ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)

========================

ನಾಗರ ಹಾವಿನ ಹೆಡೆಯ ನೋಡುತಿರೆ

ಸೌಂದರ್ಯ ಮಗ್ನ ಭಾವ !

ಭಾವದ ಒಳಗೆಲ್ಲೊ ಮತ್ತೊಂದು ಭೀಷಣತೆಯ ಭಾವ !

ಸುರಗಂಗೆ ದುಮುಕುವ ಪರಿಗೆ

ಮನದಲ್ಲೇನೊ ಉನ್ಮಾದ !

ಕೇದಾರದೆ  ಆಕೆಯ ನರ್ತನಕ್ಕೆ ದಿಘ್ಭ್ರಮೆಯ ಭಾವ!

ಪುನರ್ವಸು ಮಳೆಯ  ಸೊಭಗಿಗೆ

ಮನದಲ್ಲೇನೊ ಆಹ್ಲಾದ ಭಾವ!

ಮಳೆಯ ರೌದ್ರತೆ ಜೀವಗಳನ್ನು ಸೆಳೆದಾಗ ದುಗುಡ ಭಾವ!

ಮರದ ನೆರಳ ತಂಪು ಮನಸಿಗೆ

ಅದೇನೆಂದು ಅರಿವಾಗದ ಇಂಪು!

ಮರವು ಉರುಳಿ  ಜೀವ ತೆಗೆದಾಗ ದುಃಖೋದ್ಗಾರಗಳ ಗುಂಪು!

ತಂಪನೆಯ ಗಾಳಿ ಕದಪುಗಳ

ಸವಿರದಾಗ ಮನದಲ್ಲೇನು ಪುಲಕ!

ಚಂಡಿಯಾಗಿ ಜೀವ ತೆಗೆವಾಗ ಅದೆ ಗಾಳಿಗೆ ಶಾಪದ ಜಳಕ!

ಬೆಳಗಿನ ಸೂರ್ಯನಿಗೆ

ಜನರ ಭಕ್ತಿಯ ನಮಸ್ಕಾರ !

ನಡುನೆತ್ತಿಗೆ ಬಂದಾಗ ಬಿಸಿಲ ಅಹಾಕಾರ!

ಹೀಗೆಯೆ ಸಾಗುತ್ತದೆ ..

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ

ಒಂದು ಭಾವದೊಳಗೆ ಅಂತರ್ಗತ ಮತ್ತೊಂದು ಭಾವ!

Rating
No votes yet

Comments

Submitted by nageshamysore Sun, 07/21/2013 - 07:08

ಪಾರ್ಥಾ ಸಾರ್ -  ಪ್ರಕೃತಿಯ ದ್ವಂದ್ವ ಗುಣ 'ಕಾಯುವವನೂ ಅವನೆ, ಕೊಲ್ಲುವವನೂ ಅವನೆ' ಎನ್ನುವ ಹಾಗೆ. ಮಿತಿ ಮೀರಿದರೆ ಸಂಹರಣ, ಇತಿಮಿತಿಯಲಿದ್ದರೆ ಲೋಕ ಕಲ್ಯಾಣ. ಬಹುಶಃ ಪ್ರಕೃತಿಯೆ ಈ ನಡುವಳಿಕೆಯೆ ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತಿನಿಧಿಸುವ ಸಂಕೇತವಿರಬೇಕು

- ನಾಗೇಶ ಮೈಸೂರು