ಪ್ರಣತಿ ಮತ್ತು ತಂತ್ರ
ಪ್ರಣತಿ
ನಮ್ಮ ಮನೆಯ ಹಣತಿ,
ಸಣ್ಣ ಪಾಪ ಪ್ರಣತಿ.
ಎತ್ತಿಕೊಳಲು ನಗುತಿ,
ಮುತ್ತುಕೊಡಲು ಅಳುತಿ.
ಅರಿವು ಕೊಟ್ಟ ಆರತಿ,
ಬೆಳಕು ಕೊಟ್ಟ ಭಾಮತಿ,
ನಮ್ಮ ಪುಟ್ಟ ಭಾರತಿ.
ತಂತ್ರ.
ಧರತಿಯೇ
ಯಾರ
ಆಧಾರವಿಲ್ಲದೆ
ನಿರಂತರವಾಗಿ
ತಿರುಗುತಿರಲು
ನಮಗೇಕೆ
ಸುರಕ್ಷೆಯ
ಭಯ?
ಭಯ
ನಮ್ಮನ್ನು
ಅತಂತ್ರರ
ಕುತಂತ್ರದಿಂದ
ಪರತಂತ್ರರನ್ನಾಗಿಸುವುದು.
ಭಕ್ತಿ
ನಮ್ಮನ್ನು
ಭಗವಂತನ
ನಿಯಂತ್ರಣದ
ಸ್ವತಂತ್ರರನ್ನಾಗಿಸುವುದು.
ಯಂತ್ರರಾಜನಿಗೆ
ಮಂತ್ರಗಳಿಂದ
ಪೂಜಿಸಿ
ನಿಯಂತನನ್ನು
ಒಲಿಸುವ
ಕ್ರಿಯೆಯೇ
ತಂತ್ರ.
ಅಹೋರಾತ್ರ.
Rating