ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)
ಎಲ್ಲ ಮೂಲಧಾತುಗಳು
ಪ್ರೋಟಾನು ನ್ಯೂಟ್ರಾನು ಎಲೆಕ್ಟ್ರಾನುಗಳೆಂಬ
ಒಂದೆ ವಸ್ತುಗಳಿಂದಾಗಿದೆ ಎನ್ನುತ್ತದೆ
ಪರಮಾಣು ವಿಜ್ಞಾನ
ಆ ಮೂಲಧಾತುಗಳನ್ನೆ ಕೊಂಚ ಅತ್ತಿತ್ತ ಸರಿಸಿ
ಇದು ಕಭ್ಭಿಣ ಇದು ಚಿನ್ನ
ಎನ್ನುತ್ತದೆ ಪ್ರಕೃತಿ ವಿಜ್ಞಾನ ತತ್ವ
ಎಲ್ಲ ದೇಹಗಳಲ್ಲಿ ಇರುವುದು
ಒಂದೆ ಆತ್ಮ ಎನ್ನುತ್ತ ಅಧ್ಯಾತ್ಮ
ಎಲ್ಲ ದೇಹಗಳದು ಪಂಚ ತತ್ವಗಳಿಂದಾಗಿದೆ
ಎನ್ನುತ್ತದೆ ವೇಧಾಂತ ತತ್ವ
ಕೊಂಚ ಅತ್ತಿತ್ತ ನೋಡಿ ಅದು ಎರಡು
ಒಂದು ಗಂಡು ಒಂದು ಹೆಣ್ಣು
ಎನ್ನುತ್ತದೆ ಪ್ರಕೃತಿ ವಿಜ್ಞಾನ ತತ್ವ
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ನಾವು ಒಂದು ಎನ್ನುವಾಗ ಎರಡು ಎನ್ನುತ್ತದೆ
ನಾವು ಹಲವು ಎನ್ನುವಾಗ ಒಂದೆ ಎನ್ನುತ್ತದೆ
Rating