ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..

ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ ಗಮನಿಸ ಬೇಕಾದ
ಅಂಶಗಳು ಬಹಳ ಇವೆ. ಇದನ್ನು ನಿರ್ದೇಶಕ ನರೇಂದ್ರ ಬಾಬು ಚೆನ್ನಾಗಿ ಕೊಟ್ಟಿದ್ದಾರೆ ಅಂದರೆ ತಪ್ಪಾಗಲಾರದು.

ಇಂದು ನಾವು ಸರ್ವಸಾಮನ್ಯವಾಗಿ ಹೇಳುತ್ತಿರುವ ಪರಭಾಷಿಕರ ಆಕ್ರಮಣ ಮತ್ತು ಅವರು ಮಾಡುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ
ಬೇರೆ ಬೇರೆಯಾಗಿ ತೋರಿಸಿದ್ದಾರೆ.

೧) ೪೦ ವರುಷಗಳಿಂದಲೂ ಇಲ್ಲೇ ಇದ್ದು, ಕನ್ನಡ ಬಾರದ ತಮಿಳಿಗ, ತಮಿಳಿಗ ತಾನು ಮುಖ್ಯವಾಹಿನಿಗೆ ಸೇರದೇ ಇರಲು ಇಲ್ಲಿನ
ಜನಗಳೇ ಕಾರಣ, ನನ್ನ ಜೊತೆ ಕನ್ನಡದಲ್ಲಿ ವ್ಯವಹರಿಸದೇ , ಕನ್ನಡವಿಲ್ಲದೇ ವ್ಯಾಪರ ಮಾಡಲು ಆಗುವದಿಲ್ಲ ಎಂದು ತಿಳಿ ಹೇಳದೇ
ನನ್ನ ಭಾಷೆಯಲ್ಲೇ ವ್ಯವಹರಿಸಿ, ತನಗೆ ಕನ್ನಡದ ಅವಶ್ಯಕತೆ ಇದೆ ಅಂದರೂ ಜನ ಆಸ್ಪದ ಕೊಡದಿರುವ ವಿಷಯ ಇಂದಿನ ಸಮಾಜದಲ್ಲಿ
ಬಹಳ ಪ್ರಸ್ತುತವಾಗಿ ಕಾಣುತ್ತದೆ. ಹಾಗೇಯೆ ಮುಖ್ಯವಾಹಿನಿಗೆ ಸೇರುವ ಅವರ ಚಿಕ್ಕ ಪುಟ್ಟ ಪ್ರಯತ್ನಗಳಿಗೆ ನಾವು ಸಹಾಯ ಮಾಡದೇ
"ಅಣ್ಣಾ..ಕನ್ನಡ ಕೊಲ್ಲಬೇಡ" ನಾವೇ ನಿನ್ನ ಭಾಷೆಯಲ್ಲಿ ಮಾತನಾಡುತ್ತೆವೆ ಎಂದು ಹೇಳುವ ನಮ್ಮ ಕನ್ನಡಿಗರ ಉದಾರತೆಯ ಮುಖವನ್ನು ತೋರಿಸಿಕೊಡುತ್ತದೆ.
ಇದಕ್ಕೆ ಲಕ್ಷೀ(ಪ್ರೇಮ್) ಪಾತ್ರ ಸರಿಯಾಗಿ ಉತ್ತರ ಕೊಟ್ಟು ಅವರು ಇಲ್ಲಿಯವರೇ, ಇದೇ ಮನೋಭಾವ ಪ್ರತಿಯೊಬ್ಬ ವಲಸಿಗನ ಮನದಲ್ಲಿ ಮೂಡಬೇಕು ಎಂಬ
ಸಂದೇಶ ಕೊಡುತ್ತದೆ. ಹಾಗೇಯೆ ನಮ್ಮ ಉದಾರತೆಯ ದುಷ್ಪರಿಣಾಮದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

೨) ಕರ್ನಾಟಕದಲ್ಲಿ ಭೂ- ಮಾಫಿಯಾಕ್ಕೆ ಆಂದ್ರದಿಂದ ಬಂದು ಇಲ್ಲಿ ತಮ್ಮ ಧನ-ಬಾಹು ಬಲಗಳಿಂದ ನಮ್ಮ ಅಮಾಯಕರನ್ನು ಬೆದರಿಸಿ,
ತಮ್ಮ ದೌರ್ಜನ್ಯವನ್ನು ಮೆರೆಯುತ್ತಿರುವ ಜನಕ್ಕೆ ನಾವು ತಲೆ ಬಾಗಿದರೆ,ಅವರು ನಮ್ಮನ್ನು ಒಂದು ದಿನ ಬೀದಿಗೆ ನಿಲ್ಲುಸುತ್ತಾರೆ ಎಂದು
ಮಾರ್ಮಿಕವಾಗಿ ಹೇಳುತ್ತಾರೆ. ಆಂಧ್ರದ ಈ ಭೂ-ಮಾಫಿಯ ಜನ ತಾವು ಕೆಳಮಟ್ಟಕ್ಕೆ ಆದರೂ ಇಳಿಯಲು ಹಿಂಜರಿಯುವದಿಲ್ಲ,ಆದರೆ
ಗೌರವಕ್ಕೆ ಮಣೆ ಹಾಕುವ ನಾವು ಕನ್ನಡಿಗರ ಪಾತ್ರವನ್ನು ಮಂಗಳೂರಿನ ಲಕ್ಶ್ಮೀ ಗೆಳಯನ ಮೂಲಕ ಆವರಣ ಮಾಡಿದ್ದಾರೆ. ಇವರಿಗೆ ಒಳ್ಳೆಯ ಮಾತಿನಲ್ಲಿ
ಹೇಳಿದರೆ, ಕನ್ನಡ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಬಿಡು ಎಂಬ ಕೆಟ್ಟ ದೃಷ್ತಿಯಲ್ಲಿ ಹೇಳಲು ಹಿಂಜರಿದ ಆ ಜನಕ್ಕೆ ಒದ್ದ್ದೇ ಬುದ್ಧಿ ಹೇಳಬೇಕು ಎಂಬುದು
ನಿರ್ದೇಶಕರ ಅಂಬೋಣ. ಬಲವಂತವಾಗಿ ಮತ್ತು ಅವ್ಯವತವಾಗಿ ತೆಲುಗನ್ನು ನಮ್ಮ ಮೇಲೆ ಹೇರುವುದು ಕೂಡ ಇದೇ ಜನ ಎಂದು ಬಿಡಿಸಿ ಹೇಳಿದ್ದಾರೆ.

೩) ಕನ್ನಡ ಕೆಲಸ ಅಂದರೆ ಕೇವಲ ರಾಜ್ಯೋತವ ಆಚರಿಸಿ, ಅಮ್ಮ-ಕನ್ನಡಮ್ಮ ಎಂದು ಹಾಡುವುದು ಮಾತ್ರವಲ್ಲ ಕನ್ನಡಿಗರು ಉದ್ಯಮಶೀಲರಾಗಬೇಕು
ಎಂದು ಮಧ್ಯಂತರ ಭಾಗದಲ್ಲಿ ಸಂದೇಶ ಸಾರಿದ್ದಾರೆ. ಉದ್ಯಮಶೀಲರಾಗಿ ಪರರಾಜ್ಯದವರ ಕೈನಲ್ಲಿ ಇರುವ ವ್ಯವಹಾರವನ್ನು ಚತುರತೆ ಇಂದ ಪಡೆಯಬೇಕೆಂಬ
ವಿಷಯವು ನಿರ್ದೇಶಕರ ಬಗ್ಗೆ ಒಳ್ಳೆಯ ಮೆಚ್ಚುಗೆ ಮೂಡುತ್ತದೆ.

Rating
No votes yet