ಪ್ರೀತಿ, ನಾನು ಮತ್ತು ದೇವರು
ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆ
ಆನಂತರ ಏನಾಯಿತು ಎಂದು ನೋಡಲಿಲ್ಲವೆ
ದೇವರೆ ಕಾಣದಂತೆ ನೀ ಎಲ್ಲಿರುವೆ?
ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??
ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ??
ಎಲ್ಲರೂ ಹಾಕಿರುವರು ಪ್ರೀತಿಯೆಂಬ ಮುಖವಾಡ
ಮುಗ್ದ ಮುಖವ ನಂಬಿದವನು ಮೂಢ
ತೆರೆಯ ಹಿಂದೆ ತೋರುವರು ಅಸಲಿ ಕೈವಾಡ
ಕಳಚಿ ಬಿಳಲಿ ಎಲ್ಲರಮನಸ್ಸನು ಮುಚ್ಚಿರುವ ಮುಖವಾಡ
ಓ ಭಗವಂತಾ... ಒಮ್ಮೆ ತೋರಿಸು ನೀ ಪವಾಡ..
ಕಲ್ಲನ್ನು ಕೂಡ ಪ್ರೀತಿ ಕರಗಿಸುವುದಂತೆ
ಕರಗಿದವನು ಮುಂದೆ ಬಾಳಲಿ ಮರಗುವನಂತೆ
ಬದುಕಿನ ರೀತಿ ನೀತಿಗಿರಲಿ ಸರಿಯದ ಅರ್ಥ
ಭ್ರಮೆಗೆ ಸಿಲುಕಿ ಆಗದಿರಲಿ ಈ ಬಾಳು ವ್ಯೆರ್ಥ
ಓ ಭಗವಂತಾ... ಅಳಿಸು ನೀ ಎಲ್ಲರ ಸ್ವಾರ್ಥ..
ದೇಶ ಭಾಷೆಯ ಮೀರಿದ್ದು ಪ್ರೀತಿ ಎನ್ನುವರು
ಪ್ರೀತಿ ಶಾಂತಿಯ ಮಂತ್ರ ಅನುಕ್ಷಣ ಪಠಿಸುವರು
ಆದರೂ, ದ್ವೆಷವೆಂಬ ಕತ್ತಿ ಮಸಿಯುವರು
ದ್ವೆಷವ ಮರೆತು ಒಂದಾಗಲಿ ಎಲ್ಲರು
ಓ ಭಗವಂತಾ... ಯೋಚಿಸು ನೀ ಎಂದಾದರು..
ನೋಡಲಾಗದು ಅಮಾಯಕರು ಪಡುವ ಯಾತನೆ
ಪ್ರೀತಿಯ ಹೆಸರಲಿ ನೆಡೆಯುತಿದೆ ಮೋಸ ವಂಚನೆ
ಯಾರಿಗು ಇಲ್ಲ ಮುಂದಿನ ಪರಿಣಾಮದ ಚಿಂತನೆ
ಮಾಡುತ್ತಿರುವೆ ಮನದಾಳದಿಂದ ನಿನ್ನಲ್ಲಿ ಯಾಚನೆ
ಓ ಭಗವಂತಾ... ನೀಡು ನೀ ಸಮರ್ಥನೆ..
(ದೇವರು ಹೇಳಿದ್ದು)
ನಾ ಸೃಷ್ಟಿಸಿದ ಪ್ರೀತಿಯಲ್ಲಿರದು ಯಾವುದೆ ದೋಷ
ಮನುಜನ ಮನದಲ್ಲೆ ಅಡಗಿದೆ ವಿಷ
ನಿಮಗಿರುವ ಜೀವನ ಕೆಲವೆ ವರುಷ
ಈ ಸತ್ಯವ ನೀವೆಲ್ಲರು ಅರಿತ ನಿಮಿಷ
ಜಗದಲಿ ತುಂಬುವುದು ಪ್ರೀತಿ ಹರುಷ
Comments
ಉ: ಪ್ರೀತಿ, ನಾನು ಮತ್ತು ದೇವರು
In reply to ಉ: ಪ್ರೀತಿ, ನಾನು ಮತ್ತು ದೇವರು by nanjunda
ಉ: ಪ್ರೀತಿ, ನಾನು ಮತ್ತು ದೇವರು
ಉ: ಪ್ರೀತಿ, ನಾನು ಮತ್ತು ದೇವರು
In reply to ಉ: ಪ್ರೀತಿ, ನಾನು ಮತ್ತು ದೇವರು by venkatb83
ಉ: ಪ್ರೀತಿ, ನಾನು ಮತ್ತು ದೇವರು
In reply to ಉ: ಪ್ರೀತಿ, ನಾನು ಮತ್ತು ದೇವರು by Prathik Jarmalle
ಉ: ಪ್ರೀತಿ, ನಾನು ಮತ್ತು ದೇವರು:@ಜೂ: ಬರಲು ಕಾರಣ ...???
In reply to ಉ: ಪ್ರೀತಿ, ನಾನು ಮತ್ತು ದೇವರು:@ಜೂ: ಬರಲು ಕಾರಣ ...??? by venkatb83
ಉ: ಪ್ರೀತಿ, ನಾನು ಮತ್ತು ದೇವರು:@ಜೂ: ಬರಲು ಕಾರಣ ...???
In reply to ಉ: ಪ್ರೀತಿ, ನಾನು ಮತ್ತು ದೇವರು:@ಜೂ: ಬರಲು ಕಾರಣ ...??? by Prathik Jarmalle
ಉ: ಪ್ರೀತಿ, ನಾನು ಮತ್ತು ದೇವರು:@ಜೂ: ಬರಲು ಕಾರಣ ...???