ಪ್ರಳಯ
ಪ್ರಿಯಾ,
ವರ್ಷಾಂತ್ಯಕ್ಕೆ ಪ್ರಳಯ,
ಹೊಗುವೆವೆ ನಾವೆಲ್ಲ ಕೊಚ್ಚಿ?
ಎದ್ದಿರುವೆ ನಾನೀಗ ಕನಸಲ್ಲಿ ಬೆಚ್ಚಿ !!
ಪ್ರಿಯೆ,
ಸುನಾಮಿ ಭೂಕಂಪಗಳಿಗೆ
ಹೆದರುವಾತ ನಾನಲ್ಲ,
ಅದೆಷ್ಟು ಪ್ರಳಯಗಳ
ನಾನೀ ಮನೆಯೊಳಗೆ ನೋಡಿಲ್ಲ !!
ಬೀಸದೆಯ ಬಿರುಗಾಳಿ
ಎಷ್ಟೊಂದು ಬಾರಿ
ಹೋಗಿಲ್ಲವೇ ಮನೆಯ ಸೂರು
ಧ್ವನಿಯಬ್ಬರಕೆ ಹಾರಿ :)
Rating
Comments
ಅದ್ಸರೀ..ನೆ ...!!
ಅದ್ಸರೀ..ನೆ
ಮನೆಯವರ ಆಬ್ಬರದ ಮುಂದೆ ಈ ಬಿರುಗಾಳಿ-ಭೂಕಂಮ್ಪ ಸುನಾಮಿ ಪ್ರಳಯ ಏನು ಮಹಾ...!!
ಕೆಲವೇ ಸಾಲುಗಳಲ್ಲಿ ನಿಮ್ಮ ಗಟ್ಟಿತನವನ್ನು ತೆರೆದಿತ್ತಿರುವಿರಿ...!!
ಶುಭವಾಗಲಿ..
ನಾಡ ಹಬ್ಬ ದಸರಾದ ಶುಭಾಶಯಗಳು..
\|
In reply to ಅದ್ಸರೀ..ನೆ ...!! by venkatb83
ನಿಮಗೂ ಹಬ್ಬದ ಶುಭಾಶಯಗಳು
ನಿಮಗೂ ಹಬ್ಬದ ಶುಭಾಶಯಗಳು ವೆಂಕಟೇಶ್ರವರೆ :)