ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ
ಯಡ್ಡಿ ಗಲಾಟೆ
ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿ ಕೇಳಿಸುತ್ತಲೆ ಇಲ್ಲ , ಮತ್ತು ವಾಲ್ಯೂಮ್ ಜಾಸ್ತಿ ಮಾಡಿದರೆ ಸೊಸೆ ಕೂಗಿಕೊಳ್ಳುತ್ತಾಳೆ. ಅಷ್ಟರಲ್ಲಿ ತೆರೆದ ಬಾಗಿಲಿನಿಂದ ಮೊಮ್ಮಗ ಯಡ್ಡಿ (ಯದುಗಿರಿ ) ಓಡಿಬಂದು ಕುಳಿತ ಕೈಯಲ್ಲಿ ಬ್ಯಾಟು, ಹಿಂದೆಯೆ ಅವನ ತಂಗಿ ಪ್ರೇಮ. ಆಟದ ಮದ್ಯೆ ಬಂದಿದ್ದಾನೆ ಅಂದರೆ ಏನಾದರು ತರಲೆಯೆ.
’ಏಕೊ ಆಟ ಬಿಟ್ಟು ಬಂದ’ ಅಂತ ಕೇಳಿದರು , ಅವನು ಸೀರಿಯಸ್ ಆಗಿ ತಂಗಿ ಕಡೆ ನೋಡಿದ ಏನು ಹೇಳಬೇಡ ಅನ್ನುವಂತೆ, ಅವಳೊ ಡೊಂಟ್ ಕೇರ್ ’ಜಯಲಲಿತ’ ಜಾತಿ ಬೇಡ ಅಂದರೆ ಖಂಡೀತ ಮಾಡ್ತಾಳೆ
’ತಾತ ಇವನು ಎದುರುಮನೆ ಕಿಟಕಿಯ ಗಾಜು ಹೊಡೆದ’ ಒಳಗಿದ್ದ ಅವರಮ್ಮನಿಗೂ ಕೇಳುವಂತೆ ಹೇಳಿದಳು
’ನಿಜವೇನೊ ನಿನ್ನದು ದಿನ ತರಲೆಯೆ ಆಗಿಹೊಯಿತು ’ ರೇಗಿದರು ವೆಂ.ಚ.
"ನಂಜನಗೂಡಿನ ದೇವರ ಆಣೆ ತಾತ ನನಗೇನು ತಿಳಿದಿಲ್ಲಿ" ಉಲಿದ ಯೆಡ್ಡಿ
"ಆದರೆ ನೋಡಿದ ಇವಳ ಸಾಕ್ಷಿ ಇದೆಯಲ್ಲ" ಅಂತ ನ್ಯಾಯದೀಶರ ದ್ವನಿಯಲ್ಲಿ ಕೇಳಿದರು ವೆಂಕಟಚಲಯ್ಯ ಈಗ ವರಸೆ ಬದಲಿಸಿದ ಯಡ್ಡಿ
"ನಾನೊಬ್ಬನೆ ಏನಲ್ಲ ತಾತ ಕುಮಾರ, ದರ್ಮಾನು ಗಾಜು ಒಡೆದಿದ್ದಾರೆ" ಅಂದ. ಏನಿದು ಇವನ ವರಸೆ ಎಂದುಕೊಂಡು "ಅವರೆಲ್ಲ ಯಾರು? "ಅಂತ ಪ್ರಶ್ನಿಸಿದರು
"ಅವರೆಲ್ಲ ನನಗಿಂತ ಮುಂಚೆ ಕ್ಯಾಪ್ಟನ್ ಆಗಿದ್ದೋರು" ಅಂದ ಅವನ ಮುಖದಲ್ಲಿ ಕುಹಕದ ನಗು
"ಅವರನ್ನು ಕರಿ ನಿಮಗೆಲ್ಲ ಹಿಡಿದು ಬೆನ್ನ ಮೇಲೆ ಗುದ್ದು ಕೊಡ್ತೀನಿ ಆಗಲೆ ಬುದ್ದಿ ಬರೋದು" ಅಂತ ರೇಗಿದರು ವೆಂ.ಚ.
"ಆಗಲ್ಲ ತಾತ ನೀನು ಅವರಿಗೆ ಶಿಕ್ಷೆ ಕೊಡಲಾರೆ"ಮತ್ತೆ ಅವನ ನಗು
ಏತಕ್ಕೆ ಆಗಲ್ಲ ಅಂತ ರೇಗಿದರು ವೆಂ.ಚ.
"ಅವರು ನಿನ್ನ ಮೊಮ್ಮಕ್ಕಳಲ್ಲ ಪಕ್ಕದ ಮನೆ ಭಾರದ್ವಾಜರ ಮೊಮ್ಮಕ್ಕಳು ಅವರಾದರೆ ಮಕ್ಕಳ ಆಟಕ್ಕೆ ಏನು ಅನ್ನೋದೆ ಇಲ್ಲ ಹೋಗ್ಲಿ ಬಿಡು ಅಂತ ಸುಮ್ಮನಾಗ್ತಾರೆ ನೀನು ಅವರಿಗೆ ಹೇಗೆ ಶಿಕ್ಷೆ ಕೊಡ್ತಿಯಾ?" ಅಂದ ಎಲಾ ಇವನ ಏನು ಇವನ ವರಸೆ ಅಂತ ಕಣ್ಣು ಪಿಳುಕಿಸಿದರು
ತಾತ ನಿನಗೆ ಇನ್ನು ಗೊತ್ತಾಗಲಿಲ್ವ ಅವನು ಈಗಿನ ಕರ್ನಾಟಕದ ಭೂಹಗರಣ ಕುರಿತು ಯಡಿಯೂರಪ್ಪನವರ ಹೇಳಿಕೆ ಬಗ್ಗೆ ಚರ್ಚಿಸುತ್ತಿದಾನೆ ಅಂತ ನಗಲು ಶುರು ಮಾಡಿದಳು ಪ್ರೇಮ ಯಡ್ಡಿಯ ತಂಗಿ
ದಂಗಾದರು ವೆಂಕಟಚಲಯ್ಯ , ತಮ್ಮ ಮೊಮ್ಮಗನಿಗೆ ಈಗಲೆ ಎಷ್ಟೊಂದು ರಾಜಕೀಯ ಜ್ಙಾನ ಕರ್ನಾಟಕ ಮಾತೆ ಧನ್ಯಳು ಈಗಲೆ ಮುಂದಿನ ಮುಖ್ಯಮಂತ್ರಿಯನ್ನು ಹೆತ್ತುಬಿಟ್ಟಿದ್ದಾಳೆ ಅನ್ನಿಸಿ ಅದನ್ನೆ ಅವನಿಗೆ ಹೇಳಿದರೆ
’Again your are wrong ತಾತ ನಾನು ಮುಖ್ಯಮಂತ್ರಿ ಆಗಲ್ಲ ಆದರೆ ಸರ್ಕಾರಿ ಉದ್ಯೋಗಿಯಾಗಿ ರೆಟೈರ್ಡ್ ಆಗಿ ಪಾರ್ಕಿನಲ್ಲಿ ಮರದ ಕೆಳಗೆ ಕುಳಿತು ರಾಜಕೀಯ ಮಾತಾನಾಡುವ ಮುದುಕನಾಗ್ತೀನ’ ಅಂದ. ಇದೇನು ಅಂದು ಕೊಳ್ಳುವಲ್ಲಿ ಒಳಗಿನಿಂದ ಸೊಸೆ ಈಚೆಗೆ ಬಂದಳು
"ನೋಡಿ ಎಲ್ಲ ನಿಮ್ಮಿಂದಲೆ ಆಗಿರುವುದು ಬೇಡ ಅಂದರು ಓದುವ ಮಕ್ಕಳನ್ನು ಸಂಜೆ ವಾಕಿಂಗ್ ಅಂತ ಕರೆದುಕೊಂಡು ಹೋಗ್ತೀರಿ , ಅಲ್ಲಿ ಅವನು ಆಡುವ ಬದಲು. ಮರದ ಕೆಳಗೆ ಕುಳಿತು ಹರಟುವ ಹಾಳು ಮುದುಕರ ಮಾತು ಕೇಳಿ ಕೇಳಿ ಇವನು ಹೀಗಾಗಿದ್ದಾನೆ. ನಾನು ಬೇಡ ಅಂದರೆ ನೀವು ಕೇಳಲ್ಲ ಇನ್ನು ನಿಮ್ಮ ಮಗನೋ ದಶರಥಪುತ್ರ ಶ್ರೀರಾಮ" ಎಂದು ಕೂಗಾಡತೊಡಗಿದಳು. ಬಾಣ ತನ್ನ ಕಡೆಗೆ ತಿರುಗಿದ್ದು ಕಂಡ ವೆಂಕಟಾಚಲಯ್ಯ ಕಡೆಗೆ ಸಾಯಂಕಾಲದ ಕಾಫಿಗು ಕತ್ತರಿ ಬಿತ್ತು ಅಂತ ಅರ್ಥ ಮಾಡಿಕೊಂಡು ಟಿ.ವಿ. ಆರಿಸಿ ಒಬ್ಬರೆ ಹೊರಗೆ ಹೊರಟರು
Comments
ಉ: ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ
In reply to ಉ: ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ by malathi shimoga
ಉ: ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ
ಉ: ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ