ನೆನಪಿನಲ್ಲುಳಿದ ಚಿತ್ತಾಲರ ಕಥೆ - ಅಪಘಾತ
ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ. ಇವತ್ತು ಈ ಬಗ್ಗೆ http://kannada-kathe.blogspot.com/2007/02/blog-post.html ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ - ವಿಚಿತ್ರ ಕಥೆಯಾಗಿ , ಮಾನವ ಸಂಬಂಧಗಳ ಕುರಿತು ಅದು ಹೊಳೆಯಿಸುವ ಬದುಕಿನ ಸತ್ಯದಿಂದಾಗಿ - ನನ್ನ ನೆನಪಿನಲ್ಲಿ ಉಳಿದಿದೆ . ಅಲ್ಲಿಯ ನಾಲ್ಕು ಸಾಲನ್ನು ಅನಾಮತ್ತಾಗಿ ಇಲ್ಲಿ ಎತ್ತಿ ಹಾಕಿ , ನಾನು ಮುಂದುವರೆಸಿದ್ದೇನೆ.
ಈಗ ಕಥೆ ಕೇಳಿ . "ಈ ಕಥೆ ಪ್ರಾರಂಭವಾಗುವುದು ಒಂದು ಅಪಘಾತದಲ್ಲಿ ತೀರಿಕೊಂಡರೆನ್ನಲಾದ ಒಂದು ಶವವನ್ನು ಗುರುತಿಸಬೇಕೆಂದು ಪೋಲೀಸನೊಬ್ಬನ ಕೋರಿಕೆಯಿಂದ. ಆ ಶವದಲ್ಲಿ ಎಸ್.ವಿ.ಕುಲಕರ್ಣಿ ಎಂಬವರ ರೈಲ್ವೆ ಪಾಸು ದೊರೆತದ್ದರಿಂದ ಅದು ಅವರದೇ ಶವ ಅನ್ನುವ ಗುಮಾನಿ. ಆದರೆ ಪೋಲೀಸಿನವ ಬರುವ ಮನೆಯಲ್ಲಿ ಮೂವರು ಎಸ್.ವಿ.ಕುಲಕರ್ಣಿಗಳಿದ್ದಾರೆ [ಸುರೇಶ, ಸುಭಾಶ, ಸುಧಾಕರ].. " ಮೂವರೂ ಹೊರಗೆ ಹೋಗಿದ್ದಾರೆ . ಅವರು ಮರಳಿ ಮನೆಗೆ ಬರುವವರೆಗೆ ಅಥವಾ ಯಾರು ಸತ್ತವರು ಎಂಬುದು ತಿಳಿಯುವವರೆಗೆ ಮನೆಯ ಯಾರೆಲ್ಲ ಹೇಗೆ ಹೇಗೆ ವಿಚಾರ ಮಾಡುತ್ತಾರೆ ? ಅವರವರ ಹೆಂಡಂದಿರು ಸತ್ತವನು ತಮ್ಮ ಗಂಡನಾಗಿರದೇ ಮೈದುನರಲ್ಲಿ ಯಾರಾಗಿರಲಿ ಎಂದು ಯೋಚಿಸಿದರೆ , ತಾಯಿ ? ಅವಳಿಗೆ ಎಲ್ಲ ಮಕ್ಕಳೂ ಅಷ್ಟೇ . ಆಗಿರುವದಾದರೂ ಏನು ? ಸತ್ತವರು ಯಾರು? ಸಿಕ್ಕರೆ ಕತೆ ಓದಿ.
ಇಲ್ಲಿ ಅಪಘಾತ ಆಗಿರೋದು ಸಂಬಂಧಗಳಿಗೂ.