ಪ್ರತ್ಯಕ್ಷ ಕಂಡ ಗುರು- ಶಿಶ್ಯರು.........

ಪ್ರತ್ಯಕ್ಷ ಕಂಡ ಗುರು- ಶಿಶ್ಯರು.........

೧೨/೧/೨೦೧೦.


ಶ್ರೀ ಗುರುಭ್ಯೋನಮಃ. ಹರಿಃ ಓಂ......


ಪ್ರತ್ಯಕ್ಷ ಕಂಡ ಗುರು- ಶಿಶ್ಯರು.........


ಗುರುವಿನ ಕಿರು ಪರಿಚಯ;--ಪ್ರಕಾಂಡ ಪ್ಂಡಿತ ವಿದ್ವಾನ್ ಶ್ರೀ ಶ್ರೀ ಭಾಲಚಂದ್ರ ಶಾಸ್ತ್ರಿಗಳು. ಧಾರವಾಡ. ಇವರು ಗೃಹಸ್ಥಾಶ್ರಮಿಗಳಗಿದ್ದು ಅನೇಕ ಜನರಿಗೆ,ವಿದ್ಯಾರ್ಥಿಗಳಿಗೆ ಸಹಾಯ


ಮಾಡಿದ್ದರೆ. ಧಾರವಾಡದ ಸಂಸ್ಕೃತ ಪಾಠಶಾಲೆಯ ಅಭಿವೃದ್ಧಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತ ತಮ್ಮ ೯೧ ವಯಸ್ಸನ್ನು ಕಳೆದಿದ್ದಾರೆ. ತುಂಬಾ ಸರಳ ಜೀವಿಯಾಗಿದ್ದು, ವಾರಣಾಸಿಯಲ್ಲಿ ತಮ್ಮ ಸಂಸ್ಕ್ರ‍ತ ಅಭ್ಯಾಸವನ್ನು


ಮಾಡಿ,ವಿದ್ವತ್ ಪಂಡಿತರಾಗಿ,ಕರ್ನಾಟಕದಲ್ಲಿ ನೆಲೆಸಿ.ಅನೇಕ ಅತ್ಯುತ್ತಮ ಶಿಶ್ಯರನ್ನು ತಯಾರುಮಾಡಿ, ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ. ಅನೇಕ ಬಿರುದು, ಸನ್ಮಾನಗಳಿಗೆ ಒಲಿಯದೆ, ನಿರ್ಲಿಪ್ತರಾಗಿದ್ದಾರೆ. ವಯೋವೃದ್ಧರೊ.


ಜ್ಞಾನವೃದ್ಧರು, ಕರ್ಮನಿಷ್ಠರೂ ಆಗಿದ್ದು ಅತ್ಯಂತ ಸಂಸ್ಕೃತ ಅಭಿಮಾನಿಗಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ, ರಾಷ್ಟ್ರ ಪ್ರಶಸ್ತಿ ದೊರೆತಿದೆ. ೨ ತಿಂಗಳ ಹಿಂದೆ ಶಾಸ್ತ್ರ‍ಿಗಳ ೯೧ನೇ ಹುಟ್ಟುಹಬ್ಬವನ್ನು, ಶಿಷ್ಯಂದಿರೆಲ್ಲರೂ ಸೇರಿ, ವಿಜೃಂಭಣೆಯಿಂದ ೮ ದಿನಗಳವರೆಗೆ ಆಚರಿಸಿದರು. ಆ ಸಂದರ್ಭದಲ್ಲಿ, ಅನೇಕ ಮಠಾಧೀಶರೂ,ಆಗಮಿಸಿದ್ದು, ಕಂಚಿ ಮಠಾಧೀಶರಿಂದ ದಂಪತಿಗಳಿಗೆ,ಆಶೀರ್ವಾದ ದೊರೆಯಿತು.


ಅವರ ಶಿಶ್ಯರುಗಳಲ್ಲಿ ಮುಖ್ಯವಾಗಿ ಶ್ರೀ ದತ್ತವಧೂತರು[ನಾನು ಹೇಳಲು ಹೊರಟಿರುವ ಶಿಶ್ಯರಾಗಿದ್ದಾರೆ] ಅಮೃತೇಶಭಟ್ಟರು, ಅನೇಕ ಮಠಾಧೀಶರು,ರಮೇಶಭಟ್ಟರು,ಮಧುಸೂಧನಶಾಸ್ತ್ರಿ ಹಂಪಿಹೊಳಿ,


ಮತ್ತು ವೆಂಕಟೇಶ ವೀಣಾಕರ್ ಹಾಗು ಇನ್ನೂ ಅನೇಕರಿದ್ದಾರೆ. ಅಮೃತೇಶಭಟ್ಟರು, ಹುಬ್ಬಳ್ಳಿಯಲ್ಲಿ ತಮ್ಮದೇ ಆದ ಒಂದು ಗುರುಕುಲವನ್ನು ಮಾಡಿ, ಸಧ್ಯ ೪ ಜನ ಬಾಲಕಶಿಷ್ಯರನ್ನು ವೇದ,ಮಂತ್ರ ,ಉಪನಿಷತ್ತು,


ಮುಂತಾದುವುಗಳನ್ನು ಹೇಳಿಕೊಡುತ್ತಿದ್ದಾರೆ.ಅವರ ಅನೇಕ ಶಿಷ್ಯರುಗಳು ವಿದ್ವಾಂಸರಾಗಿ,ಸಮಾಜದ ಉದ್ಧಾರಕ್ಕೊಸ್ಕರ ಶ್ರಮಿಸುತ್ತಿದ್ದಾರೆ.


ಮುಖ್ಯ ಶಿಷ್ಯರಾದ ಶ್ರೀ ದತ್ತಾವಧೂತರ ಬಗ್ಗೆ ಹೇಳುವುದಾದರೆ [ಸಂಕ್ಷಿಪ್ತವಾಗಿ] ಈಗ ಸಧ್ಯ ಅವರು ಶ್ರೀ ಬ್ರಹ್ಮಚೈತನ್ಯಾಶ್ರಮ, ಹೆಬ್ಬಳ್ಳಿ;ಯಲ್ಲಿದ್ದಾರೆ. ಶ್ರೀ ದತ್ತಾವಧೂತರೇ ಈ ಆಶ್ರಮವನ್ನು ೧೯೮೩ರಲ್ಲಿ ಸ್ಥಾಪಿಸಿ.


ಅದರ ಜೀರ್ಣೊದ್ಧಾರಕ್ಕಾಗಿ,,ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಈಗಲೂ ಆಶ್ರಮಕ್ಕೆ ಬರುವ ಭಕ್ತರಿಗೆ ಬ್ರಹ್ಮಾನಂದರು ಸಾರುವ ಶ್ರೀ ರಾಮನಾಮದ ಮಹಿಮೆ ಹಾಗೂ ನಾಮಸ್ಮರಣೆಯನ್ನು ಉಪದೇಶಿಸುವರು.


ಇವರ ಪ್ರವಚನದ ತುಂಬ ಶ್ರೀರಾಮನಾಮದ ಮಹಿಮೆ ಹಾಗೂ ನಾಮಸ್ಮರಣೆಯಿಂದ ಜನರಿಗೆ,ಉದ್ಧಾರದ ಉಪಾಯವನ್ನು ಹೇಳುವರು.


ಒಂದು ದಿನ ಸದ್ಗುವಿಗೆ ಶರಣಾಗಲು, ಈಶಿಷ್ಯನು ಅತ್ಯ್ಂತ ಶ್ರದ್ಧಾ,ಭಕ್ತಿಯಿಂದ.ಸಾಸ್ಟಾಂಗ ನಮಸ್ಕಾರ ಹಾಕುತ್ತ , ಗುರುವಿನ ಮನೆಯ ಬಾಗಿಲಿಗೆ ಬಂದಾಗ. ಸುಮಂಗಲೆಯರು ಆರತಿ ಎತ್ತಿ. ಶಿಷ್ಯನನ್ನು


ಸ್ವಾಗತಿಸಿದರು. ನಂತರ ಸದ್ಗುರುವಾದ ಶ್ರೀ ಭಾಲಚಂದ್ರಶಾಸ್ತ್ರಿಗಳು ಬಂದು ಆಸೀನರಾದರು. ಶಿಷ್ಯನಾದ ದತ್ತನು,ಅತ್ಯಂತ ವಿನಯದಿಂದಲೇ,ಹೃದಯಪೂರ್ವಕವಾಗಿ, ಗುರುಚರಣಗಳಿಗೆ ಸಾ\ನಮಸ್ಕಾರ ಸಲ್ಲಿಸಿ.ಕೈ ಜೋಡಿಸಿ.


ತಾವು ರಚಿಸಿದ ಕೃತಿಗಳನ್ನು, ಸಮರ್ಪಣೆ ಮಾಡಿದರು. ತಮ್ಮ ಗದ್ಗದ ಕಂಠದಿಂದ ಗುರುಗಳಿಗೆ ಹೀಗೆ ಹೇಳಿದರು, ತಾವು ಕಲಿಸಿದ ಎರಡಕ್ಷರದಿಂದ,{ರಾಮ] ಕೃಪೆಯಿಂದಲೇ ನಾನು ಈ ಸ್ಥಿತಿಗೆ ಬಂದಿರುವೆ. ಹೀಗೆ


ಹೇಳುವಾಗ ಇಬ್ಬರಿಗೂ ಆನಂದ ಭಾಷ್ಪಗಳೂದುರುತ್ತಿದ್ದನ್ನು ಕಂಡು ನಮಗೆಲ್ಲಗೂ ಹೃದಯ ತುಂಬಿ ಬಂದಿತು. ಒಂದು ಕ್ಷಣನಾವೆಲ್ಲರೂ ಮೈ ಮರೆತು ಧನ್ಯತಾಭಾವನೆಯಿಂದ ಆನಂದಗೊಂಡೆವು. ಗುರು ಶಿಷ್ಯರ ಸಮಾಗಮದ ಆಲಿಂಗನ ನೋಡಿ ಸಂತಸವಾಯಿತು!


ಅನೇಕವರ್ಷಗಳ ಹಿಂದೆ ನಮ್ಮ (ತಂದೆಯವರು- ಪೂಜ್ಯ. ದತ್ತಂಭಟ್ಟರು. ಆನವಟ್ಟಿ) ಹೇಳುತ್ತಿದ್ದ ಪುರಣಗಳನ್ನು ನೆನೆಸಿಕೊಂಡು, ರಾಮಾಯಣದಲ್ಲಿ ಬರುವ ದೃಶ್ಯ (ವಸಿಷ್ಠ ಮತ್ತು ಶ್ರೀ ರಾಮ)..ಮತ್ತು ಭಾಗವತದಲ್ಲಿ ಬರುವ ದೃಶ್ಯ (ಸಾಂದಿಪಿನಿ ಮತ್ತು ಶ್ರೀ ಕೃಷ್ಣ).. ಇವರುಗಳ ನೆನಪಾಗಿ ಇಂಥಾ ಕಲಿಯುಗದಲ್ಲಿಯೂ ಅಂಥಾ ಮಹಿಮಾನ್ವಿತ ಗುರುಶಿಷ್ಯರನ್ನು ಕಂಡು ನನ್ನ ಜನ್ಮ ಸಾರ್ಥಕವೆನಿಸಿತು!.ಇಂಥ ದೃಶ್ಯವನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡುವದಿಲ್ಲ (ನ ಭೂತೋ ನ ಭವಿಷ್ಯತಿ)!!!! ಇಂಥ ದೃಶ್ಯವನ್ನು ಕಂಡ ನಾನೇ ಧನ್ಯ. ಅವರ ಆಶೀರ್ವಾದ ಪಡೆದು ಕೃತಾರ್ಥಳಾದೆನು.


ಸೂಚನೆ: ಶಾಸ್ತ್ರಿಗಳನ್ನು ಕುರಿತು..ಕೆ. ಸ್. ಎಲ್. ಸ್ವಾಮಿ (ರವಿ)ಯವರು ನಿರ್ದೇಶಿಸಿದ ಸಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಪೂರ್ಣಮಾಹಿತಿ ಬೇಕಾದಲ್ಲಿ,


ಮ್ಯಾನೆಜರ,


ಸಂಸ್ಕೃತ ಪಾಠಶಾಲಾ


ಧಾರವಾಡ.



ಅಂಬುಜಾ ಜೋಶಿ.



 



 


Rating
No votes yet