ಪಟ್ಟಿ ಬೆಳೆಯುತ್ತಲೇ ಇದೆ ವರ್ಷದಿಂದ ವರ್ಷಕ್ಕೆ
ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು. ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾಟೆ ಕ್ಲಾಸಿಗೆ ಸೇರಿಸಬೇಕು
ಹೀಗೆಲ್ಲ ಹತ್ತು ಹಲವು ಪುಟ್ಟ ಹೆಚ್ಚು ಸಮಯ ಬೇಡದ ಕೆಲಸಗಳ್ ಪಟ್ಟಿ ಮಾಡಿ ಒಂದು ವರ್ಷವಾಗುತ್ತಾ ಬಂದಿದೆ. 2008ರ ಕೊನೆಯಲ್ಲಿ 2007 ರ ಬಾಕಿ ಪಟ್ಟಿಗಳ ಜೊತೆಗೆ 2009ರ ಡೈರಿಯಲ್ಲಿ ಬರೆದಿಟ್ಟುಕೊಂಡದ್ದು . ಇನ್ನೂ ಒಂದುಕೆಲಸವೂ ಮುಂದ್ಸಾಗುತಿಲ್ಲ. ಯಾವುದಕ್ಕೂ ಟಿಕ್ ಮಾಡಿಲ್ಲ
ಬಾಲ್ಕನಿಯಲ್ಲಿನ ಗಲೀಜು ಹಾಗೆ ಇದೆ . ಬಟ್ಟೆ ಇನ್ನಷ್ಟು ಹರಡಿದೆ. ಸೇವಂತಿಗೆಯ ಸುತ್ತಾ ಕಳೆಗಳು ತುಂಬ ಗಿಡವೇಕಾಣದಂತಾಗಿವೆ. ವಾಕರನಲ್ಲಿ ವಾಕ್ ಮಾಡುವುದಿರಲಿ ಅದನ್ನು ಕ್ಲೀನ್ ಸಹಾ ಮಾಡಿಲ್ಲ. ಇನ್ನು ಯಶಿತಾ ಕರಾಟೆ ಕ್ಲಾಸಿಗೆ ಅಡ್ಮಿಷನ್ ಮಾಡಿಸಿಲ್ಲ
ಬದಲಾಗಿ ಅಂದುಕೊಳ್ಳದ ಕೆಲಸಗಳು ಅತೀ ಶೀಘ್ರದಲ್ಲಿ ಆಗಿ ಹೋಗುತ್ತಿದೆ. ಅಥವ ನಾನೇ ಈ ಕೆಲಸಗಳನ್ನು ಮಾಡಲು ಸೋಮಾರಿತನ ತೋರುತ್ತಿದ್ದೀನೇನೋ. ಹೇಗಿದ್ದರೂ ಅಂತಹ ಮೇಲಿನ ಕೆಲಸಗಳು ಉಪಯುಕ್ತವಾದುದಲ್ಲ ಎಂಬ ಕೇರ್‌ಲೆಸ್‌ನೆಸ್ಸೋ ಉಡಾಫೆಯೋ ಗೊತ್ತಿಲ್ಲ
ಹೌದು ಈ ಸಣ್ಣ ಕೆಲಸಗಳೇ ಹಾಗೆ ,
ಮಾಡದಿದ್ದರೆ ನಷ್ಟವೇನು ಇಲ್ಲ. ಅದ್ದರಿಂದ ಈ ಸಣ್ಣ ಪುಟ್ಟಕೆಲಸಗಳ ಕಡೆಗೆ ಗಮನ ಕಡಿಮೆಯೇ.
ಆದರೂ ಈ ಸಣ್ಣ ಪುಟ್ಟ ಕೆಲಸಗಳು ಆಗದಿದ್ದಲ್ಲಿ ಮನಸಿಗೆ ಏನೋ ಕಸಿವಿಸಿ.ಆಯಸ್ಸು ಮುಗಿಯುತ್ತಿರುವ 2009 ಡೈರಿಯನ್ನು ತೆಗೆದಾಗಲೆಲ್ಲಾ ಈ ಕೆಲಸ್ಗಳ ಪಟ್ಟಿ ಅಣಕಿಸುವಂತಿರುತ್ತದೆ.ಡೈರಿ ನನ್ನನ್ನು ನೋಡಿ ನಗುತ್ತಿದೆ ಎಂದನಿಸುತ್ತದೆ.
ಅದಕ್ಕಾಗಿಯೇ ಇನ್ನು ಮುಂದೆ 2009ರ ಡೈರಿ ತೆಗೆಯುವುದಿಲ್ಲ. ಇನ್ನು ಅದರಲ್ಲಿರುವ ಪಟ್ಟಿಗಳನ್ನೆಲ್ಲಾ ಪುಣ್ಯಾತ್ಮ ಕಂಪೆನಿಯೊಂದು ಕೊಟ್ಟ 2010 ಹೊಸ ಡೈರಿಯೊಂದಕ್ಕೆ ಹಾಕಿದೆ ಜೊತೆಗೆ ಇನ್ನಷ್ಟು ಮಾಡಬೇಕಾದ ಕೆಲಸಗಳ ಜೊತೆ. ಹತ್ತಿದ್ದುದ್ದು ಇಪ್ಪತ್ತಾಗಿದೆ. ಮುಂದೆ ಮುವ್ವತ್ತಾದರೂ ಅಶ್ಚರ್ಯವಿಲ್ಲ
ಪಟ್ಟಿ ಬೆಳೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ .
Comments
ಉ: ಪಟ್ಟಿ ಬೆಳೆಯುತ್ತಲೇ ಇದೆ ವರ್ಷದಿಂದ ವರ್ಷಕ್ಕೆ