ಪ್ರೀತಿಯ ಅನುರಾಗದ ಅಲೆ:

ಪ್ರೀತಿಯ ಅನುರಾಗದ ಅಲೆ:

ಓ...ಪ್ರೀತಿಯೇ....
ಅನುರಾಗದ ಅಲೆಗಳಂತೆ ಬಾಳಲ್ಲಿ ಬಂದು
ವೈವಿದ್ಯಮಯವಾದ ಪ್ರೀತಿ-ಪ್ರೇಮದ ಅಮಲೇರಿಸಿ
ಕ್ಷಣಕಾಲ ಮರೆಯಾದ ಓಲವಿನ ಗೆಳತಿಯೇ...
ಮನದ ಭಾವನೆಗಳಿಗೆಲ್ಲಾ ಮಾತುಕೊಟ್ಟು
ಶಬ್ದವಿರದ ಮೌನಗಳಿಗೆ ಸಂವೇದನೆಯ ಸಂಭಾವನೆಯಿಟ್ಟು ನೇವರಿಸಿ
ಕಣ್ಣಮುಂದೇಯೇ ಇದ್ದರೂ ಹೃದಯದ ಕದ ತಟ್ಟದ
ಬಂಧು-ಬಾಂದವರ ಬಂಧನಗಳೆಲ್ಲದರ ಮುಸುಕು ತೆಗೆದು
ಮನಸ್ಸಿನ ಮನಸ್ಸೋಲ್ಲಾಸಗಳಿಗೆಲ್ಲಾ ಭಾವನೆಯ ಭಾವಗೀತೆಗಳ ಲಹರಿ ಹರಿಸಿ,
ನಿನ್ನ ಪ್ರೀತಿಯನ್ನು ಬೇಡುವೆ ಈ ಪರಿ.
ಇಳಿಬಿಟ್ಟ ಮುಂಗುರುಳ ಒಳಗಿನ ಚಂದ್ರಮನ ಕಾಣಲು
ಮನದಲ್ಲಿದ್ದ ಕಂಬನಿ ತುಂಬಿದ ದುಗುಡ
ಪ್ರೀತಿಯಾಗಿ ಸುರಿವಾ ಅಂಬರ ಚುಂಬಿತ ಪ್ರೇಮದ ಅಮೃತಧಾರೆ
ಹೃದಯದ ಹುತ್ತಕ್ಕೆ ಸೂಸಿತು.......
ಇದೋ ನೋಡು ಮನತೆರೆದು
ಮನದರಸಿಯೇ .... ಮನದಲ್ಲಿ ಆವರಣಗೊಂಡಿರುವೆ,
ಮನದಲ್ಲಿ ಸದ್ದಿಲ್ಲದೇ ಪ್ರೀತಿಯೆಂಬ ಗದ್ದಲವೆಬ್ಬಿಸಿ
ನೇಪಥ್ಯಕ್ಕೆ ಸರಿಯದೇ ನನ್ನೋಲವ ಮಲ್ಲಿಗೆಯೇ
ಸೇರುವೆಯಾ... ನನ್ನೋಡನೆ ಬಾಳಜೋಡಿಯಾಗಿ....
ಕಾಯುವೇನು ನಾ..ನಿನಗಾಗಿ...
" ಪ್ರೀತಿಯಿಂದ ಪ್ೞ್ರೀತಿಗಾಗಿ... "
ಜಿ. ವಿಜಯ್ ಹೆಮ್ಮರಗಾಲ.

Rating
No votes yet