ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 14
ಕ್ಷಮಿಸಿ. ಈ ಕಂತನ್ನು ಸುಮಾರು 6 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 300 ನ್ನು , ಹೌದು 300 ನ್ನು ದಾಟಿದೆ.
108) ಮೂಲ ಹಾಡು - ದೋ ಘಡೀ ವೋ ಜೋ ಪಾಸ ಆ ಬೈಠೀ
ನನ್ನ ಅನುವಾದ -
ಆಕೆ ಬಂದು ಜತೆಗೆ ಕೂತ ಆ ಗಳಿಗೆ
ಲೋಕವನೇ ಬಿಟ್ಟು ನಾ ಕೂತೆ
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949083381813&share_type=copyLink
109) ಮೂಲ ಹಾಡು - ಗೈಡ್ ಚಿತ್ರದ 'ತೇರೆ ಮೇರೆ ಸಪನೆ ಅಬ ಏಕ ರಂಗ್ ಹೈ'
ನನ್ನ ಅನುವಾದ -
ನಿನ್ನ ನನ್ನ ಕನಸಿಗೆ ಬಣ್ಣ ಒಂದೇನೇ
ಈ ದಾರಿ ಎಲ್ಲೇ ಒಯ್ಯಲಿ
ನಾವು ಜತೆಗೇನೇ
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949083732797&share_type=copyLink
110) ಮೂಲ ಹಾಡು -ತೇರಿ ಗಲಿಯೋ ಮೇ ನ ರಖೇಂಗೆ ಕದಂ
ನನ್ನ ಅನುವಾದ -
ನಿನ್ನ ಬೀದಿಗೆ ಇನ್ನು ನಾ ಕಾಲಿಡೇ ಇನ್ಮೇಲೆ
ನಿನ್ನ ಭೇಟಿಗೆ ಎಂದೂ ನಾ ಬಾರೆನು ಇನ್ಮೇಲೆ
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949084199383&share_type=copyLink
111) ಮೂಲ ಹಾಡು - '1942 ಎ ಲವ್ ಸ್ಟೋರಿ' ಚಿತ್ರದ 'ಇಕ ಲಡ್ಕೀ ಕೋ ದೇಖಾ ತೋ ಐಸಾ ಲಗಾ'
ಹಾಡಿನ ಅನುವಾದ -
ಕಂಡಾಗ ಅವಳನ್ನು ಹೀಗನಿಸಿತು
ಅರಳುತಿಹ ಹೂವು ಅವಳು
ಹಾಡೊಂದರ ಸಾಲು ಅವಳು
ಬೆಳಕಿನ ಕಿರಣ ಅವಳು
ಓಡುವ ಜಿಂಕೆ ಅವಳು
ಹುಣ್ಣಿಮೆಯ ರಾತ್ರಿ ಅವಳು
ಮೆಲು ದನಿಯ ಮಾತು ಅವಳು
ದೇವರ ಮುಂದಿನ ದೀಪಾನೇ ಅವಳು , ಹೋ
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949084610011&share_type=copyLink
112 ) ಮೂಲ ಹಾಡು - ಮೈ ಇಕ ರಾಜಾ
ನನ್ನ ಅನುವಾದ -
ನಾನೊಬ್ಬ ರಾಜಾ
ನೀ ನನ್ನ ರಾಣಿ
ಪ್ರೇಮದ ಲೋಕದಿ
ಇದು ಒಂದು ಸುಂದರ ಪ್ರೇಮಕತೆ II
ಪ್ರೇಮ ಎಂದರೆ ಏನು
ಎಂದು ಅರಿಯದ ಮುಗ್ಧೆ ನೀನು
ಎನಿತು ಸುಂದರ ಈ ಮುಗ್ಧತೆಯು II
ನನ್ನ ಮನವು ಅರಮನೆಯಂತೆ
ನೀ ಅದರಲ್ಲಿ ಇರುವವಳಂತೆ
ಚಿಪ್ಪಿನ ಒಳಗೆ ಮುತ್ತಿನ ಹಾಗೆ
ಕಡಲಲಿ ನೀರಿರುವಂತೆ II
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949084699686&share_type=copyLink
113) ಮೂಲ ಹಾಡು - ತುಂ ಆಜ ಇತನಾ ಮುಸ್ಕುರಾ ರಹೇ ಹೋ
ನನ್ನ ಅನುವಾದ -
ನೀನಿಂದು ಇನಿತು ಮುಗುಳ್ನಗುತಲಿರುವಿ
ಅದಾವ ದುಃಖ ಮರೆ ಮಾಚುತಿರುವಿ II
ಕಣ್ಣಲ್ಲಿ ನೀರು ತುಟಿಯಲ್ಲಿ ನಗೆಯು
ಇರೋದು ಏನೋ ತೋರುವದು ಏನೋ II
ಹಳೆ ಗಾಯವನ್ನು ಮಾಯಿಸುವುದು ಕಾಲ
ಅದು ಏಕೆ ನೀನು ಕೆದರುತಿಹೆ ಮತ್ತೆ II
ವಿಧಿಲಿಖಿತ ಎಂಬುವುದು ಗೆರೆಗಳದೇ ಆಟ
ಆ ಗೆರೆಗಳ ಎದುರು ಸೋಲುತಿಹೆ ಏಕೆ II
ಹಾಡಿನ ಕೊಂಡಿ -
https://m.starmakerstudios.com/a-vue3/playrecording?app=sm&from_sid=62169293314&guide_type=2&is_convert=true&pg_rf_ca_vn=15&pid=share_exp2&recordingId=11821949086944023&share_type=copyLink
114) ಮೂಲ ಹಾಡು - ಜೇಸುದಾಸ್ ಅವರು ಹಾಡಿರುವ ಮಲಯಾಳಂ ಹಾಡು - ಮನುಷ್ಯನ್
ನನ್ನ ಅನುವಾದ -
ಮನುಜನು ಮತಗಳ ಮಾಡಿದನು
ಮತಗಳು ದೈವಗಳ ಮಾಡಿದರು
ಮನುಜರು ಮತಗಳು ದೈವಗಳು ಕೂಡಿ
ಭೂಮಿಯನು ಹಂಚಿಕೊಂಡು ಮನಸುಗಳ ಒಡೆದಿಟ್ಟರು
ಹಿಂದುವಾಗಿ ಮುಸ್ಲಿಮರಾಗಿ ಕ್ರಿಸ್ತೀಯರಾಗಿ
ಅಪರಿಚಿತರಾದೆವು ನಮ್ಮೊಳಗೆ
ಲೋಕವು ಆಯಿತು ಹುಚ್ಚಾಸ್ಪತ್ರೆ
ಸಾವಿರ ಮಾನವ ಹೃದಯಗಳು
ಆದವು ಆಯುಧ ಶಾಲೆಗಳು
ದೇವರು ಬೀದಿಯಲಿ ಸಾಯುತಲಿರಲು
ಸೈತಾನನು ನಗುತಿರುವ
ಮೂಲ ಹಾಡಿನ ಕೊಂಡಿ - https://youtu.be/6uIdGdoYlOc?si=yyYeQnMWq8lTTTrB