ಪ್ರೀತಿಯ ಗೆಳೆಯಾ

ಪ್ರೀತಿಯ ಗೆಳೆಯಾ

ಛನ್ ಸೆ ತೊ ಟೂಟೆ ಕೋಯೀ ಸಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ ಕೊಯೀ ರಹೆನಾ ಜಬ ಅಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ.. ರೆಹೈತೋ  ಯೆ ಕ್ಯೂಂ ಹೋತಾ ಹೈ ಜಬ್ವಯೇ ದಿಲ್ ರೋತಾ ಹೈಕೋಯೀ ಸಿಸಕ್ ಸಿಸಕ್ ತೆಹವಾ.......ಸ         ಸಿ. ಡಿ ಪ್ಲೇಯರ್ ನಿಂದ ಹಾಡು ಧ್ವನಿಸುತ್ತಿದೆ. ನನ್ನದೇ ಹೃದಯದ ಮರುದನಿಯಂತೆ.......ಗೆಳೆಯಾ ನೀನೊಂದು ಪ್ರಶ್ನೆ ಕೇಳಿದ್ದೆ. ನೆನಪಿದೆಯಾ? ಮೌನಿಯಾಗುತ್ತೀಯಾ? ವೇದಾಂತಿಯಾಗುತ್ತೀಯಾ? ಅಂತ. ನಿನಗ್ಯಾಕೆ ಈ ಪ್ರಶ್ನೆ ಅಂತಾನು ಕೇಳಿದ್ದೆ. ಉತ್ತರ ಕೊಡೋಕೆ ನಾನು ಸಾಧ್ಯವಿಲ್ಲದ ಪ್ರಶ್ನೆ ಇದು. ಆದರೂ ಕೊಡೋಕೆ ಪ್ರಯತ್ನಿಸುತ್ತೇನೆ.          ಇದಕ್ಕೆ ಪೂರಕವಾದ ನಿನ್ನ ಇನ್ನೊಂದು ಪ್ರಶ್ನೆ . " ನಿನ್ನ ಸಾಧನೆಗೆ ವ್ಯಾಖ್ಯೆ ಕೊಡಬೇಕಾದವಳು ನೀನು ತಾನೆ? " ಅನ್ನೋದು.ನಿಜ ಸಾಧನೆಗೆ ವ್ಯಾಖ್ಯೆ ಕೊಡಬೇಕಾದದ್ದು ನಾನೇ. ಹಾಗಂತ ಸಾಧನೆ ಅನ್ನೋದು ಹಣ ಗಳಿಸಲಾರದ ಸಾಧನೆಯಾಗಿದ್ದರೆ ಅದು ಸಾಧನೆಹೇಳಿಸಿಕೊಳ್ಳುವುದಿಲ್ಲ ಅನ್ನೋದು  ವಾಸ್ತವ ಸತ್ಯ. ನನ್ನ ಪ್ರಕಾರ ಮನುಷ್ಯ ಇಡುವ ಪ್ರತಿಯೊಂದು ಮೇಲ್ಮುಕ ಹೆಜ್ಜೆಯೂ ಅವನಿಗೆ ಖುಶಿ ಕೊಡುವ  ಎಲ್ಲ ಹೆಜ್ಜೆಗಳೂ ಸಾಧನೆಗಳೇ ಅಂತ ನಾನೇ ನಿನಗೆ ಹೇಳಿದ್ದೆ. ಆದರೆ ವಾಸ್ತವ ಹಾಗಿರುವುದಿಲ್ಲ ಅಂತ ನಮಗಿಬ್ಬರಿಗೂ ಗೊತ್ತು.ಖುಶಿಕೊಡುವ ಬದುಕು  ಊಟ ಹಾಕೋದಿಲ್ಲ, ಅಗತ್ಯಗಳ  ಪೂರೈಸೋದಿಲ್ಲ ಅಂತಾದರೆ  ಅವನದರಿಂದ ಹೊರಬೀಳಲೇಬೇಕು ಅಲ್ಲವಾ?ಅಂತಹ ಸಾಧನೆಗಳಿಗೆ ಅರ್ಥ ಸಿಕ್ಕೋದಿಲ್ಲ ಅನ್ನೋದು ಕಟುಸತ್ಯವೇ.       ಗೆಳೆಯಾ, ಹಾಗಿದ್ದರೆ ನನ್ನ ಸಾಧನೆಗೆ ಬೆಲೆಯೇನುಳಿಯಿತು? ಹೊಟ್ಟೆ ತುಂಬಿಸಲಾರದ ಸಾಹಿತ್ಯ ಬರೆದೇನು ಪ್ರಯೋಜನ? ನೀನು ಹೇಳಿದಂತೆ ಗದ್ದಲಗಳಿಲ್ಲದ, ಸದ್ದಿಲ್ಲದ ಮನಸ್ಸಿನೊಂದಿಗೆ  ಬದುಕಲಾರೆವಲ್ಲವಾ? ಬದುಕಿನ ಕುಶಿ ಅದರ ಜೊತೆಗಿನ ನೋವುನಲಿವುಗಳ ಜೊತೆಗೇನೆ ಇದೆ. ಹಾಗಿದ್ದಮೇಲೆ ಮೌನಿಯೂ ಆಗಲಾರೆ. ವೇದಾಂತಿಯೂ ಆಗಲಾರೆ .ಜೊತೆಗೆ ಮೌನಿಯಾಗುವ ಹಂಬಲ,ವೇದಾಂತಿಯಾಗುವ ಹುಚ್ಚು ಹೊತ್ತಿಸಿಕೊಂಡ ಬದುಕಲಾರದ ಹೇಡಿಯಾಗಿಬಿಡುತ್ತೇನೆ. ಆಗಲೇ ಸಾವು ಅನ್ನೋದು ನನ್ನ ಕಾಡೋದು.ಬದುಕಿನ ಬಯಕೆ ಇಲ್ಲದೇ ಅಲ್ಲ. ಸಾವಿನ ಮೌನದ ಶಾಂತಿಯ ಹುಡುಕಾಟದಲ್ಲಿ. ಬದುಕಿ ಏನೂ ಪ್ರಯೋಜನ ಅನ್ನಿಸಿದಾಗ ಸಾವುಆಸೆಯಾಗದಿದ್ದರೂ ಅದರೆಡೆಗೆ ಯೋಚನೆ ಹರಿಯತ್ತೆ.                 ಗೆಳೆಯಾ, ಒಂದು ಉದಾಹರಣೆ ಹೇಳಲಾ? ಹೆತ್ತ ಮಕ್ಕಳನ್ನು ಪ್ರೀತಿಸದ ಅಪ್ಪ ಅಮ್ಮ ಯಾರಿರುತ್ತಾರೆ ಹೇಳು? ಆದರೆನಿಷ್ಪ್ರಯೋಜಕರಾದ ಮಕ್ಕಳನ್ನು ಒಂದು ದಿನ ದ್ವೇಷಿಸುವ ಮನಸ್ಥಿತಿಗೆ ತಲುಪುತ್ತಾರೆ! ಯಾಕೆಂದರೆ ಅದು ಬದುಕಿನ ವಾಸ್ತವ.ಹಾಗೇ ಒಳ್ಳೆಯತನವೂ ಅಷ್ಟೆ. ನಿನ್ನ ನೀನು ಕಾಪಾಡಿಕೊಳ್ಳಲಾಗದ ಒಳ್ಳೆಯತನ ನಿನ್ನ ತುಂಬಾ ನೋಯಿಸತ್ತೆ. ಆಗ ಒಂದು ಕ್ಷಣವಾದರೂಅನ್ನಿಸದಿರದು. ಇದೆಲ್ಲಾ ಯಾಕಾಗಿ ಅಂತ. ಹಾಗಾಗಿಯೂ ನಮ್ಮ ಮೂಲಗುಣದಿಂದ ನಾವು ಹೊರಬರಲಾರೆವು. ಅದೇ ನಮ್ಮತನ..

ಗೆಳೆಯಾ ಇದೆಲ್ಲಾ ಯಾಕೆ ಬರೆದೆ ಗೊತ್ತಾ? 

ಯಾಕೆಂದರೆ ನೀನು ಹೇಳಿದಂತೆ ಸಾವು ಅನ್ನುವುದು ಯಾರ ಬಯಕೆಯೂ ಆಗಲು ಸಾಧ್ಯವಿಲ್ಲ ಅನ್ನೋದು ಒಪ್ಪುವ ಮಾತಾದರೂ
ಸಾವಿನ ಜೊತೆಗಿನ ಮೌನದ ಕುರಿತಾಗಿ ನಿನ್ನ ಅನಿಸಿಕೆಯೇನೋ ನನಗೆ ಗೊತ್ತಿಲ್ಲ. ನಾನು ಸಾವಿನ ಕುರಿತಾದ ಅದಮ್ಯ ಹಂಬಲದ ಹೊರತಾಗಿ ಮೌನದ ಮತ್ತೊಂದು ಅರ್ಥ ಶೂನ್ಯವೂ ಆಗಬಹುದು. ಯಾವ ಮೌನ ಆನಂದ ಕೊಡುವುದೋ ಯಾವ ಮೌನ
ಮನಸ್ಸಿನ ನಿಜ ರೂಪವೋ ಆ ಮೌನದ ಹೊರತಾಗಿ ನಾನು ಸದ್ದು ಗದ್ದಲವಿಲ್ಲದ ಶೂನ್ಯವೂ ಆಗಿಬಿಡಬಹುದು. ಅದೊಂದು ಯಾತನಾಮಯವಾದ ಮೌನ. ಅಲ್ಲವಾ? ಅಂತಹ ಸ್ಥಿತಿ ಬಾರದಿರಲು ಬದುಕಿಗೆ ಪ್ರೀತಿ ಬೇಕು. ಅದು ಯಾವ ರೂಪದಲ್ಲೇ ಇರಲಿ.
ಆದರೆ ಅದಮ್ಯ ಪ್ರೀತಿಯಾಗಿರಬೇಕು. ಬದುಕಿಗೆ ಸ್ಫೂರ್ತಿ ತುಂಬಿ ತರಬೇಕು. ಜೀವನದ ಎಲ್ಲ ಕಷ್ಟ ಕಾರ್ಪಣ್ಯಗಳ ಹಂಚಿಕೊಂಡು
ನಗುವಾಗಿಸುವ ಪ್ರೀತಿಯಾಗಿರಬೇಕು. ಈ ಪ್ರೀತಿ ಮತ್ತೊಂದು ಅರ್ಥದಲ್ಲಿ ನಮ್ಮಲ್ಲಿ ಕ್ರಿಯಾಶೀಲತೆಯನ್ನೂ ತುಂಬಬೇಕು.
ಎಲ್ಲಕ್ಕೂ ಊರುಗೋಲಾಗಿ ಮನುಷ್ಯನಿಗೆ ಮಾಡಲು ಕೆಲಸಬೇಕು. ಎಷ್ಟು ದುಡಿಯುತ್ತೇವೆ ಅನ್ನೋದು ಮುಖ್ಯವಲ್ಲ. ಮಾಡುವ
ಕೆಲಸಕ್ಕೆ ಒಂದಿಷ್ಟಾದರೂ ಬೆಲೆಯಿರಬೇಕು. ಯಾರ ಹತ್ತಿರವೂ " ಕೂಳಿಗೆ ದಂಡದ ಬದುಕು" ಅನ್ನಿಸಿಕೊಳ್ಳಬಾರದು.
ಮತ್ತೂ ಒಂದು ಸತ್ಯವೆಂದರೆ ಹೀಗೆ ದುಡಿಯುವ ಸಾಮರ್ಥ್ಯವಿರುವವನಿಗೆ ಮಾತ್ರ ಕನಸುಕಾಣುವ ಯೋಗ್ಯತೆಯಿರುವುದು
ಸತ್ಯ. ಇವೆಲ್ಲ ಒಂದಕ್ಕೊಂದು ದಾರದಲ್ಲಿ ಪೋಣಿಸಿದಂತೆ. ......
ಗೆಳೆಯಾ ನೀನು ಒಪ್ತಿಯಾ ಇಲ್ಲವಾ ನನಗ್ಗೊತ್ತಿಲ್ಲ. ಇದು ವೇದಾಂತ ಅಲ್ಲ. ಮನದಿ ಕಾಡುವ ಪ್ರಶ್ನೆಗಳ ಹುಡುಕಾಟ.
ಮತ್ತೆ ಸಿಗೋಣ ಬೈ ಬೈ  

 

Rating
No votes yet

Comments