ಅದು ಸೂತ್ರವಿಲ್ಲದ ಬಂಧ
ಆದರೆ ಅವರ ನಿಜವಾದ ಅಜ್ಜ ವೇದವ್ಯಾಸ
ಭೀಷ್ಮ ಹಸ್ತಿನಾವತಿಯ ರಾಜಕುವರನಾದರೂ
ಎಲ್ಲ ಸಂಬಂಧಗಳಿಂದ ಮುಕ್ತನಾತ ಆದರೆ
ಮೊಮ್ಮಕ್ಕಳನು ಸದಾಕಾಲ ಪೊರೆದವನು
ವೇದವ್ಯಾಸ ಅವರ ಸಹಾಯಕ್ಕೆ ಎಂದೂ ಬರಲೆ ಇಲ್ಲ
ಎಲ್ಲ ಸಂಬಂಧಗಳಿಂದ ದೂರ ಉಳಿಯುತ್ತೇನೆಂದು
ನಿರ್ಧರಿಸಿದ್ದ ಭೀಷ್ಮ ಆದರೆ ಅವುಗಳಾತನನು ಬಿಡಲಿಲ್ಲ
ಆದರೆ ಸಂಬಂಧಗಳ ಕಟ್ಟು ಪಾಡುಗಳಿಗೆ
ಸಿಗದೆ ದೂರ ಉಳಿದವನು ಈ ವೇದವ್ಯಾಸ !
ನಿಷ್ಕಾಮ ಕರ್ಮಕ್ಕೆ ಭೀಷ್ಮ ಅರ್ಹ
ರಾಜ್ಯದ ಉಳಿವಿಗಾಗಿ ಮೊಮ್ಮಕ್ಕಳ ಏಳಿಗೆಗಾಗಿ
ಹೋರಾಡಿದವ ಅವಮಾನಪಟ್ಟವ
ಕೌರವರ ವಿಶ್ವಾಸ ದ್ರೋಹಕ್ಕೆ ಸಾಕ್ಷಿಯಾದವ
ಪಾಂಡವರಿಗಾಗಿ ತೀವ್ರ ಪರಿತಪಿಸಿದವ
ಚಿಕ್ಕಮ್ಮನ ಸ್ವಾರ್ಥಕ್ಕೆ ಅಧಿಕಾರ ದಾಹಕೆ ದಾಳವಾದವ
ಅನ್ನದ ಋಣಕೆ ಕಟ್ಟು ಬಿದ್ದವ ಈ ಅಮಾಯಕ ಭೀಷ್ಮ!
ದೇವವ್ರತನ ಔನತ್ಯ ಸತ್ಯವತಿಯ ವ್ಯಾಮೋಹದ ಬದುಕು
ಇವೆಲ್ಲ ಬೆಚ್ಚಿ ಬೀಳಿಸುವ ಸಂಗತಿಗಳು
ಸಾಮಾನ್ಯ ಹೆಣ್ಣೊಬ್ಬಳು ಅರಸೊತ್ತಿಗೆಯ ಕನಸು
ಕಂಡು ಅದನು ಸಾಕಾರ ಮಾಡಿಕೊಂಡು
ಕ್ರಮೇಣ ತಾ ಹೆಣೆದ ಬಲೆಗೆ ತಾನೇ ಸಿಲುಕಿ
ದುಃಖದ ಕಡಲಲಿ ಮುಳಿಗೆದ್ದುದು ಒಂದು ಕಥೆಯಾದರೆ
ಆಕೆಯ ಮೂವರು ಮಕ್ಕಳದು ಮತ್ತೊ|ಂದು ಕಥೆ
ಅಪ್ಪನೊಬ್ಬನೆ ಆದರೂ ಪಾಂಡು ಧೃತರಾಷ್ಟ್ರ ಕ್ಷತ್ರಿಯರು
ವಿಧುರ ಶೂದ್ರ ಅಪ್ಪ ಬ್ರಾಹ್ಮಣ ಮಕ್ಕಳು ಕ್ಷತ್ರಿಯರು
ಭೀಷ್ಮ ಔರಸ ಪುತ್ರನಾದರೆ ವೇದವ್ಯಾಸ ಕಾನೀನ
ಹಸ್ತಿನಾಪುರದ ವಂಶ ಬೆಳೆದದ್ದು ತಾಯಿಯಿಂದ
ಇಲ್ಲಿ ಪುರುಷ ನಿರ್ಗುಣ ನಿರಾಕಾರ ರೂಪವಾದರೆ
ತಾಯಿ ಸದ್ಗುಣ ರೂಪಿ ಇಚ್ಛಾಮರಣಿ ಭೀಷ್ಮ
ಒಂದೇ ಸಲಕ್ಕೆ ಸತ್ತು ಹೋಗುವುದಿಲ್ಲ
ಶರ ಪಂಜರದ ಮೇಲೆ ಮಲಗಿ ವ್ಯಥೆಯಿಂದ
ದಿನಗಳೆಯುತ್ತಾನೆ ಬಿಟ್ಟರೂ ಬಿಡದ ವಂಶದ
ಮೋಹ ಪಾಶ ಆತನದು ಸಂಸಾರ ಸುಖ
ಅಧಿಕಾರ ಕೇಂದ್ರದಿಂದ ದೂರವುಳಿದ ‘ದೇವವ್ರತ’
ಭೀಷ್ನನಾದ ಪವಾಡವೆ ‘ಗೀತಾ ಸಾರ ಸರ್ವಸ್ವ’
(ಮುಕ್ತಾಯ)
Comments
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಪಾಟೀಲರೇ, ನಿಮ್ಮ ಅಧ್ಯಯನದ ಫಲವಾಗಿ ಹೊರಹೊಮ್ಮಿದ ಭೀಷ್ಮನ ಕಥನರೂಪಕ ಆಲೋಚನೆಗೆ ಹಚ್ಚುತ್ತದೆ. ಚೆನ್ನಾಗಿದೆ.
In reply to ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) " by kavinagaraj
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
+ 1. ಆದರೂ ಪೂರ್ಣ ಕಥಾನಕ ಇನ್ನು ಹೆಚ್ಚು ಕಂತುಗಳಾಗಬಹುದೆಂದು ನಿರೀಕ್ಷಿಸಿದ್ದೆ :-)
In reply to ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) " by nageshamysore
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ನನ್ನ ಕವನಗಳು ನೀಳ್ಗವನಗಳ ಮಿತಿ ಮೀರುತ್ತಿವೆಯೆ ಎನ್ನುವ ಸಂಸಯ ನನ್ನನ್ನು ಕಾಡಿದ್ದರಿಂದ ವಿಷಯವನ್ನು ಲಂಬಿಸದೆ ಕವನಕ್ಕೆ ಮಂಗಳ ಹಾಡಿದೆ, ಕವನದ ಮೆಚ್ಚುಗೆಗೆ ದನ್ಯವಾದಗಳು.
In reply to ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) " by kavinagaraj
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಬಿಕವಿ ನಾಗರಾಜರವರಿಗೆ ವಂದನೆಗಳು
ನಾನೊಬ್ಬ ಜನ ಸಾಮಾನ್ಯ ವ್ಯಕ್ತಿಗತ ಹಿನ್ನೆಲೆಯಲ್ಲಿ ಮಹಾಭಾರತವನ್ನು ಮತ್ತು ಭೀಷ್ಮ ಹಾಗೂ ಇತರ ಪಾತ್ರಗಳನ್ನು ಜನ ಸಾಮಾನ್ಯನ ದೃಷ್ಟಿಕೋನದಿಂದ ನೋಡಿ ಅಭಿವ್ಯಕ್ತಿಸಿದ್ದೆನೆ ಅದರೂ ಪರಾಶರರಂತಹ ಋಷಿ ಶ್ರೇಷ್ಟನನ್ನು ಸಾಮಾನ್ಯ ದೃಷ್ಟಿಕೋನದಿಂದ ನೋಡುವಾಗ ಯಾಕೋ ಮುಜುಗರವನ್ನು ಅನಭವಿಸ ಬೆಕಾಗಿ ಬಂತು ಅದರೂ ಮೆಚ್ಚಿದ್ದೀರಿ ದನ್ಯವಾದಗಳು..
In reply to ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) " by H A Patil
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಕವಿ ನಾಗರಾಜರವರಿಗೆ ವಂದನೆಗಳು ತಮಗೆ ಪ್ರತಿಕ್ರಿಯಿಸುವಾಗ ವೇದವ್ಯಾಸ ಎಂದು ಬರೆಯಬೇಕಾದಲ್ಲಿ ಪರಾಶರ ಎಂದು ಬರೆದಿದ್ದೇನೆ ಕ್ಷಮೆಯಿರಲಿ,
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಪಾಟೀಲರೆ ಚೆನ್ನಾಗಿ ಮೂಡಿ ಬಂದಿದೆ
ಅದೇನೋ ಪ್ರಕೃತಿ ಸದಾ ವಿಸ್ಮಯವೆ
ತಂದೆ ಕಾಮಿಯಾದರೆ ಮಗ ನಿಷ್ಕಾಮಿ,
ಮೊಮ್ಮಕಳು ರಾಜ್ಯಕ್ಕಾಗಿ ಹೊಡೆದಾಡುವಾಗಲು,
ಅಜ್ಜ ಬೀಷ್ಮ ಮಾತ್ರ ನಿರ್ವಿಕಾರಿ
ರಾಜ್ಯವನ್ನು ತೊರೆದು ಹೋದ
ಪಾಂಡು ವನವಾಸಕ್ಕೆ,
ಆದರೆ ರಾಜ್ಯಕ್ಕಾಗಿ ಬಡಿದಾಡಿದರು
ಪಾಂಡುವಿನ ಮಕ್ಕಳು ಪಾಂಡವರು, ಕೌರವರು
ಉತ್ತರವಿಲ್ಲದ ತರ್ಕಗಳು !
In reply to ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) " by partha1059
ಉ: " ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "
ಪಾರ್ಥಸಾರಥಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆಗೆ ನನ್ನ ಸಹಮತವಿದೆ, ಮಾನವನ ಗುಣ ಸ್ವಭಾವಗಳನ್ನು ಅದ್ಭುತವಾಗಿ ನಿರೂಪಿಸು ವಂತಹದು ಮಹಾಭಾರತ, ಈ ಕಾವ್ಯದ ಅ ನೇಕ ಪಾತ್ರಗ ಳು ನನ್ನನ್ನು ಕಾಡಿವೆ ಆ ಪೈಕಿ ಭೀಷ್ಮನ ಪಾತ್ರವೂ ಒಂದು, ಕವನ ಬರೆದು ಪ್ರಕಟಿಸಿದ ನಂತರ ನನ್ನ ಬರವಣಿಗೆಯ ಧೋರಣೆ ಉಚಿತವೆ ಎನ್ನುವ ಅಳುಕು ನನ್ನನ್ನು ಕಾಡಿತ್ತು, ನಿಮ್ಮೆಲ್ಲರ ಪ್ರತಿಕ್ರಿಯೆಯಿಂದ ನಿರಾಳವಾಯಿತು ಧನ್ಯವಾದಗಳು..