ಬನ್ನಿ ಭಾಗವಹಿಸೋಣ ಮರಗಳನ್ನು ಉಳಿಸೋಣ....

ಬನ್ನಿ ಭಾಗವಹಿಸೋಣ ಮರಗಳನ್ನು ಉಳಿಸೋಣ....

ಮುಖ್ಯಮಂತ್ರಿಗಳ ಮನವೊಲಿಸಲು ಬನ್ನಿ ಭಾಗವಹಿಸಿ
 
ಮೇ 9ನೇ ತಾರೀಖು ಬೆಳಿಗ್ಗೆ 8:30 ರಿಂದ 9:30 ವರೆಗೆ
 
ಸ್ಥಳ: ನಂದಾ ರಸ್ತೆ 33 ನೇ ಕ್ರಾಸ್ ಜಂಕ್ಷನ್

ಲಾಲ್ ಬಾಗ್ ಮತ್ತು ಲಕ್ಷ್ಮಣ್ ರಾವ್ ಉದ್ಯಾನವನಗಳನ್ನ ಹಾಳುಗೆಡವೆದೆಯೂ "ನಮ್ಮ ಮೆಟ್ರೋ" ಕಟ್ಟಲು ಸಾಧ್ಯ
 
ಮೆಟ್ರೋ ಬಗ್ಗೆ ತಿಳಿದುಕೊಳ್ಳೋಣ..
ಬೆಂಗಳೂರಿನ ವಿಸ್ತೃತ ಯೋಜನಾ ವರದಿಯ ಪ್ರಕಾರ ದಕ್ಷಿಣ ಭಾಗದಲ್ಲಿ  ಸರ್ಕಾರಿ ಜಾಗದ ಸುಲಭ  ಲಭ್ಯತೆ ಇರುವುದರಿಂದ ಅಲ್ಲಿ ಸಾಲು ನೆಲೆ ಮಾಡಲಾಗಿದೆ. ಈ ಸರ್ಕಾರಿ ಜಾಗವು ಕೆ.ಆರ್.ರಸ್ತೆಯಲ್ಲಿರುವ ಉದ್ಯಾನವನ (ಕಳೆದ ವಷ ಇದನ್ನು ಧ್ವಂಸಗೊಳಿಸಲಾಗಿದೆ), ಲಾಲ್ ಬಾಗ್ (ಪ್ರಸ್ತುತ ಹಾಳುಗೆಡವಲಾಗುತ್ತಿದೆ) ಮತ್ತು ಲಕ್ಷ್ಮಣ್ ರಾವ್ ಉದ್ಯಾನವನ (ಸದ್ಯದಲ್ಲೇ ನಿರ್ನಾಮಗೊಳ್ಳಲಿದೆ) ವನ್ನು ಒಳಗೊಂಡಿದೆ.
 
ಉದ್ಯಾನವನ ಸರ್ಕಾರಿ ಜಾಗವೇ ಅಥವಾ ಸಾರ್ವನಿಕ ಸ್ಥಳವೇ??
ವಿಸ್ತೃತ ಯೋಜನಾ ವರದಿಯ ಪ್ರಕಾರ ಲಕ್ಷ್ಮಣ್ ರಾವ್ ಉದ್ಯಾನವದ ಬಹುಪಾಲು ಉಪನಿಲ್ದಾಣಗಳಿಗಾಗಿ, ಮಾಲ್ ಗಳಿಗಾಗಿ, ಆಟೋ ಹಾಗೂ ಬಸ್ ನಿಲ್ದಾಣಕ್ಕಾಗಿ ಬಳಕೆಯಾಗಲಿದೆ.
ವರದಿಯ ಪ್ರಕಾರ ಮೆಟ್ರೋ ಆರ್ಥಿಕವಾಗಿ ಅಷ್ಟೇನೂ ಲಾಭದಾಯಕವಲ್ಲ. ಇದಕ್ಕಾಗುವ ಖರ್ಚನ್ನು ಸರಿದೂಗಲು ಸದ್ಯದಲ್ಲೇ ವಸತಿ ಯೋಗ್ಯ ಪ್ರದೇಶಗಳನ್ನು ಗದ್ದಲದ ವಾಣಿಜ್ಯ ಪ್ರದೇಶಗಳನ್ನಾಗಿ ಬದಲಾಯಿಸುವ ಯೋಜನೆಯೋ ಮುಂದಿದೆ.
 
ಬೆಂಗಳೂರಿನಲ್ಲಿ ಸದಾ ಬೆಳೆಯುತ್ತಿರುವ ವಾಹನ ದಟ್ಟನೆಗೆ ಇದು ಪರಿಹಾರವೇ??
ಸರ್ಕಾರವು ನವೆಂಬರ್ 22. 2008 ರಂದು ಒಂದು ಆಜ್ನೆಯನ್ನು ಹೊರಡಿಸಿದೆ. ಇದರ ಪ್ರಕಾರ ಮೆಟ್ರೋ ವಿಷಯವಾಗಿ ವಿಧಾನ ಸಭೆ ಅಥವಾ ವಿಧಾನ ಪರಿಷತ್ ನಲ್ಲಿ ಚರ್ಚಿಸುವುದನ್ನು ನಿಷೇದಿಸಲಾಗಿದೆ. ಆದರೆ ಇದು ಕಾನೂನು ಬಾಹಿರವಾದ ಆಜ್ನೆ. ಯಾಕೆಂದರೆ, ಮೆಟ್ರೋ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ನ ಸ್ಥಳವನ್ನು ಅತಿಕ್ರಮಿಸಿದೆ.
 
ಲಾಲ್ ಬಾಗ್ ಅನ್ನು ನಾವು ಹರಾಜು ಹಾಕಬಹುದೇ???
 
 
ಮೆಟ್ರೋ ನಮಗೆ ಬೇಕು ಆದರೆ ಈ ರೀತಿಯಲ್ಲಲ್ಲ.....
ಖಂಡಿತವಾಗಿಯೂ ಇದಕ್ಕೆ ಪರ್ಯಾಯ ದಾರಿ ಇದೆ. ನಮ್ಮ ಪ್ರತಿಭಟನೆಗಳಿಂದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿಗಳು ಹಾಗೂ ಕರ್ನಾಟಕದ ಸಾರಿಗೆ ಸಚಿವರು ಇದಕ್ಕೆ ಪರ್ಯಾಯ ಮಾರ್ಗ ಹಾಗೂ ಸಾಲು ನೆಲೆಯನ್ನು ಹುಡುಕುವುದಾಗಿ ಘೋಷಿಸಿದ್ದಾರೆ. ಅವರು ತಮ್ಮ ವಚನಗಳಿಗೆ ಬದ್ಧರಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.
 
 
ನಮ್ಮ ಉದ್ಯಾನವನಗಳನ್ನು ಉಳಿಸೋಣ. ಮೆಟ್ರೋ ನಿಜವಾಗಿಯೂ ನಮ್ಮ ಮೆಟ್ರೋ ಆಗುವಂತೆ ನೋಡಿಕೊಳ್ಳೋಣ. ಆಯ್ಕೆ ಮಾಡೋಣ ಹಾಗೂ ಆ ಆಯ್ಕೆ ಜೀವನ ಪರ್ಯಂತ ಒಳ್ಳೆ ಫಲವನ್ನು ಕೊಡುವಂತೆ ನೋಡಿಕೋಳ್ಳೋಣ.


Rating
No votes yet

Comments