ಬನ್ನಿ ಗೆಳೆಯರೇ ಬನ್ನಿ- ಸುನಿಲ್ ಮಲ್ಲೇನಹಳ್ಳಿ
ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ
ಆಚರಿಸುವ ಹೊಸ ವರುಷವ
ಸಂಭ್ರಮಿಸಿ ಸವಿಯುವ
ನವ ಹರುಷವ
ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು
ಒಬ್ಬರನೊಬ್ಬರು ಅಂತರಾಳದಿಂದ ಅರಿತು
ಸಂತಸದ ಸವಿ ಸೊದೆಯಲಿ ಬೆರೆತು
ನಮ್ಮೆಲ್ಲರ ಭವಿಷ್ಯದ ಹಾಡಿಗೆ ಬೆಳಕಾಗುವ ರಸ ಕವಿತೆಯೊಂದು
ರಚಿಸುತಾ ಕಣಿದು ಕುಣಿದು ಹಾಡುವ ಬನ್ನಿ!
ರಚನೆ ಸುನಿಲ್ ಮಲ್ಲೇನಹಳ್ಳಿ
Rating
Comments
ಉ: ಬನ್ನಿ ಗೆಳೆಯರೇ ಬನ್ನಿ- ಸುನಿಲ್ ಮಲ್ಲೇನಹಳ್ಳಿ