(ಪುಸ್ತಕನಿಧಿ-೧) ಎರಡನೇ ಇಯತ್ತೆಯ ಭೂಗೋಲು- ಅವಿಭಜಿತ ಧಾರವಾಡ ಜಿಲ್ಲೆಯ ಪುಸ್ತಕ

(ಪುಸ್ತಕನಿಧಿ-೧) ಎರಡನೇ ಇಯತ್ತೆಯ ಭೂಗೋಲು- ಅವಿಭಜಿತ ಧಾರವಾಡ ಜಿಲ್ಲೆಯ ಪುಸ್ತಕ

ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts
/advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ .
ಅಲ್ಲಿ ದಿಕ್ಸೂಚಿಗೆ ಹೋಕಾಯಂತ್ರ ಎಂದಿದ್ದಾರೆ.
ಆಗ್ನೇಯ , ವಾಯುವ್ಯ ,ನೈರುತ್ಯ , ಈಶಾನ್ಯ ದಿಕ್ಕುಗಳು ಯಾವುವು ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ .
ದಿನ್ನೆ ಅಂದ್ರೆ ನಿಮಗೆ ಗೊತ್ತೇನು ? - ವ್ಯಾಖ್ಯೆ - ಸುತ್ತಲಿನ ನೆಲಕ್ಕಿಂತ ಎತ್ತರವಾದ ಭೂಮಿಗೆ ದಿನ್ನೆ ಎನ್ನುವರು! ದಿನ್ನೆಗಿಂತ ಹೆಚ್ಚು ಇದ್ದರೆ ಗುಡ್ಡ! , ಗುಡ್ಡಕ್ಕಿಂತ ಹೆಚ್ಚು ಇದ್ದರೆ ಪರ್ವತ !
ದ್ವೀಪಕಲ್ಪ ? ಭೂಶಿರ ?
ಗುಡ್ಡಗಳ ಉಪಯೋಗ ಏನು ಹೇಳಿ?
ಹಳ್ಳ ? ಹೊಳೆ?
ಪೇಠಾ - ತಾಲೂಕುಗಳ ಘಟಕ ? ಹೋಬಳಿ ? ಬ್ಲಾಕ್?
ಪಶ್ಚಿಮಕ್ಕೆ 'ಕಾರವಾರ ಜಿಲ್ಹಾ ಮೈಸೂರು' ಇದೆ. ಪೂರ್ವಕ್ಕೆ 'ಬಳ್ಳಾರಿ-ಮೊಗಲಾಯಿ ಇಲಾಖೆ' ಇದೆ.

ಮದಗಮಾಸೂರ ಕೆರೆ - ಇದಕ್ಕೆ ಸರೋವರ ಎನ್ನುವರು.
ಕೆಲಗೇರಿ ಕೆರೆ - ಇದರಿಂದ ಸ್ವಲ್ಪ ಗದ್ದೆಗಳಿಗೆ ನೀರು ಪೂರೈಸುವದು. ಮತ್ತು ಧಾರವಾಡಕ್ಕೆ ನೀರನ್ನು ನಳ ಹಾಕಿ ತಂದಿರುತ್ತಾರೆ.

.......ಇದಕ್ಕೆ ಮಳೆ ಅನ್ನುತ್ತಾರೆ.

ಮಲ್ಲಾಡು ಎಂದರೆ ಮಲೆನಾಡು ಹೌದೋ ಅಲ್ಲವೋ ಸಂಶಯ ಇತ್ತು . ( ನೆನೆಯಿರಿ ಬೇಂದ್ರೆಯವರ 'ಮಲ್ಲಾಡದಾ ಗಿಣಿಯೇ...- ಯಶವಂತ ಹಳಬಂಡಿ ಪಾತರಗಿತ್ತಿಪಕ್ಕ ಧ್ವನಿಸುರಳಿಯಲ್ಲಿ ಬಹಳ ಚೆನ್ನಾಗಿ ಹಾಡಿದ್ದಾರೆ ). ಮಲ್ಲಾಡು ಎಂದರೆ ಮಲೆನಾಡು ಎಂದು ಖಚಿತವಾಯಿತು.

ರೈಲುಮಾರ್ಗಗಳ ಉಪಯೋಗ .... (೫) ದೇಶ ಮಧ್ಯದಲ್ಲಿ ಎಲ್ಲ್ಯಾದರೂ ದಂಗೆ-ದರೋಡೆ , ಪರರಾಷ್ಟ್ರಗಳ ಉಪದ್ರವವಾದರೆ ಅತಿತ್ವರೆಯಿಂದ ರೇಲ್ವೇ ಮಾರ್ಗವಾಗಿ ದಂಡಾಳುಗಳನ್ನು ಒಯ್ದು ಶಾಂತ ಮಾಡಲಿಕ್ಕೆ ಬರುತ್ತದೆ.

ಸರಕಾರ ಎಂಬ ಪಾಠದಲ್ಲಿ ನಾವು ಯಾರು ? ನಮ್ಮ ದೇಶ ಯಾವದು? ಎಂಬ ಉಪಶೀರ್ಷಿಕೆಯಲ್ಲಿ ( ಅಂದ ಹಾಗೆ ಶೀರ್ಷಿಕೆಗೆ ಅಪ್ಪಟ ಕನ್ನಡದಲ್ಲಿ ತಲೆಬರಹ ಎಂದರೆ ಉಪಶೀರ್ಷಿಕೆಗೆ ಏನನ್ನಬೇಕು?) ನಮ್ಮದು ಭಾರತ ದೇಶ. ಇದಕ್ಕೆ ಹಿಂದೂಸ್ತಾನವೆಂದೂ ಅನ್ನುತ್ತಾರೆ

ಜಿಲ್ಹೆಯ ಮುಖ್ಯ ಅಧಿಕಾರಿ ಎಂದರೆ ಕಲೆಕ್ಟರನು . ಈತನು ಈಗ ಭಾರತೀಯನಿರುವನು .

ವನಗಾವಲ (ಫಾರೆಷ್ಟ) ಖಾತೆ -

ಹುಚ್ಚು ಹಿಡಿದವರ ಬಗ್ಗೆ ಒಂದು ಔಷಧಾಲಯವು ಧಾರವಾಡದಲ್ಲಿರುವದು.

ಛಬ್ಬಿ- ಇಲ್ಲಿ ಹಾಳುಗುಡಿಗಳು ಬಹಳ ಅವೆ.

ಧಾರವಾಡ- ಇದನ್ನು ವಿಜಯನಗರ ಸರದಾರನಾಗಿದ್ದ ಧಾರರಾವ ಎಂಬವನು ಕಟ್ಟಿಸಿದ್ದರಿಂದ(೧೪೦೩) ಈ ಹೆಸರು ಬಿತ್ತು. (ನನಗೆ ಗೊತ್ತಿರಲಿಲ್ಲ!)

ಮಮ್ಮಿಗಟ್ಟಿ -ದೇಸಾಯರ ಗ್ರಾಮವು.
ಕ್ಯಾರಕೊಪ್ಪ - ಚಲೋ ಮಾವಿನ ಹಣ್ಣು ಸಿಗುವವು
ಮಿಶ್ರಿಕೋಟಿ- ಚಲೋ ಅವಲಕ್ಕಿಗಳು ತಯಾರಾಗುವವು (ಈ ಹೆಸರುಳ್ಳ ನನಗೆ ಗೊತ್ತೇ ಇರಲಿಲ್ಲ!). ಇದು ಮೊದಲು ಪೇಠಾ ಸ್ಥಳವಾಗಿತ್ತು.

ಸೂಚನೆ: ಅಂಬೇ ಮೊಹರಿ ಅಕ್ಕಿ ಎಂದರೇನೆಂದು ಹುಡುಗರಿಗೆ ತಿಳಿಸಿಹೇಳಬೇಕು. ( ನನಗೆ ಇವತ್ತಿಗೂ ಗೊತ್ತು ಇಲ್ಲ)

ವ್ಯತ್ಯಾಸಕ್ಕೆ ಅಪ್ಪಟಕನ್ನಡ ಶಬ್ದ ಗೊತ್ತೇನ್ರೀ ನಿಮಗೆ ? ಇಗೋ ಇಲ್ಲಿದೆ - ಮಲ್ಲಾಡಕ್ಕೂ ಬೆಳವಲಕ್ಕೂ ಇರುವ ಹೆಚ್ಚು ಕಡಿಮೆಗಳು

ವಿಜಾಪುರ- ಮೊದಲು ಮುಸಲ್ಮಾನ ಅರಸರ ರಾಜಧಾನಿಯಾಗಿತ್ತು. ಆಗ ಮುಂಬೈಗಿಂತಲೂ ದೊಡ್ಡ ಪಟ್ಟಣವಾಗಿತ್ತಂತೆ. ಇಲ್ಲಿ ಬೋಳಗುಮ್ಮಟ ಇದೆ.

ಜಗತ್ತಿನ ಭೂಗೋಲ ಎಂದು ನೀಗ್ರೋ , ಚೀನೀ , ಜಪಾನೀ ಜನರ ಬಗ್ಗೆಯೂ ಒಂದೊಂದು ಪುಟ ಇವೆ.

ಪ್ರಶ್ನೆ - ರೊಕ್ಕವಿಲ್ಲದ ಗಡಿಯಾರ ಯಾವದು?

Rating
No votes yet

Comments