ಪಕ್ಷಿ ಪುರಾಣ

ಪಕ್ಷಿ ಪುರಾಣ

ಪಕ್ಷಿ ಪುರಾಣ

ಪಾಪಗಳೆಂದೂ ಮಾಡಬೇಡಯ್ಯ
ದಾಟಬೇಕು ನೀ ವೈತರಣಿ//
ಕೋಪತಾಪಗಳೆಂದೂ ಮಾಡಬೇಡಯ್ಯ
ಈಸಬೇಕು ನೀ ವೈತರಣಿ//
ಮೂರು ಕಾಸಿನ ಆಸೆಗಾಗಿಲ್ಲಿ
ಆರು ಕಾಸಿನ ಪಾಶವಿದೆ/
ಅಲ್ಲಿ ನಿಲ್ಲದವ ಇಲ್ಲಿ ಕೂರದವ
ಗೆಲ್ಲಲಾರನೀ ವೈತರಣಿ/
ಮಾವಿಗೆ ಮಾವು ಬೇವಿಗೆ ಬೇವು
ಗೋವಿಗೆ ಇಲ್ಲ ಈ ನೋವು/
ಸಾವಲಿ ಹುಟ್ಟುವ ನೋವಲಿ ಅರಳುವ
ಗೋಳಿನ ಬಾಳು ವೈತರಣಿ/
ಕಳರಿಗೆ ಸುಳರಿಗೆ ಕೊಲರಿಗೆ ಕಾಟ
ಯಮಕಿಂಕರರ ಮೈಮಾಟ/
ಧರ್ಮಕೆ ದೋಣಿಯು ಸತ್ಯಕೆ ಏಣಿಯು
ಆಸ್ಥಿಕ ಮಿತ್ರ ವೈತರಣಿ/
ಅಕ್ಷಿಯು ಪಕ್ಷಿಪುರಾಣದಿ ಹೇಳಿದ
ಶಿಷ್ಠ ರಕ್ಷಣೆಯ ಗೌಣವಿದು/
ಹರಿಯ ನಾಮದ ಸವಿಯ ತೋರುವ
ಯಮನಿಯಮಗಳ ವೈತರಣಿ.

ಅಹೋರಾತ್ರ.

ಸಮಯ: ೧೧:೪೫
೫/೪/೬.

Rating
No votes yet