ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ
ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವಿಧಾನಗಳನ್ನು ಮೊಂಡು ಮತ್ತು ಹಲ್ಲು ಕೊಳೆಸುವ ಬ್ಯಾಕ್ಟೀರಿಯಾಗಳನ್ನು ತೆಗೆಯಲು ಹುಡುಕುತ್ತಲೇ ಇದ್ದರು. ಈಗ ಲೈವ್ ಸೈನ್ಸ್ ಬ್ಯಾಕ್ಟೀರಿಯಾ-ಕೊಲ್ಲಬಲ್ಲ ಪ್ಲಾಸ್ಮಾ ಜೆಟ್ ಗಳು ಹಲ್ಲಿನ ದಂತಕ್ಷಯ ಇತ್ಯಾದಿಗಳನ್ನು ಓಡಿಸುವಲ್ಲಿ ಡ್ರಿಲ್ ಗಳ ಬದಲಿಯಾಗಿ ಉಪಯೋಗಿಸಲ್ಪಡುವವು ಎಂದು ತಿಳಿಸಿದೆ. ಸಂಶೋಧಕರು ಇತ್ತೀಚೆಗೆ ತಾನೆ ಟಾರ್ಚ್ ಮಾದರಿಯ, ಸಣ್ಣ ತಿಳಿ ನೇರಳೆ ಪ್ಲಾಸ್ಮಾ ಬೆಳಕಿನೆಳೆಯೊಂದನ್ನು ಹೊರಸೂಸುವ ಉಪಕರಣವೊಂದು ಬಾಯಿಯಲ್ಲಿಯ ದಂತಕ್ಷಯಕಾತಿ ಬ್ಯಾಕ್ಟೀರಿಯಾಗಳನ್ನು ಹಲ್ಲಿನ ಸ್ವರೂಪವನ್ನು ಬದಲಿಸದೆ ಕೊಲ್ಲಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಕೋಲ್ಡ್ ಪ್ಲಾಸ್ಮಾ ಜೆಟ್ ಗಳು (೧೦೦ ಪ್ಯಾರನ್ ಹೀಟ್ ಅಥವಾ ೩೮ ಡಿ. ಸೆಂಟಿಗ್ರೇಡ್) ಎಷ್ಟು ಕರಾರುವಕ್ಕಾಗಿ ಹಲ್ಲಿನ ರಚನೆಯನ್ನು ಬ್ಯಾಕ್ಟೀರಿಯಾ ಮುಕ್ತಕೊಳಿಸಬಲ್ಲವು ಎಂದು ತಿಳಿಯಲು, ಸಂಶೋದಕರು ಮನುಷ್ಯನ ದೇಹದಿಂದ ತೆಗೆದ ಹಲ್ಲುಗಳನ್ನು, ಬ್ಯಾಕ್ಟೀರಿಯಾಗಳೊಂದಿಗೆ ಬೆರೆಸಿ ಅವನ್ನು ಈ ಜೆಟ್ಗಳ ಮುಂದೊಡ್ಡಿ ಪರೀಕ್ಷಿಸಿದ್ದಾರೆ. ಒಂದು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿ ಇದರ ಫಲಿತಾಂಶ ಪರೀಕ್ಷಿಸಿದಾಗ ಕಂಡು ಬಂದ ವಿಷಯವೇನೆಂದರೆ, ಸೂಕ್ಷ್ಮಜೀವಿಗಳ ಬ್ಯಾಕ್ಟೀರಿಯಾ ಹರಡುವ ಕೋಶಗಳು ಹಾನಿಕೊಂಡಿದ್ದವು. ಪ್ಲಾಸ್ಮಾ ಜೆಟ್ ಚಾಲನೆಯಾದಾಗ ಅದು ಆಮ್ಲಜನಕವನ್ನು ಸುತ್ತಲಿನ ಗಾಳಿಯಲ್ಲಿ ಸೇರಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಕೋಶಗಳನ್ನು ಬೇದಿಸಿ ಬ್ಯಾಕ್ಟೀರಿಯಾ ಸುರಕ್ಷೆಯನ್ನು ಭೇದಿಸಬಲ್ಲ ಅಣುಗಳನ್ನು ಉತ್ಪಾದಿಸುತ್ತದೆ. ಸಂಶೋಧಕರ ಪ್ರಕಾರ ಈ ಸಂಶೋಧನೆ ಇನ್ನು ಮೂರರಿಂದಐದು ವರ್ಷಗಳಲ್ಲಿ ಡೆಂಟಿಸ್ಟ್ರಿಯ ಬಳಕೆಯಲ್ಲಿರುತ್ತದೆ.
Comments
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
In reply to ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ... by shivaram_shastri
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
In reply to ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ... by ಗಣೇಶ