ನ್ಯೂ ಪೊಲೀಸ್ ಸ್ಟೋರಿ ಎಂಬ ಚಲನಚಿತ್ರದ ಒಂದು ದೃಶ್ಯ
ಒಬ್ಬ ತಂದೆ ಮಗನ ಜೊತೆ ಬೀದಿಯಲ್ಲಿ ಇದ್ದಾನೆ. ಮಗನಿಗೆ ಹಸಿವಾಗಿದೆ. ತಂದೆಯ ಕೈಯಲ್ಲಿ ಬಿಡಿಗಾಸಿಲ್ಲ. 'ಅಪ್ಪ ನನಗೆ ತುಂಬಾ ಹಸಿವು' - ಹುಡುಗ ಮತ್ತೆ ಹೇಳುತ್ತಾನೆ. ತಂದೆಯು 'ಇಲ್ಲೇ ಇರು - ಈಗ ಬಂದೆ' ಎಂದು ಹೇಳಿ ಬೀದಿಯನ್ನು ದಾಟಿ ಅಲ್ಲಿರುವ ಒಂದು ಅಂಗಡಿಯಿಂದ ತಿಂಡಿಯೊಂದನ್ನು ಎತ್ತಿಕೊಂಡು ಮಗನತ್ತ ಓಡುತ್ತಾನೆ. ಅಂಗಡಿಯವರು 'ಕಳ್ಳ, ಕಳ್ಳ! ಅವನನ್ನು ಹಿಡಿಯಿರಿ' ಎಂದು ಕಿರುಚಿ ಅವನನ್ನು ಹಿಡಿಯಲು ಹಿಂದೆ ಬರುತ್ತಾರೆ. ಸಮೀಪದಲ್ಲಿದ್ದ ಒಬ್ಬ ಪೊಲೀಸ್ ಕೂಡ ಅತ್ತ ಧಾವಿಸುತ್ತಾನೆ. ಓಹ್, ಬೀದಿಯನ್ನು ಅವನು ಓಡುತ್ತ ದಾಟುತ್ತಿರುವಾಗ ವೇಗವಾಗಿ ಬರುವ ಒಂದು ವಾಹನವು ಅವನಿಗೆ ಡಿಕ್ಕಿ ಹೊಡೆದು ಎಚ್ಚರತಪ್ಪಿ ಬೀಳುತ್ತಾನೆ. ಅಲ್ಲಿಗೆ ಬಂದ ಪೊಲೀಸನು 'ಕಳ್ಳ! ನಿನಗೆ ಹಾಗೆಯೇ ಆಗಬೇಕು ' ಎನ್ನುತ್ತಾನೆ. ಆಗ ಅಲ್ಲಿ ಬಂದ ಮೇಲಧಿಕಾರಿಯಾದ ಜಾಕಿ ಚಾನ್ ನು 'ಇದು ಸರಿಯಲ್ಲ ; ಇದು ಸಹಾಯಮಾಡುವ ರೀತಿಯಲ್ಲ. ಮೊದಲು ಅಂಬುಲೆನ್ಸ್ ಅನ್ನು ತರಿಸು' ಎಂದು ಹೇಳುತ್ತಾನೆ.
ನಂತರ ಆ ಮಗುವನ್ನು ಸಂತಯಿಸುತ್ತಾನೆ - "ಒಮ್ಮೊಮ್ಮೆ ಜಗತ್ತು ನಮಗೆ ಅನ್ಯಾಯ ಮಾಡುತ್ತದೆ ಎಂದು ಅನಿಸುತ್ತದೆ. ಅನೇಕ ದುಃಖಕರ ಸಂಗತಿಗಳು ಸಂಭವಿಸುತ್ತವೆ. ಆದರೆ ಆದುದನ್ನು ಮರೆತು ಒಳ್ಳೆಯವನಾಗಿರಬೇಕು" ಎಂದು ಹೇಳುತ್ತಾನೆ.