ಪರಿಧಿ

ಪರಿಧಿ


ಮನಸನರಸಿ
ಮನಸಿನರಸ
ಅಂತರಂಗದಿ
ಸರಿಸಿ
ಪರದೆಯ,
ಪರಿಧಿ ನಿನ್ನಯ
ಎಲ್ಲೆ ಇರುವು
ಎಲ್ಲಿ ಇಹುದದು
ಎಂದು ಅರುಹೆ?
ಉಸುರಿತಾಗಲೆ
ದೊರೆತ ಮನವದು,
ಬೆರೆಸಿ ಅಡಗಿಸು
ನಿನ್ನ ಎನ್ನೊಳು,
ಅನುಭವಿಸಿ ನೋಡದು
ಪೂರ್ಣ ಮೌನದಿ,
ಎಲ್ಲೆ ಇಲ್ಲದ
ಎಮ್ಮ ಪರಿದಿಯ.


-ರಾಮಮೋಹನ

Rating
No votes yet

Comments