ಬಣ್ಣದ ಜಿಂಕೆ
ಬಣ್ಣದ ಜಿಂಕೆ ಹಳಹಳದಿಯ ಜಿಂಕೆ
ಹೊನ್ನಿನ ಬಣ್ಣದಿ ನಳನಳಿಸುವ ಜಿಂಕೆ
ಈಗೀಗಲೇ ಬೇಕೆನಗೆನ್ನ ಮುದ್ದಿನ ಜಿಂಕೆ
ಹಿಡಿತಾರೆಂದಳು ತನ್ನ ಪುರುಷನಿಗೆ
ನಾಥನ ಕಾಣದೆ ಕಳುಹಿದಳಾಗಳೇ
ಆರಯ್ಯಲು ಕೂಡೆಯೇ ಉಳಿದವನ
ಗೆರೆಯನ್ನೆಳೆಯುತ್ತ ಎಚ್ಚರವಿತ್ತರೂ
ಮರೆತಳು ಜೋಳಿಗೆಯ ಕಾಣುತ್ತಲೇ
ಮಾರೊಡಲನ್ನಾಂತಿದ್ದ ಮಾರನು ಕೊನೆಗೆ
ನಿಜದೊಡಲನ್ನು ತೋರುತ್ತಲುರುಳಿದನು
ಬಾಯ್ದೆರೆದಳುತಲಿ ಬಿಕ್ಕಳಿಸಿದನವನು
ಮನೆಯವಳನ್ನಲ್ಲಿಯೇ ಕಾಣದಲೇ
ಇದ್ದೇ ಇರುವುವು ದಾರಿಯೋ ನೂರು
ಸಂತತ ಶ್ರಮದಿಂದಿರೆ ತೆರೆದಾವು
ಅಗಸ್ತ್ಯ ಹೃದಯದುಪದೇಶದ ಕೊನೆಗೆ
ಕಂಡಿತು ಕಾಣದ ಸಾವಿರವೂ
Rating
Comments
ಉ: ಬಣ್ಣದ ಜಿಂಕೆ :ಕೆ ಪಿ ಕೆ ಅವ್ರೆ-
In reply to ಉ: ಬಣ್ಣದ ಜಿಂಕೆ :ಕೆ ಪಿ ಕೆ ಅವ್ರೆ- by venkatb83
ಉ: ಬಣ್ಣದ ಜಿಂಕೆ :ಕೆ ಪಿ ಕೆ ಅವ್ರೆ-
In reply to ಉ: ಬಣ್ಣದ ಜಿಂಕೆ :ಕೆ ಪಿ ಕೆ ಅವ್ರೆ- by kpbolumbu
ಉ: ಬಣ್ಣದ ಜಿಂಕೆ :ಕೆ ಪಿ ಬಿ ಅವ್ರೆ ..!!
ಉ: ಬಣ್ಣದ ಜಿಂಕೆ
In reply to ಉ: ಬಣ್ಣದ ಜಿಂಕೆ by Aravind M.S
ಉ: ಬಣ್ಣದ ಜಿಂಕೆ
ಉ: ಬಣ್ಣದ ಜಿಂಕೆ
In reply to ಉ: ಬಣ್ಣದ ಜಿಂಕೆ by ananthesha nempu
ಉ: ಬಣ್ಣದ ಜಿಂಕೆ