ಪೂರ್ವಪ್ರತ್ಯಯಗಳ (prefixes) ಅನುವಾದ

ಪೂರ್ವಪ್ರತ್ಯಯಗಳ (prefixes) ಅನುವಾದ

ಬಂಧುಗಳೇ,

ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.
ಪ್ರತ್ಯಯಗಳು ಸಂಖ್ಯಾವಾಚಕವಾಗಿದ್ದಲ್ಲಿ ಅಂಥ ಸಮಸ್ಯೆಯಲ್ಲ, ಎಕ, ದ್ವಿ, ತ್ರೈ, ಚತುರ್ - ಮುಂತಾಗಿ ಹೇಳಬಹುದು.
ಅವೇ ಪ್ರತ್ಯಯಗಳು ಗಾತ್ರಸೂಚಕವಾದಗ ಯಾವುದನ್ನು ಬಳಸಲಿ ಯಾವುದನ್ನು ಬಿಡಲಿ ಎಂಬ ಗೊಂದಲ ಶುರು.

infra -
sub - like subzero
super - ???
very - ತುಂಬಾ ಎನ್ನಲೇ ಭಾರೀ ಎನ್ನಲೇ.
ultra - ???
mini - ಮಿನಿ ನಗರ ಪ್ರದೇಶಗಳಲ್ಲಿ ಬಳಕೆಯಲ್ಲಿದೆ.
micro - ಸೂಕ್ಷ್ಮ ಬಳಕೆಯಲ್ಲಿದೆ ಮತ್ತು ಎಲ್ಲರಿಗೂ ಅರ್ಥವೂ ಆಗತ್ತೆ.
nano - ಪುಸ್ತಕಗಳ ಮಟ್ಟಿಗೆ ನ್ಯಾನೋ ಬಳಕೆಯಲ್ಲಿದೆ.
mega - ಮೆಗಾ ಎಂಬ ಆಗಲೇ ಬಳಕೆಯಲ್ಲಿದೆ.

ಈ ಪಟ್ಟಿ ಬಹುಷಃ ಇನ್ನೂ ಉದ್ದವಾಗುವದೇನೋ....
ತಿಳಿದವರು ಈ ಅನುಮಾನಗಳನ್ನು ಪರಿಹರಿಸಬೇಕು.

ಜೊತೆಗೆ ಒಂದು ಬಾಲಂಗೋಚಿ.:)
ಇಂಗ್ಲೀಷಿನ chipನ್ನು ಕನ್ನಡದಲ್ಲಿ ಚಿಪ್ಪು ಅನ್ನಬಹುದಲ್ಲವೇ?
ಬಹುಷಃ ಇಂಗ್ಲೀಷಿನವರು ಸಿಲಿಕಾನಿನ ತೆಳ್ಳಗಿನ ತುಂಡಿಗೆ chip ಎಂದಿದ್ದಾರೆ. ಅದೇ ರೀತಿ metal chip, chipping ಕೂಡ ಹೆಳ್ತಾರೆ (ಎಂಜಿನಿಯರರೆ workshop lab ನೆನಪು ಮಾಡಿಕೊಳ್ಳಿ)
ನಮ್ಮಲ್ಲೂ ಕೂಡ ತೆಳ್ಳಗಿನ ವಸ್ತುಗಳಿಗೆ ತೆಂಗಿನ ಚಿಪ್ಪು, ಕಪ್ಪೆ ಚಿಪ್ಪು, ಚಿಪ್ಪು ಕಲ್ಲು, ಮಾವಿನ ಚಿಪ್ಪು ಅಂತ ಅದೆ ಅರ್ಥದಲ್ಲಿ ಹೇಳ್ತೇವೆ.
ಹೀಗಾಗಿ ಖುಶಿಯಿಂದ ಕನ್ನಡದಲ್ಲಿ chipನ್ನು ಚಿಪ್ಪು ಎಂದೇ ಹೇಳೋಣವೇ?

ವೀರೇಶ ರಾಯ.

Rating
No votes yet