ಪುರುಷ ಪ್ರಧಾನ..!?

ಪುರುಷ ಪ್ರಧಾನ..!?

[ಹೀಗೊಂದು ಸಮೋಸ (ಸರಳ ಮೋಬಾಯಿಲ್ ಸಂದೇಶ) ಬಂದಿತ್ತು ನಿನ್ನೆ ನನಗೆ]

ಒಂದು ಹೆಣ್ಣು ಅತ್ತರೆ ಎಲ್ಲರೂ ಸಂತೈಸಲು ಬರುತ್ತಾರೆ.
ಒಂದು ಗಂಡು ಅತ್ತರೆ "ಯಾಕೋ ಹೆಣ್ಣಿನ ತರಾ ಅಳ್ತೀಯಾ...?" ಅಂತ ಗದರಿಸುತ್ತಾರೆ.
ಹೆಣ್ಣು ಗಂಡಿಗೆ ಹೊಡೆದರೆ, "ಆ ಗಂಡು ಏನೋ ತಪ್ಪು ಮಾಡಿರಬೇಕು" ಅಂತಾರೆ.
ಗಂಡು ಹೆಣ್ಣಿಗೆ ಹೊಡೆದರೆ, "ಮೂರ್ಖ, ಹೆಮ್ಮಕ್ಕಳಿಗೆ ಗೌರವ ಕೊಡೋದನ್ನು ಕಲಿತುಕೋ" ಅಂತಾರೆ.
ಹೆಣ್ಣು ಗಂಡಿನ ಜೊತೆ ಮಾತನಾಡಿದರೆ, "ಪರವಾಗಿಲ್ಲ ಈ ಹೆಣ್ಣು ತುಂಬಾ ಫ್ರೆಂಡ್ಲೀ..." ಅಂತಾರೆ
ಗಂಡು ಹೆಣ್ಣಿನ ಜೊತೆ ಮಾತಾಡಿದರೆ "ಪೋಲಿ ಹುಡುಗ ಕಣೋ.. ವಿಪರೀತ ಹೆಣ್ಣು ಹುಚ್ಚು ಆತನಿಗೆ.." ಅಂತಾರೆ.
ಒಂದು ಹೆಣ್ಣು ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡರೆ, "ನಿಂದೇನೂ ತಪ್ಪಿಲ್ಲಮ್ಮಾ...ಅನ್ಯರ ತಪ್ಪಿನಿಂದಾಗಿ ಅಪಘಾತ ಆಯ್ತು" ಅಂತಾರೆ.
ಒಂದು ಗಂಡು ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡರೆ "ಯಾಕೋ ಸರಿಯಾಗಿ ವಾಹನ ಚಲಾಯಿಸೋಕೆ ಬರೋಲ್ವೇನೋ" ಅಂತ ಬೈತಾರೆ.
ಇಷ್ಟೆಲ್ಲಾ ಇದ್ರೂ, ಇದನ್ನು ಪುರುಷ ಪ್ರಧಾನ ಸಮಾಜ ಅಂತಾರೆ..!?
ಏನನ್ಬೇಕು ಇದಕ್ಕೆ..?

-ಆಸು ಹೆಗ್ಡೆ
"ಹಾಸ್ಯ ನನ್ನುಸಿರು"

Rating
No votes yet

Comments