ಪ್ರೀತಿಗೆ ಯಾವ ಇನ್ಸುರನ್ಸೂ ಇಲ್ಲಾರಿ!!

ಪ್ರೀತಿಗೆ ಯಾವ ಇನ್ಸುರನ್ಸೂ ಇಲ್ಲಾರಿ!!

ಮತ್ತೊಂದು ವರುಷ ನಿನ್ನ ನೆನಪಿನಲ್ಲಿ ಕಳೆಯಿತು,ಸಾವೇ ಇರದ ಒಂದು ಜೀವಕ್ಕೆ ಪ್ರೀತಿ ಎಂಬುದು ಏನೋ ಒಂದು ಕಲಿಸಿ, ಎನೋ ಒಂದನ್ನು ಕಸಿದು೦ಕೊಂಡು ಅದನ್ನು ನಿಸ್ತೇಜವನ್ನಾಗಿ ಮಾಡಿ ಬಿಡುತ್ತದೆ.ನಾವು ಆಡ್ತಾ ಇರೊ ಮಾತು,ನಮ್ಮ ನಡವಳಿಕೆ, ನಮ್ಮ ಏಕಾಂಗಿತನ ಏಲ್ಲವೂ ಯಾವುದೋ ಒಂದು ಗಳಿಗೆಯಲ್ಲಿ ನಮ್ಮನ್ನು ನಾವು ಮರೆಯುವಂತೆ ಮಾಡುತ್ತದೆ.ನಿನ್ನ ನೆನಪು ಬಿರುಗಾಳಿಯಂತೆ ಬಳಿಯಲ್ಲಿ ಸುಳಿಯೂತಿದ್ದರೂ ಹೇಳಲು ಅದನ್ನು ಆಗ್ತಾ ಇಲ್ಲ.ಆದರೂ ಅದರಲ್ಲಿ ಏನೋ ಒಂದು ಸಂತೋಷ.ಎಲ್ಲಿ ಹೀಗೆ ನಿನ್ನ ನೆನಪಿನಲ್ಲಿ ಜೀವನ ಮಾಡಬಹುದಾ?,ದಡವೇ ಇಲ್ಲದ ನನ್ನ ಬದುಕನ್ನು ಯಾವುದಾದರೂ ಒಂದು ದಡಕ್ಕೆ ಸೇರಿಸಬಹುದಾ?.ಹೌದು ಅಂತ ಒಂದು ದೈರ್ಯ ಮನಸ್ಸಿನಿಂದ ಎದ್ದು,ಎಲ್ಲ ಸಾದ್ಯ ಮಾರಾಯ್ತಿ ಅಂತ ಕೂಗಿ ಹೆಳಬೇಕು ಅನ್ನುಸುತ್ತೆ,ಆದರೆ ಎದ್ದ ಕ್ಶಣದಲ್ಲಿಯೇ ಅಲ್ಲಿಯೇ ಕುಳಿತುಕೊಳ್ಳುತ್ತೇನೆ.ಜಗತ್ತು ನೋಡುವ ಬೆರಗು ಕಣ್ಣಿಗೆ ಯಾಕೋ ಹೆದರಿಕೆ.

ಲೋಗ್ ಕೆಹೆತೆ ಹೈ,ಎ ದಿಲ್ ದೀವನಾ ಹೈ.
ಶಾಯದ್ ಇಸ್ ಲಿಯೆ, ಅಬ್ ಎ ದಿಲ್ ಅಪ್ನಾ ನಂಹಿ ಹೈ.
ಪರಾಯಾ ಹೊಗಯಾ ಹೈ.
ನಿನ್ನ ಒಂದು ನಂಬಿಕೆ ಸಾಕು.ನೀನು ನನ್ನಲಿ ಇಟ್ಟ ಪ್ರೀತಿಗೆ ನಾನು ಮೋಸ ಮಾಡೂವುದಿಲ್ಲ.ನಿನ್ನ ಭಾವನೆಗಲಿಗೆ ನಾನು ದಕ್ಕೆ ತರುವುದಿಲ್ಲ.ನೋಡು ಜೀವನ ಅಂದರೆ ಯಾರೊನ್ನೋ ನಂಬಿಸಿ ಕಷ್ಟಪಟ್ಟು ಜೀವನ ಮಾಡುವುದಲ್ಲ.ನಮ್ಮನ್ನು ನಾವು ನಂಬಿಕೊಂದು, ನಮ್ಮ ಪ್ರೀತಿಯನ್ನು ಶ್ರೀಮಂತ ಗೊಳಿಸಿಕೊಳ್ಳಬೇಕು.

ಏಕೆಂದರೆ, ಸೋತ ಪ್ರೀತಿಗೆ,ಅದನ್ನು ಕಳೆದುಕೊಂದ ಮನಸ್ಸಿಗೆ ಯಾವ ಇನ್ಸುರನ್ನ್ಸೂ ಇಲ್ಲ ಕಣೆ!!

Rating
No votes yet