ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ.


(೨೪೨) ನಿಸರ್ಗದ ವಿರುದ್ಧದ ಸೋಲುವ ಯುದ್ಧವನ್ನು ಗೆಲುವೆಂದು ಭಾವಿಸುವ ಮಾನವನ ಪ್ರಯತ್ನದ ಫಲವೇ ’ನಗರ’.


(೨೪೩) ಭೂಮಿಯ ಬೃಹತ್ ಕಸದಬುಟ್ಟಿಗಳ ಔಪಚಾರಿಕ ಹೆಸರೇ ’ನಗರೀಕರಣ’.


(೨೪೪) " ’ಅಭ್ಯಾಸವು ಬೋಧನೆಗಿಂತಲೂ ಮಿಗಿಲು’ ಎಂಬ ಈ ವಾಕ್ಯವೂ ಒಂದು ಬೋಧನೆಯೇ" ಎಂದು ಭಾವಿಸುವುದು ಒಂದು ದುರಭ್ಯಾಸವಲ್ಲವೆ?!


(೨೪೫) ನೀವು ಎಂದರೆ ಏನೆಂದು ಇತರರು ಭಾವಿಸಿದ್ದಾರೋ ಅದರ ಒಟ್ಟಾರೆ ಮೊತ್ತವೇ ನೀವು. ಆ ನಂಬಿಕೆಯಾಚಿಗೆ ಅವರ ಪಾಲಿಗೆ ನೀವಿಲ್ಲ. ಆ ನಂಬಿಕೆಯಾಚೆಗಿನ ನಿಮಗೆ ಅವರುಗಳ ಅವಶ್ಯಕತೆಯಿಲ್ಲ!

Rating
No votes yet

Comments