ನೀನೊಂದು ಮುಗಿಯದ ಕನಸು
ನೀನೊಂದು ಮುಗಿಯದ ಕನಸು
ನಮ್ಮಿಬ್ಬರ ಬೇಟಿ ಆಕಸ್ಮಿಕ, ಆದ್ರೆ ಈ ಮಟ್ಟ ತಲುಪುತ್ತೆ ಅನ್ಸಿರ್ಲಿಲ್ಲ.......
ನೀನೊಂದು ಸುಂದರ ಕನಸು ಹುಡುಗ, ಕನಸಾಗೆ ಇರು, ಎಂದು ಈ ಕನಸ ಒಡೆಯ ಬೇಡ,
ಭಯ ನನಗೆ ಯಾರದ್ರು ಈ ಕನಸ ಒಡೆದು ಬಿಟ್ರೆ, ಬೇಡ ಅದಾಗ್ಬಾರ್ದು, ಈ ಕನಸಿನ ಒಳಗೆ ಯಾರು ಬರ್ಬಾರ್ದು,ಅದು ನಮ್ಮಿಬ್ಬರ ಪ್ರಪಂಚ ಮಾತ್ರ, ಅಲ್ಲಿ ನಾನು ಮತ್ತು ನೀನು, ಬೇರೆ ಮಾತುಗಳೆ ಇರ್ಬಾರ್ದು ಅಲ್ಲಿ,ತುಂಬಾ ನೋವಾಗುತ್ತೆ ಕಣೊ, ನೋಡು ನೀನು ಬೇಕಾದ್ರೆ ನನ್ನಿಂದ ದೂರ ಹೊಗ್ಬೋದು, ಆದ್ರೆ ಯಾವ ಸುಳಿವು ಕೊಡದೆ ಹೊಗ್ಬಿಡು, ಎಲ್ಲಿಗೆ ಹೋಕ್ತೀಯ ಅಂತಾನು ಹೇಳ್ಬೇಡ, ಆಕಾಶದಲ್ಲಿ ಕಾಮನಬಿಲ್ಲು ಮರೆಯಾಗುತ್ತಲ್ಲ ಹಾಗೆ,ನೀರಲ್ಲಿ ಚಂದ್ರಬಿಂಬ ಮರೆಯಾಗುತ್ತಲ್ಲ ಹಾಗೆ ಗೊತ್ತೆ ಹಾಗ್ಬಾರ್ದು ನನಿಗೆ, ಹಾಗೆ ಹೋಗ್ಬಿಡು, ನಾನು ನಿನ್ನ ಕಲ್ಪನೆಯಲ್ಲಿ ಹುಡುಕ್ಕ್ತಾನೆ,ನೆನುಪುಗಳ ನೆನಪಲ್ಲೆ ಬದುಕ್ತಿನಿ,ಅಸ್ಟೆ ಸಾಕು ಬದುಕಲು, ಈ ಪ್ರೀತೆನೆ ಹಾಗೆ.....ನೀನೊಂದು ಸುಂದರ ಕನಸು, ಕನಸಾಗೆ ಇರು..
Rating