ಬದುಕುವ ಕಲೆ
ಬದುಕುವ ಕಲೆ (Art of Living)
ಇತ್ತೀಚಿಗೆ ನಾನು ಈ ಕಲೆಯನ್ನು ಕಲಿತೆ! ಇದು ಒಟ್ಟು ೬ ದಿನಗಳ ಕೋರ್ಸ್. ಇದರಲ್ಲಿ, ಸತ್ಸಂಗ, ಹಿತವಚನಗಳ ಜೊತೆಗೆ ಮುಖ್ಯವಾಗಿರುವುದೇನೆಂದರೆ 'ಪ್ರಾಣಾಯಮ' ಮತ್ತು 'ಸುದರ್ಶನ ಕ್ರಿಯ ಯೋಗ'. ಇವುಗಳ ಬಗ್ಗೆ ಸ್ವಲ್ಪ ಇಲ್ಲಿ ವಿವರಿಸುತಿದ್ದೇನೆ.
ಪ್ರಾಣಾಯಾಮ:
ಮೊದಲಿಗೆ ಕಣ್ಮುಚ್ಚಿಕೊಂಡು, 'ವಜ್ರಾಸನ' ದಲ್ಲಿ ಕುಳಿತುಕೊಳ್ಳಬೇಕು. ವಜ್ರಾಸನದಲ್ಲಿ ಕುಳಿತರೆ ಬೆನ್ನುಮೂಳೆ ನೇರವಾಗಿರುವುದು ಮತ್ತು ಉಸಿರಾಟ ಸುಗಮವಾಗಿರುವುದು.
ಪ್ರಾಣಯಾಮದಲ್ಲಿ ಮೂರು ಹಂತಗಳಿರುತ್ತವೆ. ಒಂದೊಂದು ಹಂತದಲ್ಲೂ ತೋಳುಗಳನ್ನು ಕೆಳಗಿನಿಂದ ಮೇಲಕ್ಕೆ (ಒಂದನೆಯ ಹಂತದಲ್ಲಿ ಸೊಂಟದ ಮೇಲೆ, ಎರಡನೆಯ ಹಂತದಲ್ಲಿ ಭುಜದ ಕೆಳಗೆ, ಮತ್ತು ಮೂರನೇಯ ಹಂತದಲ್ಲಿ ಹೆಗಲೆಲುಬಿನ ಮೇಲೆ) ಇಡಲಾಗುತ್ತದೆ. ಇದರಿಂದ ಹೆಗಲು ಮತ್ತು ಕತ್ತಿನ ಸ್ನಾಯುಗಳು ದೈಹಿಕವಾಗಿ ಪಾಲ್ಗೊಳ್ಳುತವೆ, ಜೊತೆಗೆ ಆ ಭಾಗಗಳಲ್ಲಿ ಶೇಖರಿತವಾದ ಒತ್ತಡದಿಂದ ನೆಮ್ಮದಿ ಸಿಗುತ್ತದೆ.
ಇನ್ನು 'ಉಜ್ಜೈ'. ಉಜ್ಜೈ ಒಂದು ಉಸಿರಾಟದ ವಿಧಾನ. ಇದು ಗಂಟಲಿನಿಂದ ಉಸಿರಾಡುವ ವಿಧಾನ. ಈ ವಿಧಾನದ ಉಸಿರಾಟ ಬೆನ್ನು ಮೂಳೆಯ ಮೇಲೆ ಕೇಂದ್ರೀಕ್ರತವಾಗಿರುತ್ತದೆ.
'ಭಸ್ತ್ರೀಕಾ' ಬಲವಾಗಿ ಉಸಿರಾಡುವ (ಮೂಗಿನಿಂದ) ವಿಧಾನ. ಇದರಿಂದ ಶ್ವಾಸಕೋಶ ಶುದ್ಧವಾಗುತ್ತದೆ ಮತ್ತು ಹಿಗ್ಗುತದೆ.
ಕೊನೆಯಲ್ಲಿ, ಸುಖಾಸನದಲ್ಲಿ ಕುಳಿತು, ಸುದರ್ಶನ ಕ್ರಿಯೆಯನ್ನು ಮಾಡುವುದು. ಇದರಲ್ಲಿ ಉಸಿರಾಟವನ್ನು ಪ್ರಾಸಬದ್ಧವಾಗಿ ಮೊದಲಿಗೆ ದೀರ್ಘ ಉಸಿರಾಟ, ಮಧ್ಯಮ ಮತ್ತು ಶೀಘ್ರ ಉಸಿರಾತ ಮಾದಲಾಗುತ್ತದೆ.
ಸುದರ್ಶನ ಕ್ರಿಯೆಯಲ್ಲಿ ಕಣ್ಣು ಮುಚ್ಚಿ, ಮೂಗಿನಿಂದ ಜೋರಾಗೆ ಉಸಿರಾಡಬೇಕಾಗುತ್ತದೆ. ಈ ಉಸಿರಾಟ, ಕ್ಯಾಸೆಟ್ ಪ್ಲೇಯರ್ನಲ್ಲು ಶ್ರೀ ರವಿಶಂಕರ್ರವರ ಧ್ವನಿಯಲ್ಲಿ ಬರುವ 'ಸೋ...ಹಮ್' ಎನ್ನುವ ಕ್ರಮದಲ್ಲಿರುತ್ತದೆ. 'ಸೋ...' ಎಂದಾಗ ಉಸಿರನ್ನು ಒಳಗೆ ತೆಗೆದುಕೊಳ್ಳುವುದು ಮತ್ತು 'ಹಮ್' ಎಂದಾಗ ಉಸಿರನ್ನು ಹೊರಗೆ ಬಿಡುವುದು. ಈ ಉಸಿರಾಟ ಪ್ರಾರಂಭದಲ್ಲಿ ನಿಧಾಅವಾಗಿ, ನಂತರ ವೇಗವಾಗಿ, ಆನಂತರ ಇನ್ನು ವೇಗದಿಂದ ಮಾಡಲಾಗುತ್ತದೆ.
ಇದನ್ನು ಮಾಡಲು ೨೦ ರಿಂದ ೩೦ ನಿಮಿಷಗಳಾಗುತ್ತದೆ. ನಂತರ ಕಣ್ಮುಚ್ಚಿಕೊಂಡೆ ಶವಾಸನದಲ್ಲಿದ್ದುಕೊಂಡು ವಿಶ್ರಮಿಸುವುದು. ಈಥರ ವಿಶ್ರಮಿಸುವಾಗಲೇ, ಸುದರ್ಶನ ಕ್ರಿಯೆಯ ಕೊಡುವ ವಿಶಿಷ್ಠ ಅನುಭವ ಅನುಭೂತಿ, ಅನುಭವಿಸಿಯೆ ತಿಳಿದುಕೊಳ್ಳಬೇಕು. ಅಷ್ಟು ಚೆನ್ನಾಗಿರುತ್ತದೆ.