ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ಅನ್ಯಗ್ರಹಜೀವಿಯನ್ನಾಗಿಸೀತು!
(೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ "ಶ್ರದ್ಧಾಂಜಲಿ!"
(೧೨೭) ಮಾನವ ಪಾತ್ರಧಾರಿಗಳನ್ನು ನಿರ್ದೇಶಿಸುತ್ತಿರುವ ದೈವಲೀಲೆಯನ್ನೇ ಮಾನವ ಅನುಕರಿಸುವುದನ್ನು ’ಕ್ರೀಡೆ’ ಎನ್ನುತ್ತೇವೆ.
(೧೨೮) ತಾವು ಯಾರೆಂಬುದನ್ನು ಮರೆತ ಅನ್ಯಗ್ರಹಜೀವಿಗಳನ್ನು ಮಾನವ ಜೀವಿಗಳೆನ್ನುತ್ತೇವೆ. ಇತರರು ಪರಸ್ಪರ ಅನ್ಯ ಜೀವಿಗಳು! ಆದ್ದರಿಂದಲೇ ನಾನು ಈಗ ನಿಮಗೆ ಹೇಳಿದ್ದನ್ನು ನೀವು ನಂಬಲಿಕ್ಕಿಲ್ಲ. ಈ ಇಡೀ ಕಥೆಯನ್ನು ತಿಳಿದಿದ್ದೂ ಯಾರಿಗೂ ತಿಳಿಸಲಾಗದೇ ಒದ್ದಾಡುವವನನ್ನು ದೇವರು ಎನ್ನುತ್ತೇವೆ!
(೧೨೯) ಮನುಷ್ಯ ಕಾಲದ ಸಂಯೋಜನೆ. ಕಾಲವನ್ನು ಆವರಿಸಿಕೊಂಡಿರುವ ಅವಕಾಶವನ್ನೇ ಪ್ರೇತವೆನ್ನುತ್ತೇವೆ. ಕಾಲ ಹಾಗೂ ಅವಕಾಶವನ್ನು ತನ್ನ ಅನುಪಸ್ಥಿತಿಯಲ್ಲಿ ಹಿಡಿದಿರಿಸುವ ಕ್ರಿಯೆಗೆ ದೇವರು ಎಂದು ಹೆಸರು ಕೊಟ್ಟಿದ್ದೇವೆ!
(೧೩೦) ತನ್ನನ್ನು ನೋಡುವವರಿಲ್ಲದಿದ್ದಲ್ಲಿ ಸೌಂದರ್ಯವು ತಾನು ತಾನಾಗಿರುವುದಿಲ್ಲ!
Comments
ಉ: ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ...
In reply to ಉ: ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ... by chaitu
ಉ: ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ...
ಉ: ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ...