ನೆನ್ನೆ
- ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್ ಕಡಿಮೆನೇ ಇತ್ತು. ಅರ್ಧ ದಿನ ಕೆಲಸ ಮುಗಿಸಿ ಹೊರಟಾಗ ರಸ್ತೆಯೆಲ್ಲಾ ಖಾಲಿ ಖಾಲಿ, ಸದ್ಯ ಇವತ್ತೊಂದು ದಿನ ಹೊಗೆ/ಶಬ್ದ ಕಡಿಮೆ ಇರತ್ತೆ ಅಂತ ಖುಷಿಯಾಯ್ತು.
- ಅಕ್ಕನ ಮನೆ ತಲುಪಿದಾಗ ೧ ಓವರ್ ಆಗಿತ್ತು. ಆಮೇಲೆ ನಡೆದದ್ದು ನಮ್ಮವರ ಆಟ. ಪಾಕಿಸ್ತಾನದ ೬ನೇ ವಿಕೆಟ್ ಬಿದ್ದಾಗ ಪಕ್ಕದ ಮನೆಯವನು ಒಂದು ಆಟಂ ಬಾಂಬ್ ಸಿಡಿಸಿದ. ಅಬ್ಬ ಆ ಸದ್ದಿಗೆ ಮನೆಯ ಫೌಂಡೆಶನ್ ಅಲುಗಾಡಿದಂತಾಯ್ತು. ಪಾಪ ರಾತ್ರಿಯ ಹೊತ್ತು ಆ ಶಬ್ಧಕ್ಕೆ ಸಣ್ಣ ಮಕ್ಕಳ, ವಯಸ್ಸಾದವರ ಕಥೆ ಹೇಗಾಗಬೇಡ. ಊರಲ್ಲಿದ್ದ ತೋಟ ಕೋವಿ ತಂದು ಅವನು ಪಟಾಕಿ ಹುಡಿಸಿದ ತಕ್ಷಣ ನಾನು ಟ್ರಿಗರ್ ಎಳೆದು ಅವನಿಗೆ ಹೊಡೆಯುವ ಯೋಚನೆ ಬಂತು :) (ಆ ಸದ್ದಿಗೆ ಯಾರು ಹೊಡೆದ್ರು ಅಂತ ಗೊತ್ತಾಗ್ಬಾರ್ದು).
- ಮ್ಯಾಚ್ ಮುಗಿದ ಮೇಲೆ ಶುರುವಾಯ್ತು ನೋಡಿ ಪಟಾಕಿಗಳ ಸದ್ದು ಆಮೇಲೆ ಬೈಕಿಂದ ಕಾರಿಂದ ರಸ್ತೆಯಲ್ಲಿ ಮನಬಂದಂತೆ ತಿರುಗಿದ ಜನರು ನನ್ನ ಊಹೆಯನ್ನು ತಪ್ಪಾಗಿಸಿದ್ದರು. ೧೦ ಘಂಟೆ ಹೊಗೆ/ಶಬ್ದ ಕಡಿಮೆಯಾಗಿ ತಣ್ಣಗಿದ್ದ ಬೆಂಗಳೂರು, ಮ್ಯಾಚ್ ಮುಗಿದ ತಕ್ಷಣವೇ ಕೇವಲ ೧ ಘಂಟೆಯಲ್ಲಿ ಹೊಗೆ/ಶಬ್ದದಿಂದ ತುಂಬಿ ಹೋಗಿ ನಿಶ್ಯಬ್ಧವಾಗಿದ್ದ ರಾಜಧಾನಿಯನ್ನು ಶಬ್ಧಮಯವಾಗಿಸಿತ್ತು.
- ನನ್ನ ಮನೆಗೆ ನಡೆದುಕೊಂಡು ಹೋಗುವಾಗ ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ ಒಂದು ೧೦೦ ಜನ ಸುತ್ತುವರಿದು ಕೇಕೆ ಹಾಕುತ್ತಿದ್ದರು. ಅಲ್ಲೇ ಇದ್ದ ಬಾರ್, ದರ್ಶಿನಿ ಜನರಿಂದ ತುಂಬಿ ತುಳುಕುತ್ತಿತ್ತು. ಸ್ವಲ್ಪ ಮುಂದೆ ನವರಂಗ್ ಸಿಗ್ನಲ್ ಹತ್ತಿರ ಸ್ವಲ್ಪ ಯುವಕರ ಗುಂಪೊಂದು ತುಮಕೂರು ಕಡೆಯಿಂದ ಬರುವ ವಾಹನಗಳನ್ನು ನಿಲ್ಲಿಸಿ ಅವರಿಂದ ಮೇರಾ ಭಾರತ ಮಹಾನ್ ಅಥವಾ ಇನ್ನೇನೋ ಕೂಗಿಸಿ ಹೋಗಲು ಬಿಡುತ್ತಿದ್ದರು.
- ಇನ್ನೊಂದು ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಒಂದು ೨೦-೨೫ ಯುವಕರ ಗುಂಪೊಂದು ಕೈನಲ್ಲಿ ಬೀರ್ ಬಾಟಲ್ ಹಿಡಿದುಕೊಂಡು ಕೇಕೆ ಹಾಕಿಕೊಂಡು ಹೋಗುತ್ತಿದ್ದರು, ರಸ್ತೆಯ ಪಕ್ಕದ ಫುಟ್ಪಾತಲ್ಲಿ ಆ ದಿನ ಹೊಟ್ಟೆಗೆ ಏನೂ ಇಲ್ಲದೆ ಹಸಿವಿನಿಂದ ಅಂಗಾತ ಮಲಗಿದ್ದ ಮುದಿ ದಂಪತಿಗಳು ಗಾಬರಿಯಿಂದ ಎದ್ದು ಅವರನ್ನೇ ನೋಡುತ್ತಿದ್ದದ್ದು ಅವರಿಗೆ ಕಾಣಿಸುತ್ತಿರಲಿಲ್ಲ.

Rating
Comments
ಉ: ನೆನ್ನೆ
In reply to ಉ: ನೆನ್ನೆ by kavinagaraj
ಉ: ನೆನ್ನೆ
ಉ: ನೆನ್ನೆ
In reply to ಉ: ನೆನ್ನೆ by ksraghavendranavada
ಉ: ನೆನ್ನೆ