*ನೀನಿರಲು ಗೆಳತಿ ನಾಕು*
ಚೇತನವು ನೀ ನನ್ನ ಬಾಳಿಗೆ
ನೀ ಬರಲು ಸ್ವಾಗತವು ನಯನದೊಳಗೆ
ಪ್ರೀತಿತುಂಬಿ ಎದೆಯೊಳಗೆ
ಗೆಳತಿ ನೀ ಬಾ ಒಳಗೆ ಈ ಗಳಿಗೆ
ಬರಲಿ ನನಗೆ ನೂರುಚಿಂತೆ
ನೀನಿರು ಜೊತೆಗೆ ನನ್ನ ಕಾಂತೆ
ನಗುವೆ ಮರೆತು ಎಲ್ಲ ಚಿಂತೆ
ಹಾರುವೆ ಮರಿಹಕ್ಕಿಯಂತೆ
ಇರಲಿ ನೂರು ಬದುಕ ಬವಣೆ
ಇರಲು ನೀನು ಸಾಕು ರಮಣಿ
ತೂರಿ ಬಿಡುವೆ ಕವಣೆ
ಹಾರಿ ಬರುವೆ ನಿನ್ನ ಬಳಿಗೆ ಮೃಗನಯನೆ
ಅರಳಿ ಮನದೊಳಗೆ ನೂರು ಆಸೆ
ಕೊರಳ ಹಿಡಿದಿದೆ ನುಡಿಯದೆ ಕೂಸೆ
ಸರಳವಲ್ಲವೆ ಈ ನನ್ನ ಕವನದ ಬಾಷೆ
ವಿರಳವು ಕೇಳು ನನ್ನಂತವರು ಬಿಡು ಸಂಶೆ
ಕೃಷ್ಣಮೊರ್ತಿಅಜ್ಜಹಳ್ಳಿ
Rating